‘ಹುಳಿಯಾರು ಸರ್ಕಾರಿ ಶಾಲಾ ಮಕ್ಕಳ ಮತಾಂತರಕ್ಕೆ ಯತ್ನ ನಡೆದಿದೆ ಎಂಬುದು ಸುಳ್ಳು’

Date:

Advertisements

ತುಮಕೂರು ಜಿಲ್ಲೆಯ ಹುಳಿಯಾರು ಪಬ್ಲಿಕ್ ಶಾಲೆಯ ಮಕ್ಕಳನ್ನು ಮತಾಂತರ ಮಾಡಲು ಯತ್ನಿಸಲಾಗಿದೆ ಎಂಬ ಆರೋಪದ ವಿರುದ್ಧ ಕಾಂಗ್ರೆಸ್ ಮುಖಂಡ ಡಾ.ಎಸ್.ಎನ್.ಸತೀಶ್ ಸಾಸಲು ಕಿಡಿಕಾರಿದರು.

ಇಂದು ಸಾಸಲು-ಗೊಲ್ಲರಹಟ್ಟಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, “ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಡವರ ಮಕ್ಕಳ ಅನುಭವಾತ್ಮಕ ಕಲಿಕೆಯ ಅವಕಾಶಗಳನ್ನು ನಿರ್ಬಂಧಿಸಲು ಯತ್ನಿಸುತ್ತಿರುವ ಶಿಕ್ಷಣ ವಿರೋಧಿಗಳ ವಿರುದ್ಧ ಎಚ್ಚರಿಕೆ ವಹಿಸಬೇಕು. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಅಪಪ್ರಚಾರ ಮಾಡಿ, ಸುಳ್ಳು- ವದಂತಿಗಳನ್ನು ಹರಡಿ, ಸಮಾಜದಲ್ಲಿ ಕ್ಷೋಭೆ ಉಂಟುಮಾಡಿ ಶಾಂತಿ ಕದಡಲು ಯತ್ನಿಸುತ್ತಿರುವ ಮನುಷ್ಯ ವಿರೋಧಿಗಳ ವಿರುದ್ಧ ಗಮನ ಹರಿಸಬೇಕು” ಎಂದರು.

“ಹುಳಿಯಾರಿನಲ್ಲಿ ಫೆಬ್ರವರಿ 11ರಂದು ನಡೆದ ಘಟನೆಯನ್ನು ಸೂಕ್ಷ್ಮವಾಗಿ ನೋಡಿದಾಗ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಘಟನೆಯನ್ನು ತಿರುಚಿ ಕೆಲವರು ಗುಲ್ಲು ಹಬ್ಬಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

Advertisements

“ಹುಳಿಯಾರಿನ ಕರ್ನಾಟಕ ಪಬ್ಲಿಕ್ ಶಾಲೆಯ 110 ಮಕ್ಕಳನ್ನು ಫೆಬ್ರವರಿ 11ರಂದು ಕೈಗಾರಿಕಾ ಪ್ರದೇಶದ ವೀಕ್ಷಣೆಗಾಗಿ ಶಿಕ್ಷಕರು ಕರೆದುಕೊಂಡು ಹೋಗಿದ್ದರು. ಕಲ್ಪತರು ಬ್ರಿಕ್ಸ್ ಫ್ಯಾಕ್ಟರಿಯನ್ನು ತೋರಿಸಿ, ಹಿಂತಿರುಗುವಾಗ ಕನಕದಾಸ ಸರ್ಕಲ್‌ನಲ್ಲಿ ಕನಕದಾಸರ ಪ್ರತಿಮೆಯನ್ನು ತೋರಿಸಿದ್ದರು. ಆಗ ಮಕ್ಕಳು ಪಕ್ಕದಲ್ಲೇ ಇರುವ ಚರ್ಚ್ ನೋಡಲು ಒತ್ತಾಯಿಸಿದ್ದರು. ಮಕ್ಕಳ ಒತ್ತಾಯದ ಮೇರೆಗೆ ಶಿಕ್ಷಕರು ಒಳಗಡೆ ಕರೆದುಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ಚರ್ಚ್‌ನಲ್ಲಿ ದಿನನಿತ್ಯದ ಚಟುವಟಿಕೆ ನಡೆಯುತ್ತಿತ್ತು. ಮೊದಲೇ ಚರ್ಚ್ ಒಳಗೆ ಸಾಕಷ್ಟು ಜನ ಇದ್ದರು. ಹೀಗಾಗಿ ಒಂದಿಷ್ಟು ಮಕ್ಕಳು ಚರ್ಚ್ ಒಳಗೆ, ಒಂದಿಷ್ಟು ಮಕ್ಕಳು ಹೊರಗಡೆ ಇದ್ದರು. ಆ ವೇಳೆ ಪತ್ರಕರ್ತರಲ್ಲದ ಕೆಲವರು ಪ್ರವೇಶಿಸಿ, ವಿಡಿಯೊ ಮಾಡಿಕೊಂಡು, ಮತಾಂತರ ನಡೆಯುತ್ತಿತ್ತು ಎಂದು ಹರಿಬಿಟ್ಟಿದ್ದಾರೆ” ಎಂದು ವಿವರಿಸಿದರು.

ಇದನ್ನೂ ಓದಿ:ತುಮಕೂರು | ರಾಜಕೀಯ ಪರಿವರ್ತನೆಗೆ ಜಾಗೃತ ಕರ್ನಾಟಕ ಸೇರಿ: ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಚರ್ಚ್‌ಗಾಗಲೀ, ಮಾಧ್ಯಮಗಳಿಗಾಗಲೀ, ಶಾಲೆಗಾಗಲೀ ಸಂಬಂಧಪಡದವರು ಚಿತ್ರೀಕರಣ ಮಾಡಿದ್ದರು. ಅಲ್ಲಿ ಮತಾಂತರ ನಡೆದದ್ದು ನಿಜವಾಗಿದ್ದರೆ, ಸಾಮಾಜಿಕ ಜವಾಬ್ದಾರಿ ಇದ್ದ ಇವರೇಕೆ ಪ್ರಶ್ನಿಸಲಿಲ್ಲ? ವಾಸ್ತವದಲ್ಲಿ ಅಂತಹ ಕೃತ್ಯವೇ ನಡೆದಿಲ್ಲ. ನೂರಾರು ಮಕ್ಕಳನ್ನು ಕರೆದುಕೊಂಡು ಹೋಗಿ ಈ ರೀತಿಯಲ್ಲಿ ಮತಾಂತರ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X