ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮರಾಠಿಗರಷ್ಟೇ ಮತ ಹಾಕಿಲ್ಲ ಕನ್ನಡಿಗರೂ ಮತ ಹಾಕಿದ್ದಾರೆ. ಹಾಗಾಗಿ ಮತಗಳ ಮೇಲಿನ ಆಸೆಗಾಗಿ ಮರಾಠಿಗರು ಮತ್ತು ಎಂಇಎಸ್ ಜತೆ ಒಳಒಪ್ಪಂದ ಮಾಡಿಕೊಳ್ಳುವುದನ್ನು ನೀವು ನಿಲ್ಲಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷರು ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷವಿದೆ. ಅದರ ಕಾರ್ಯಕರ್ತರು ಪ್ರತಿದಿನ ಗೂಂಡಾಗಿರಿ ಮಾಡಿಯೇ ಬದುಕುತ್ತಿದ್ದಾರೆ. ಹಾಗಾಗಿ ಪಕ್ಷದ ಹೆಸರನ್ನೇ ‘ಮಹಾರಾಷ್ಟ್ರ ಗೂಂಡಾ ಸೇನೆ’ ಎಂದು ಬದಲಿಸಬೇಕು. ಗೂಂಡಾ ಪ್ರವೃತ್ತಿಯುಳ್ಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕು. ಇಲ್ಲದಿದ್ದರೆ ಅವರ ಉಪಟಳ ಹೆಚ್ಚುತ್ತದೆ’ ಎಂದು ಹೇಳಿದರು.
ಬೆಳಗಾವಿಯಲ್ಲಿ ವಾಸಿಸುವ ಪ್ರತಿಯೊಬ್ಬರೂ ನಾಡಿನ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವುದನ್ನು ಬಿಟ್ಟು, ನ್ಯಾಯಯುತವಾಗಿ ಬದುಕಬೇಕು. ರಾಜ್ಯದಲ್ಲಿ ಆಡಳಿತ ಭಾಷೆಯಾದ ಕನ್ನಡ ಕಲಿಯಲೇಬೇಕು’ ಎಂದು ಗುಡುಗಿದರು.