ಸಿಸಿಎಲ್ 2025 | ಕರ್ನಾಟಕ – ಪಂಜಾಬ್‌ ಆಟಗಾರರ ನಡುವೆ ಗಲಾಟೆ; ಸಿಟ್ಟಿಗೆದ್ದ ಸುದೀಪ್

Date:

Advertisements

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ (ಸಿಸಿಎಲ್‌)-2025ರ ಪಂದ್ಯಾವಳಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಮತ್ತು ಪಂಜಾಬ್ ದಿ ಶೇರ್ ತಂಡದ ಆಟಗಾರರ ನಡುವೆ ಗಲಾಟೆ ನಡೆದಿದೆ. ಮೈದಾನದಲ್ಲೇ ನಡೆದ ಗಲಾಟೆ ವೇಳೆ ನಟ ಸುದೀಪ್‌ ಸಿಟ್ಟಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶನಿವಾರ ಸಂಜೆ, ಕರ್ನಾಟಕ ಮತ್ತು ಪಂಜಾಬ್ ನಡುವೆ ಸೂರತ್‌ನ ಲಾಲ್‌ಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ಪಂದ್ಯದಲ್ಲಿ ನಡೆದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮವಾಗಿ ಬ್ಯಾಟಿಂಗ್‌ ನಡೆಸುತ್ತಿತ್ತು. ಆದಾಗ್ಯೂ, 6ನೇ ಓವರ್‌ನಲ್ಲಿ ಚಂದನ್ ಕುಮಾರ್ ಬೌಲಿಂಗ್ ಮಾಡಲು ಬಂದಾಗ, ಉಭಯ ತಂಡಗಳ ಆಟಗಾರರ ನಡುವೆ ವಾಗ್ವಾದ ನಡೆದಿದೆ.

ಬೌಲಿಂಗ್ ಮಾಡುತ್ತಿದ್ದ ಚಂದನ್, ಅರ್ಧ ಸ್ಕ್ರೀಸ್‌ಗೆ ಬಂದು ಚೆಂಡನ್ನು ಎಸೆಯದೆ ವಾಪಸ್‌ ಹೋಗಿದ್ದಾರೆ. ಆ ಬಳಿಕ, ಚಂದನ್‌ ಬೌಲಿಂಗ್‌ಅನ್ನು ಪಂಜಾಬ್‌ನ ಬ್ಯಾಟರ್ ನಿಂಜಾ ಅರ್ಧಕ್ಕೆ ತಡೆದಿದ್ದಾರೆ. ತಾಳ್ಮೆ ಕಳೆದುಕೊಂಡ ಚಂದನ್ ವಾಗ್ವಾದಕ್ಕೆ ಇಳಿದಿದ್ದಾರೆ.

Advertisements

ಚಂದನ್ ಮತ್ತು ನಿಂಜಾ ನಡುವಿನ ಜಗಳವನ್ನು ತಡೆಯಲು ಸುದೀಪ್‌ ಬಂದಿದ್ದಾರೆ. ಆದರೆ, ನಿಂಜಾ ಅವರು ಸುದೀಪ್ ಜೊತೆ ಜೋರು ಜಗಳಕ್ಕಿಳಿಸಿದ್ದಾರೆ. ಇದರಿಂದ, ಸುದೀಪ್ ಕೂಡ ಕೋಪ ಮಾಡಿಕೊಂಡಿದ್ದು, ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲ ಸಮಯದ ನಂತರ, ಎಲ್ಲರೂ ಸಮಾಧಾನಗೊಂಡು ಆಟವನ್ನು ಮುಂದುವರೆಸಿದ್ದಾರೆ.

ಪಂದ್ಯದಲ್ಲಿ, ಮೊದಲ ಇನ್ನಿಂಗ್ಸ್‌ನಲ್ಲಿ ಪಂಜಾಬ್ ತಂಡವು 10 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 121 ರನ್‌ ಕಲೆಹಾಕಿತು. 121 ರನ್‌ಗಳ ಗುರಿಯ ಬೆನ್ನತ್ತಿದ ಕರ್ನಾಟಕ ತಂಡ 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿ ಹಿನ್ನಡೆ ಅನುಭಿವಿತು. ಆ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ ತಂಡ 10 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟದೊಂದಿಗೆ 94 ರನ್‌ಗಳಿಸಿದರೆ, ಕರ್ನಾಟಕ ತಂಡ 8 ವಿಕೆಟ್ ನಷ್ಟದೊಂದಿಗೆ 122 ರನ್ ಪೇರಿಸಿತು. ಆದಾಗ್ಯೂ, ಕರ್ನಾಟಕ ತಂಡ 2 ರನ್‌ಗಳ ಅಂತರದಲ್ಲಿ ಸೋಲುಂಡಿತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇರಳ | ಟ್ರಕ್‌ಗೆ ಕಾರು ಡಿಕ್ಕಿ; ಮಲಯಾಳಂ ನಟನಿಗೆ ಗಾಯ

ಮಲಯಾಳಂ ನಟ ಬಿಜು ಕುಟ್ಟನ್‌ ಅವರು ಇಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ...

RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್...

‘ಶೋಲೆ’ @ 50: ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲ

'ಶೋಲೆ' ಚಿತ್ರ ಬಿಡುಗಡೆಯಾಗಿ 50 ವರ್ಷಗಳಾದರೂ ಇವತ್ತಿಗೂ ಅದೇ ತಾಜಾತನ, ಅದೇ...

ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್‌, ಪವಿತ್ರಾ ಗೌಡ ಜಾಮೀನು ಭವಿಷ್ಯ ಇಂದು ತೀರ್ಮಾನ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾ ಗೌಡ...

Download Eedina App Android / iOS

X