ಬಳ್ಳಾರಿ ನಗರ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿನ ‘ಶ್ರೀ ಶರಣ ಕಾಟನ್ ಜಿನ್ನಿಂಗ್ ಪ್ರೆಸ್ಸಿಂಗ್ ಫ್ಯಾಕ್ಟರಿ’ಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಅಪಾರ ಮೌಲ್ಯದ ಹತ್ತಿ ಅಗ್ನಿಗೆ ಆಹುತಿಯಾಗಿದೆ.
ಮಿಲ್‌ನಲ್ಲಿದ್ದ 170 ಬೇಲ್ ಹಾಗೂ 100 ಕ್ವಿಂಟಲ್‌ಗೂ ಹೆಚ್ಚು ದಾಸ್ತಾನಿನ ಹತ್ತಿ ಭಾನುವಾರ ಮಧ್ಯರಾತ್ರಿ ಉಂಟಾದ ಬೆಂಕಿಯಿಂದ ಸುಟ್ಟು ಕರಲಾಗಿದೆ. ಅವಘಡದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹತ್ತಿ ನಾಶವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗ್ರಾಮೀಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
