ಬಿಟ್ಟಿ, ಭಕ್ತರು ಮತ್ತು ಬಸವಣ್ಣ: ಒಂದು ಚಿಂತನೆ

Date:

Advertisements
ಸಾಮಾನ್ಯ ಜನರು 28% ಜಿಎಸ್‌ಟಿ. ಕಟ್ಟುತ್ತಿಲ್ಲವೆ? ಕಣ್ಣಿಗೆ ಕಾಣದಿರುವ ಮೂಲಗಳಿಂದಲೂ ಸರ್ಕಾರ ಹಣ ಬಾಚುತ್ತಿಲ್ಲವೆ? ಅದೆ ಬಡವ ಕುಡಿಯುವ ದಾರು, ಸೇದುವ ಸಿಗರೇಟುಗಳಿಂದ ಸರಕಾರಕ್ಕೆ ಎಷ್ಟು ತೆರಿಗೆ ಸಂದಾಯವಾಗುತ್ತದೆ?

ನಿನ್ನೆ ಸ್ನೇಹಿತರ ಮನೆಗೆ ಹೋಗಿದ್ದೆ. ಸಹಜವಾಗಿ ಬದಲಾದ ಸರಕಾರದ ಬಗ್ಗೆ ಮಾತು ಬಂತು. ಜನಪರ ವಾಗ್ದಾನಗಳನ್ನು ಕಾರ್ಯರೂಪಕ್ಕೆ ತರುತ್ತಿರುವ ಸರಕಾರದ ಬಗ್ಗೆ ನಾನು ಮೆಚ್ಚುಗೆ ವ್ಯಕ್ತಪಡಿಸಿದೆ. ಎಂದೂ ಪ್ರತಿಕ್ರಿಯೇ ನೀಡದ ಸ್ನೇಹಿತರೊಬ್ಬರು ‘ನಾವು ಕಟ್ಟಿದ ತೆರಿಗೆ ದುಡ್ಡಿನಲ್ಲಿ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆ’ ಎಂದರು ಅಸಹನೆಯಿಂದ. ಅವಕ್ಕಾದೆ.

‘ತೆರಿಗೆ’ ಗುಂಗಿ ಹುಳವಾಯಿತು. ತೆರಿಗೆಯ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಅರ್ಥಮಂತ್ರಿ ಬಸವಣ್ಣನವರು ಮೊದಲಿಗೆ ನೆನಪಾದವರು. “ಇದ್ದವರು ಇಲ್ಲದವರೊಂದಿಗೆ ಹಂಚಿಕೊಂಡು ತಿನ್ನೀ (ದಾಸೋಹ)” ಎಂದು ಮೊಟ್ಟ ಮೊದಲ ಮಾನವಪರ ಮಾನವರಿಂದ ಮಾನವರಿಗಾಗಿ ತೆರಿಗೆಯನ್ನು ಹೇರಿರಲಿಲ್ಲವೆ? ಅಷ್ಟೇಕೆ ದಾಸೋಹವು ಒಂದು ವಿದವಾದ ತೆರಿಗೆ ಅಲ್ಲವೆ? ಆದರೆ ಇಲ್ಲಿ ಕೊಡುವವನ ಕೈ ಮೇಲಾಗಲಿ ತಗೆದುಕೊಳ್ಳುವವನ ಕೈ ಕೇಳಗಾಗಲಿ ಇರದು. ಒಂದು ತಟ್ಟೆಯಲ್ಲಿರುವ ಅನ್ನವನ್ನು ಒಟ್ಟಿಗೆ ತಿನ್ನಿ ಎಂದಿದ್ದರು ಶರಣರು. ಹೀಗೆಯೇ ತಿನ್ನಬೇಕೆಂಬ ಒತ್ತಾಯದ ಕಾನೂನು ತರಲಿಲ್ಲ ಅವರು. ಆದರೆ ಮನಃ ಪರಿವರ್ತಿಸುವ ಕೆಲಸ ಮಾಡಿದರು.

ಬಸವಣ್ಣನವರ ಆದಿಯಾಗಿ ಪ್ರಪಂಚದ ಎಲ್ಲ ಸರಕಾರಗಳು ಸಹ ಇದ್ದವರಿಂದ ಕಸಿದು ಇಲ್ಲದವರಿಗೆ ಹಂಚುವ ಕೆಲಸವನ್ನೆ ಮಾಡುತ್ತಿಲ್ಲವೆ?

Advertisements

ಅತಿ ಪುರಾತನ ಎಂದು ನಂಬುವ ಐತರೇಯ ಬ್ರಾಹ್ಮಣದಲ್ಲಿ (ಭಾಗ 7, 29) ‘ತೆರಿಗೆ’ಯ ಬಗ್ಗೆ ಉಲ್ಲೇಖವಿದೆ. ‘ಕರ ಅಥವಾ ಕಾಣಿಕೆಯನ್ನು ಇನ್ನೊಬ್ಬರಿಗೆ ಕೊಡಬೇಕಾದವರು, ಇನ್ನೊಬ್ಬರನ್ನು ಪೋಷಿಸಲೇ ಬೇಕಾದವರು “ಇಷ್ಟ ಬಂದಾಗ ದಬ್ಬಾಳಿಕೆಗೆ ಒಳಪಡಿಸಬಹುದಾದವರು’ (ಯಥಾಕಾಮಜ್ಯೇಯಃ) ಎಂಬ ವಾಕ್ಯವು ತೆರಿಗೆ ವೇದಗಳ ಕಾಲದಲ್ಲಿಯೂ ಇತ್ತೆಂಬುದಕ್ಕೆ ಸಾಕ್ಷಿ ಒದಗಿಸುತ್ತದೆ.

‘ಇಷ್ಟ ಬಂದಾಗ ದಬ್ಬಾಳಿಕೆಗೆ ಒಳಪಡಿಸಬಹುದಾದವರು’ ಎಂದರೇನು? ಆಳಿಸಿಕೊಳ್ಳುವವರು (subjects) ಅಲ್ಲವೆ? ಅಲ್ಲಿಯೂ ರೂಲರ್ ಮತ್ತು ರೂಲ್ಡ ಎರಡು ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎಂದಲ್ಲವೆ?

ಮೌರ್ಯರ ಕಾಲದಿಂದಲೂ ನಾಗರಿಕನ ಸಂಪತ್ತಿನ 1/6 ಭಾಗವನ್ನು ರಾಜನಿಗೆ ತೆರಿಗೆ ಕೊಡಲಾಗುತ್ತಿತ್ತೆಂಬ ಇತಿಹಾಸ ಹೇಳುತ್ತದೆ. ಪ್ರಜಾಪ್ರಭುತ್ವ ಅಥವಾ ಕಮ್ಯುನಿಷ್ಟ ಸರಕಾರಗಳು ಪ್ರಜೆಗಳು ಕಟ್ಟಿದ ತೆರಿಗೆಯಿಂದಲೇ ರಾಜ್ಯಭಾರ ಮಾಡಬೇಕಲ್ಲವೆ?

ಮೋದಿಯವರ ಎಕಾನಮಿ ಏನು ತರೆಗೆ ರಹಿತ ಎಕಾನಮಿಯೆ? ನಾವು ಕೊಟ್ಟ ತೆರಿಗೆ ಹಣದಿಂದಲೆ ಅಲ್ಲವೆ ಅವರು ಚಿನ್ನದರಸ್ತೆ ಮಾಡಿದ್ದು (ಎಲ್ಲಿವೆ ಎಂದು ಕೇಳಿಲ್ಲ). ಕೋವಿಡ್ ಸಮಯದಲ್ಲಿ ಇಪ್ಪತ್ತುಲಕ್ಷ ಕೋಟಿ ಹಣವನ್ನು ಬಡವರಿಗೆ ಹಂಚಿದ್ದು (ಎಂದು ಯಾರಿಗೆ, ಯಾವಾಗ ಕೊಟ್ಟರು ಗೊತ್ತಿಲ್ಲ).ಅದು ತೆರಿಗೆ ಹಣ ಅಲ್ಲವೆ? ಕರ್ನಾಟಕದಲ್ಲಿ ತಮ್ಮ ಪಕ್ಷದ ಚುನಾವಣೆ ಪ್ರಚಾರಕ್ಕೆ ಬಂದ 145 ಕೋಟಿ ಖರ್ಚಿನ ಬಾಬತ್ತು ಕೇವಲ ಅವರ ಭಕ್ತರ ತೆರಿಗೆ ಹಣದಿಂದ ಮಾತ್ರವೆ? ಮಾಡದೆ ಇರುವ ಕೆಲಸಗಳಿಗೆ, ಮಾಡಿದ್ದೇವೆ ಎಂದು ಲೇಬಲ್ ಅಂಟಿಸಿದ ಹಿಂದಿನ ಸರಕಾರದ 44 ಕೋಟಿ ಜಾಹಿರಾತಿನ ಖರ್ಚು ತೆರಿಗೆ ಹಣದಿಂದಲೆ ಕಟ್ಟಿಲ್ಲವೆ? ಅಂದಿಲ್ಲದ ಅಸಹನೆ ಇಂದೇಕೆ?

ಬಿಟ್ಟಿ ಹಣ ಎಂದು ರಾಡಿ ಎರಚುವ infosis ಶ್ರೀಮಂತರು, ಯಾರ ಹಣದಿಂದ ಶ್ರೀಮಂತರಾದರು? ಸರಕಾರಗಳಿಂದ ಸಬ್ಸಿಡಿ ರೇಟ್ನಲ್ಲಿ ಭೂಮಿ, ನೀರನ್ನು ಪಡೆದಿರುವ ಇಂತಹವರು ಸಂಪತ್ತನ್ನು ಗಳಿಸಿದ ನಂತರ ತಾವು ಪಡೆದಿರುವ ಭೂಮಿಯನ್ನು ಮರಳಿ ಸರಕಾರಕ್ಕೆ ಹಿಂತುರಿಗಿಸಿದ್ದಾರೆಯೇ? ಆವರಿಗೇಕೆ boot ಅಪ್ಲೈ ಮಾಡಬಾರದು? ಪ್ರಾರಂಭದಲ್ಲಿ ‘ಟ್ಯಾಕ್ಸ ಹಾಲಿಡೆ’ ಪಡೆದ ಕಾರ್ಪೋರೇಟ್ ಕಂಪನಿಗಳು ಲಾಭದಾಯಕ ಸ್ಥಿತಿ ತಲುಪಿದಾಗ ಹಿಂದಿನ ಹಳೆ ಬಾಕಿಯನ್ನೇಕೆ ತೀರಿಸಬಾರದು?

ಶ್ರೀಮಂತರಿಗಾಗಿ ಮೀಸಲಾದ ವಿಮಾನಯಾನ ಕಂಪನಿಗಳು ಎಷ್ಟು ಭಾರಿ ನಷ್ಟ ಅನುಭವಿಸಿಲ್ಲ? ಆ ನಷ್ಟವನ್ನು ಎಷ್ಟು ಭಾರಿ ಸರಕಾರಗಳು ತುಂಬಿಕೊಟ್ಟಿಲ್ಲ? ಬಡವನಿಗೆ ಉಚಿತವಾಗಿ ಕೊಟ್ಟಿದ್ದನ್ನು ಬಿಟ್ಟಿಯನ್ನುವದಾದರೆ ಶ್ರಿಮಂತರಿಗೆ ಕೊಟ್ಟಿರುವುದನ್ನು ಬಿಕ್ಷೇ ಎನ್ನಬೇಕೆ?

ಆದಾನಿ ಅಂಬಾನಿಗಳಿಗೆ, ಮೋದಿಗಳಿಗೆ ಸಾಲ ಮನ್ನಾ ಮಾಡುವ ಬ್ಯಾಂಕುಗಳು ಬಡವರ ಮಾನಹರಾಜು ಮಾಡಿ ಸಾಲವನ್ನು ವಸೂಲಿ ಮಾಡುತ್ತಿಲ್ಲವೆ? ಬ್ಯಾಂಕಿನ ಅಭಿವೃದ್ಧಿಯಲ್ಲಿ ಕೇವಲ ಶ್ರೀಮಂತರ ಪಾಲು ಮಾತ್ರ ಇದೆಯೇ?

ಈ ಸುದ್ದಿ ಓದಿದ್ದೀರಾ?: ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ | ದುರ್ಬಲರನ್ನು ಒಳಗೊಳ್ಳುವ ಅಭಿವೃದ್ಧಿಗೆ ಪೂರಕ

ಸರ್ಕಾರದ ಸಹಾಯಗಳಿಂದ ಎದ್ದು ನಿಂತ ಕಾರ್ಪೋರೆಟ್ ಕಂಪನಿಗಳು ತಮ್ಮ ಲಾಭದಲ್ಲಿ 30% ತೆರಿಗೆ ಕಟ್ಟಿದರೆ ಅದರಲ್ಲಿ ದುಡಿಯುವ ನೌಕರ ತನ್ನ ಬೆವರಿನ ಹಣದಲ್ಲಿ ಇವರಿಗಿಂತ ಹೆಚ್ಚಿನ ತೆರಿಗೆ ನೀಡುತ್ತಿಲ್ಲವೆ? ಅದೇಕೆ ಜನ ಸಾಮಾನ್ಯ 28% ಜಿಎಸ್‌ಟಿ. ಕಟ್ಟುತ್ತಿಲ್ಲವೆ? ಕಣ್ಣಿಗೆ ಕಾಣದಿರುವ ಮೂಲಗಳಿಂದಲೂ ಸರ್ಕಾರ ಹಣ ಬಾಚುತ್ತಿಲ್ಲವೆ? ಅದೆ ಬಡವ ಕುಡಿಯುವ ದಾರು, ಸೇದುವ ಸಿಗರೇಟುಗಳಿಂದ ಸರಕಾರಕ್ಕೆ ಎಷ್ಟು ತೆರಿಗೆ ಸಂದಾಯವಾಗುತ್ತದೆ? ಅವನು ಬಳಸುವ TVS ತೆರಿಗೆ ರಹಿತವಾಗಿದೆಯೆ? ಬಡವ ಬಳಸುವ ಇಂದನ ತೆರಿಗೆ ರಹಿತವೆ? ಬೆವರು ಸುರಿಸಿ ಬಳಲಿ ಬೆಂಡಾದ ಬಡವ ಕುಡಿಯುವ ಒಂದು ಕಪ್ಪುಚಹಾ, ತಿನ್ನುವ ಅನ್ನ ತೆರಿಗೆ ರಹಿತವೆ?

ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ 70% ತೆರಿಗೆ ಕಟ್ಟುವ ದೇಶ ನಮ್ಮದು. ತೆರಿಗೆಯಲ್ಲಿ ಎಲ್ಲರ ಪಾಲು ಇದೆ. ಇದು ಕೇವಲ ಬಿಜೆಪಿಯವರ ತೆರಿಗೆ ಮಾತ್ರವಲ್ಲ.

ಬಿಜೆಪಿಗೆ ಮತ ನೀಡಿದ 36% ಭಕ್ತರು ಕಾಂಗ್ರೆಸ್ ಸರಕಾರದ ಬಿಟ್ಟಿ ಬಾಗ್ಯಗಳು ತಮಗೆ ಬೇಡ ಎಂದು ತಿರಸ್ಕರಿಸಿ ಆ ನಂತರ ಆಲೋಚನೆ ಮಾಡಲಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X