“ಬಹುತ್ವ ಪರಂಪರೆಯನ್ನು ಗಟ್ಟಿಗೊಳಿಸಲು ಯುವಜನತೆ ಡಿವೈಎಫ್ಐ ಸಂಘಟನೆಯನ್ನು ಬೆಂಬಲಿಸಬೇಕು. ಹಾಗಾಗಿ ಮಾರ್ಚ್ 1ರಂದು ಡಿ.ವೈ.ಎಫ್.ಐ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಆಗಲಿದೆ” ಎಂದು ಪತ್ರಿಕಾ ಗೋಷ್ಠಿಯಲ್ಲಿ ಮುಖಂಡ ದಾವಲಾಸಬ್ ತಾಳಿಕೋಟೆ ತಿಳಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
“ಸರ್ವರಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ, ಆಹಾರ, ವಸತಿ, ಘನತೆಯ ಬದುಕು ಭಾರತದ ಜನತೆಯ ಹಕ್ಕು ಸಾಕಾರಗೊಳ್ಳಲು ಹಾಗೂ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವ, ಸೌಹಾರ್ದತೆ, ಕಟ್ಟಲು. ಡಿವೈಎಫ್ಐ ಗೆ ಯುವಜನತೆ ಸದಸ್ಯತ್ವ ಸೇರುವುದರ ಮೂಲಕ ಹಕ್ಕುಗಳಿಗಾಗಿ ಹೋರಾಟ ನಡೆಸಲು ಮುಂದಾಗಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
“ಗಜೇಂದ್ರಗಡ ಪಟ್ಟಣದ ಮೂರನೇ ವಾರ್ಡ್ ನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಬಸವರಾಜ ಪೂಜಾರ ಚಾಲನೆ ನೀಡಲಿದ್ದಾರೆ. ರಾಜ್ಯ ಸಮಿತಿ ಸದಸ್ಯ ಫಯಾಜ್ ತೋಟದ ಸೇರಿದಂತೆ ಎಂ.ಎಸ್.ಹಡಪದ, ಬಾಲು ರಾಠೋಡ, ಪೀರು ರಾಠೋಡ, ಮೆಹಬೂಬ್ ಹವಾಲ್ದಾರ್, ಚೆನ್ನಪ್ಪ ಗುಗಲೋತ್ತರ, ಚಂದ್ರು ರಾಠೋಡ, ಗಣೇಶ ರಾಠೋಡ, ರೇಣಪ್ಪ ಕಲ್ಗುಡಿ ಸೇರಿದಂತೆ ಡಿವೈಎಫ್ಐ ಸಂಘಟನೆಯ ಮುಖಂಡರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಡಿ. ವೈ.ಎಫ್.ಐ ಜಿಲ್ಲಾ ಮುಖಂಡ ದಾವಲಸಾಬ ತಾಳಿಕೋಟಿ ತಿಳಿಸಿದರು.
