- ವಿಟ್ಟಸಂದ್ರದ ಕಸದ ರಾಶಿಯಿಂದ ಹೊರಹೊಮ್ಮುವ ದುರ್ವಾಸನೆಯು ಆರೋಗ್ಯಕ್ಕೆ ಅಪಾಯ
- ಬಿಬಿಎಂಪಿ ಅಧಿಕಾರಿಗಳಿಗೆ ನೋಟಿಸ್ ನೀಡಿದ ಉಪ ಲೋಕಾಯುಕ್ತ ಪೊಲೀಸರು
ಬೆಂಗಳೂರಿನ ವಿಟ್ಟಸಂದ್ರದ ಡಂಪಿಂಗ್ ಯಾರ್ಡ್‌ನಲ್ಲಿ ಕಸದ ರಾಶಿ ತೆರುವುಗೊಳಿಸುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ವಿಫಲವಾಗಿದ್ದು, ಈ ವಿರುದ್ಧ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿದ್ದಾರೆ.
“ವಿಟ್ಟಸಂದ್ರದ ಕಸದ ರಾಶಿಯಿಂದ ಹೊರಹೊಮ್ಮುವ ದುರ್ವಾಸನೆಯು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ, ಆ ಪ್ರದೇಶದ ನಿವಾಸಿಗಳಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತಿದೆ” ಎಂಬ ವರದಿಗಳ ನಂತರ ಉಪ ಲೋಕಾಯುಕ್ತರು ದೂರು ದಾಖಲಿಸಿಕೊಂಡಿದ್ದಾರೆ.
ಉಪ ಲೋಕಾಯುಕ್ತ ಪೊಲೀಸರು ಬಿಬಿಎಂಪಿ ಜಂಟಿ ಆಯುಕ್ತ ಬೊಮ್ಮನಹಳ್ಳಿ ಹಾಗೂ ಇತರ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ಕಸವನ್ನು ನಿರ್ವಹಿಸುವಲ್ಲಿ ಬಿಬಿಎಂಪಿ ವಿಫಲವಾಗಿರುವುದು ಕರ್ತವ್ಯಲೋಪ ಮಾತ್ರವಲ್ಲದೆ ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 ರ ಸೆಕ್ಷನ್ 2 (1) ರೊಳಗೆ ದುರಾಡಳಿತಕ್ಕೆ ಸಮಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯ ಸರ್ಕಾರದ ಬಜೆಟ್ | ₹7 ಸಾವಿರ ಕೋಟಿ ಅನುದಾನಕ್ಕೆ ಬಿಬಿಎಂಪಿ ಮನವಿ
ಯಲಚೇನಹಳ್ಳಿ ಕೆರೆಗೆ ಕೊಳಚೆ ನೀರು ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಅನಗತ್ಯ ತ್ಯಾಜ್ಯವನ್ನು ತಡೆಯಲು ವಿಫಲವಾದ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಬಿಬಿಎಂಪಿ ಹಾಗೂ ಕೆಎಸ್‌ಪಿಸಿಬಿ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದೆ.