‘ನಮ್ಮ ಕರ್ನಾಟಕ-ನಮ್ಮ ಮಾದರಿ’, ‘ನಿರ್ಮಲಾ ಸೀತಾರಾಮನ್ ಕೃಷ್ಣ ಭೈರೇಗೌಡ ಮುಖಾಮುಖಿ’, ‘ಕರ್ನಾಟಕಕ್ಕೆ ಒಕ್ಕೂಟ ಸರ್ಕಾರದ ಅನ್ಯಾಯ’ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಗಮನಸೆಳೆದಿದ್ದ, ಜಾಗೃತ ಕರ್ನಾಟಕವು ಒಂದು ರಾಜಕೀಯ ಸಂಘಟನೆಯಾಗಿ ಘೋಷಣೆಯಾಗಿದೆ..
ವಿಜಯಪುರ ನಗರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಹಾಲ್‌ನಲ್ಲಿ ಭಾನುವಾರ ಕಾರ್ಯಕ್ರಮ ನಡೆದಿದ್ದು, ʼಬದಲಾವಣೆಗಾಗಿ ರಾಜಕೀಯ – ರಾಜಕೀಯದ ಬದಲಾವಣೆ’ ಎಂಬ ಘೋಷಣೆಯೊಂದಿಗೆ, ರಾಜಕೀಯದ ಪರಿವರ್ತನೆಯ ಗುರಿ ಹೊಂದಿರುವ ಜಾಗೃತ ಕರ್ನಾಟಕವು ರಾಜ್ಯದ ಆರು ವಲಯಗಳಲ್ಲಿ ಕಾರ್ಯಕ್ರಮ ಜರುಗಿಸಿತು. ಅದರ ಭಾಗವಾಗಿ ವಿಜಯಪುರ ವಲಯದ ಕಾರ್ಯಕ್ರಮವು ನಗರದ ಸಿಎನ್‌ಎಫ್‌ಇ ಕಚೇರಿಯಲ್ಲಿ ಜಾಗೃತ ಕರ್ನಾಟಕದ ಲೋಗೊ ಬಿಡುಗಡೆ ಮೂಲಕ ರಾಜಕೀಯ ಸಂಘಟನೆಯೆಂದು ಘೋಷಿಸಿಕೊಂಡಿತು.
ಕಾರ್ಯಕ್ರಮದ ಪ್ರಸ್ತಾವನೆ ಹಾಗೂ ಮುನ್ನೋಟದ ಕುರಿತು ಶ್ರೀನಾಥ ಎಸ್ ಪೂಜಾರಿ ಮಾತನಾಡಿದರು. ಕುಮಾರಿ ಭಾಗ್ಯಶ್ರೀ ಬಡಿಗೇರ, ವೇದಾ ಮುರಗೊಡ ಹಾಗೂ ಇತರರು ಲೋಗೊ ಬಿಡುಗಡೆ ಮಾಡಿದರು. ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆ ಕುಮಾರಿ ಆರತಿ ಶಹಾಪುರ, ಜಾಗೃತ ಕರ್ನಾಟಕದ ಸಂಕಲ್ಪ ಬೋಧಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಸಾಹಿತಿಗಳು ಸ್ವಾವಲಂಬಿಗಳಾಗಬೇಕು: ಶ್ರೀಧರ ಬಳಿಗಾರ
ಜಮಾಅತೆ ಇಸ್ಲಾಮೀ ಹಿಂದ್ ಮುಖಂಡ ಯು ಎಚ್ ಖದೀರ, ಅಸಂಘಟಿತ ಮಹಿಳಾ ಕಾರ್ಮಿಕರ ಸಂಘದ ಜಿಲ್ಲಾ ಮುಖಂಡೆ ಡಾ. ಭುವನೇಶ್ವರಿ ಕಾಂಬಳೆ, ಕೆಎಂಎ ಜಿಲ್ಲಾಧ್ಯಕ್ಷ ಇಮಾಮಸಾಬ ಮುಲ್ಲಾ, ಡಿವಿಪಿ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಲ್ಯಾಬ್ ಟೆಕ್ನಿಶಿಯನ್ ಅಶೋಷಿಯೇಷನ್ ಜಿಲ್ಲಾಧ್ಯಕ್ಷ ಶ್ರೀಕಾಂತ ಚಿಮ್ಮಲಗಿ, ರಮೆಶ ಹಾದಿಮನಿ, ಎಚ್ ಎಚ್ ದೊಡಮನಿ, ಎಂ ಎ ಭಕ್ಷ್ಮೀ, ಸಂಜೀವ ಪಾಂಡೆ ಸೇರಿದಂತೆ ಹಲವರು ಇದ್ದರು.
