ಉಡುಪಿ ತಾಲೂಕಿನ ಪರ್ಕಳದ ಬಡಗು ಬೆಟ್ಟು ತಿರುವಿನಲ್ಲಿ ಬಳಿ ರಸ್ತೆಯ ಬದಿ ಕಾರು ನಿಲ್ಲಿಸಿ ಪಕ್ಕದ ಅಂಗಡಿಯತ್ತ ತೆರಳುತ್ತಿದ್ದ ವೇಳೆ ಶಿವಮೊಗ್ಗ ಕಡೆಗೆ ವೇಗವಾಗಿ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಶೇಡಿಗುಡ್ಡೆ ನಿವಾಸಿ ರಮೇಶ್ ನಾಯಕ್ ಎನ್ನುವರು ತಲೆಗೆ ಬಲವಾದ ಪೆಟ್ಟು ಬಿದು ಚಿಂತಾಜನಕ ಸ್ಥಿತಿಯಲ್ಲಿ ಇರುವ ಬಗ್ಗೆ ವರದಿಯಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು ಮೆದುಳು ನಿಷ್ಕ್ರಿಯ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಮಣಿಪಾಲದ ಜಿಸಿಸಿಯಯಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ನಾಯಕ್ ರು ಪ್ರತಿದಿನದಂತೆ ಇಂದು ಸಹ ಪತ್ನಿಯನ್ನು ಕೆಎಂಸಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಬಿಟ್ಟು, ಬಡಗುಬೆಟ್ಟು ಬಳಿ ಕಾರು ಇಳಿದು ಬೀಡಾ ತೆಗೆದುಕೊಳ್ಳಲು ಪಕ್ಕದ ರಸ್ತೆಯಲ್ಲಿರುವ ಅಂಗಡಿಗೆ ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿ ಹೊಡೆದ ಕಾರು ಚಾಲಕ ಮತ್ತು ಸ್ಥಳೀಯರ ಸಹಕಾರದಿಂದ ಅವರದ್ದೆ ಕಾರಿನಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು.
ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬಡಗುಬೆಟ್ಟು ತಿರುವು ಇರುವುದು ಈ ಭಾಗ ಇದೊಂದು ಬ್ಲ್ಯಾಕ್ ಸ್ಪಾಟ್ ಆಗಿ ಪರಿಣಮಿಸಿದೆ. ಮತ್ತು ಇಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆಗೆ. ಮಧ್ಯದಲ್ಲಿ ಡಿವೈಡರ್ ಹಾಕದೇ ಇರುವುದು ಮತ್ತು ಗುತ್ತಿಗೆದಾರರು ಬಾಕಿ ಇರಿಸಿದ ಕಾಮಗಾರಿ ಎದ್ದು ಕಾಣುತ್ತದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿಯ ಪೂರ್ಣ ಕಾಮಗಾರಿ ನಡೆದಿಲ್ಲ ಅರ್ಧಕ್ಕೆ ನಿಲ್ಲಿಸಿದ್ದಾರೆ, ಇದೀಗ ಈ ಬ್ಲ್ಯಾಕ್ ಸ್ಪಾಟ್ ಸ್ಪಾಟ್ ಆಗಿ ಐದು ಜನ ಪಾದಾಚಾರಿಗಳೇ ಈಗಾಗಲೇ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
