“ರಾಜ್ಯ ಬಜೆಟ್ ಅಧಿವೇಶನ ಪ್ರಾರಂಭವಾಗಲಿರುವ 2025 ಮಾರ್ಚ್ 3ರಿಂದ ಸಿಐಟಿಯು ನೇತೃತ್ವದಲ್ಲಿ ವಿವಿಧ ವಿಭಾಗದ ಕಾರ್ಮಿಕರು ತಮ್ಮ ಬೇಡಿಕೆಗಳಾಗಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾರ್ಚ್ ಮೂರರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಅವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ” ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ್ ಪತ್ತಾರ್ ಪತ್ರಿಕಾ ಘೋಷ್ಠಿಯಲ್ಲಿ ಹೇಳಿದರು.
ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ಕಾರ್ಮಿಕ ವರ್ಗದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಇತ್ತೀಚಿಗೆ ಮಂಡಿಸಿದ 2025 26ನೇ ಸಾಲಿನ ಬಜೆಟ್ ನಲ್ಲಿ 99ರಷ್ಟು ದುಡಿಯುವ ವರ್ಗಕ್ಕೆ ದ್ರೋಹ ಬಗೆದಿದೆ. ಈ ದೇಶದ ಒಂದು ರಷ್ಟು ಇರುವ ಶ್ರೀಮಂತರ ಪಕ್ಷಪಾತಿಯಾಗಿದೆ. ಇದುವರೆಗೂ ನಮ್ಮ ಸಾರ್ವಜನಿಕ ಕ್ಷೇತ್ರಗಳಾದ ವಿದ್ಯುತ್, ತೈಲ, ಸಾರಿಗೆ, ಮತ್ತು ಹೆದ್ದಾರಿಗಳು ಕಲ್ಲಿದ್ದಲು, ಇತರ ಖನಿಜಗಳು ಸೇರಿದಂತೆ ಅಮೂಲ್ಯವಾದ ಮೂಲ ಸೌಕರ್ಯಗಳು, ಕಣಜಗಳು ಸಾರ್ವಜನಿಕ ಸೇವಾ ಜಾಲ ಇತ್ಯಾದಿಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಬೇಕಾದ ಸ್ಪಷ್ಟ ನೀಲಿ ನಕ್ಷೆಯನ್ನು ಸಿದ್ಧಪಡಿಸಿದೆ. ಅದೇ ವೇಳೆಗೆ ನಮ್ಮ ದೇಶದ ಅಭಿವೃದ್ಧಿ ಶಿಕ್ಷಣ ಆರೋಗ್ಯ ಉದ್ಯೋಗ ಹಾಗೂ ಆಹಾರ ಪೂರೈಸಲು ಬೇಕಾದ ಸಂಪೂರ್ಣ ಕಡಿತಗೊಳಿಸಲಾಗಿದೆ” ಎಂದು ಹೇಳಿದರು.
“ದೇಶದ ದುಡಿಯುವ ಜನ ಅಂಗನವಾಡಿ ಬಿಸಿಯೂಟ ಆಶಾ ಉದ್ಯೋಗ ಖಾತ್ರಿ ಮೊದಲಾದ ಯೋಜನೆಗಳಿಗೆ ಹಾಗೂ ಅಲ್ಲಿ ದುಡಿಯುತ್ತಿರುವ ಕೋಟ್ಯಾಂತರ ಗೌರವದನ ಆಧಾರದಲ್ಲಿ ನೌಕರರು ಹಾಗೂ ಅಸಂಘಟಿತ ಕಾರ್ಮಿಕ ವರ್ಗದ ಜೀವನೋಪಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ” ಎಂದು ಮಹೇಶ್ ಪತ್ತಾರ ಹೇಳಿದರು.
ನಂತರ ಸಿಐಟಿಯು ಜಿಲ್ಲಾ ಸಂಚಾಲಕರು ಮಹೇಶ್ ಹಿರೇಮಠ ಮಾತನಾಡಿ, ಅಹೋರಾತ್ರಿ ಧರಣಿಯಲ್ಲಿ ಗ್ರಾಮ ಪಂಚಾಯತಿ ನೌಕರರು, ಬಿಸಿಯೂಟ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಮಾಲಿ ಮಾಲೀಕರು, ಕಾರ್ಖಾನೆ ಕಾರ್ಮಿಕರು ಅಂಗನವಾಡಿ ನೌಕರರು ಸೇರಿದಂತೆ ವಿವಿಧ ವಲಯದ ಸಂಘಟಿತ ಹಾಗೂ ಸಂಘಟಿತ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವರು” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಮುಖಂಡರಾದ ಬಸವರಾಜ್ ಮಂತೂರ್, ಮೆಹಬೂಬ ಹವಾಲ್ದಾರ್ ಉಪಸ್ಥಿತರಿದ್ದರು.
