ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

Date:

Advertisements
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಮಡದಿಯರ ಒಲುಮೆ

‘ಶಿವ’ ಎಂಬ ವಚನವ ಬಿಡದಿರಿ
ಮಡದಿಯರ ಒಲುಮೆಯ ನಚ್ಚದಿರಿ ದರ್ಪಣದ ಒಪ್ಪವ ತಪ್ಪದಿರಿ
ವಾಯುವ ಕಡೆಗಡೆಗೆ ತಿದ್ದದಿರಿ
ಹಿಡಿವಡೆ ದೃಢವಾಗಿ ಹಿಡಿಯಿರೆಲರೊ,
ಗುಹೇಶ್ವರ ಸಿಕ್ಕಿದ ಅಲ್ಲಮಂಗೆ.

ಪದಾರ್ಥ:
ನಚ್ಚದಿರಿ = ನಂಬದಿರಿ
ದರ್ಪಣ = ಕನ್ನಡಿ
ಒಪ್ಪವ = ಬಿಂಬವ

Advertisements

ವಚನಾರ್ಥ:
ನನಗೆ ಗುಹೇಶ್ವರ ಸಿಕ್ಕ ಎಂದು ಅಲ್ಲಮ ಅತ್ಯಂತ ಆತ್ಮವಿಶ್ವಾಸದಿಂದ ಹೇಳುವ ಮಾತು ಈ ವಚನದಲ್ಲಿದೆ. ಅಲ್ಲಮನಂತೆ ತಂತಮ್ಮ ಆರಾಧ್ಯ ದೈವನನ್ನು ದೃಢವಾಗಿ ಹಿಡಿದುಕೊಳ್ಳಬೇಕಾದರೆ ಮತ್ತು ಒಳಿಸಿಕೊಳ್ಳಬೇಕಾದರೆ ಏನೇನು ಮಾಡಬೇಕು ಎಂದು ಅಲ್ಲಮ ಕೊಡುವ ಸೂಚನೆ ಸಲಹೆಗಳು ಇಲ್ಲಿವೆ. ಸೂಚನೆ: ಶಿವ ಶಿವಾ ಎಂಬ ವಚನವನ್ನು ಬಿಡದಂತೆ ಸ್ಮರಿಸುತ್ತಿರಿ. ಸಲಹೆ: ಮಡದಿಯರ ಮೇಲಿನ ಮೋಹವನ್ನು ನಂಬದಿರಿ. ಆರಾಧ್ಯ ದೈವನನ್ನು ದೃಢವಾಗಿ ಒಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಲ್ಲಮ ನೀಡುವ ಎರಡು ಉದಾಹರಣೆಗಳು: ಹಿಡಿವಡೆ ದೃಢವಾಗಿ ಹಿಡಿಯುವುದು ಅಂದರೆ ಕನ್ನಡಿ ತೋರುವ ಪ್ರತಿಬಿಂಬವನ್ನು ಹೇಗೆ ತಪ್ಪಿಸಲು ಸಾಧ್ಯವಿಲ್ಲವೋ ಹಾಗೆ. ಹೇಗೆ ಗಾಳಿ ಬೀಸುವ ದಿಕ್ಕನ್ನು ತಿದ್ದಿ ಬದಲಿಸಲು ಸಾಧ್ಯವಿಲ್ಲವೋ ಹಾಗೆ.

ಪದಪ್ರಯೋಗಾರ್ಥ:
ಮಡದಿಯರ ಒಲುಮೆಯ ನಚ್ಚದಿರಿ ಅಂದರೆ ಹೆಣ್ಣಿನ ಮೇಲಿನ ಮೋಹವನ್ನು ತೊರೆಯಿರಿ. ಅಲ್ಲಮನ ಈ ಹೇಳಿಕೆ ಆತನ ಬದುಕಿನ ವೈಯಕ್ತಿಕ ಅನುಭವವೂ ಹೌದು. ಅಲ್ಲಮನು ಮಾಯಾಲತೆ ಎಂಬ ಸುಂದರಿಯ ಒಲುಮೆಯನ್ನು ನಚ್ಚದೆ ಇದ್ದದ್ದರಿಂದಲೇ ಗುಹೇಶ್ವರನು ಸಿಕ್ಕುವಂತಾಯಿತು. ಇಲ್ಲಿ ತುಳಸಿದಾಸರ ಜೀವನದ ಪ್ರಸಂಗವೊಂದು ಪ್ರಸ್ತುತವಾಗುತ್ತದೆ. ತುಳಸಿದಾಸರು ತಮ್ಮ ಪೂರ್ವಾಶ್ರಮದಲ್ಲಿ ರತ್ನವಲ್ಲಿ ಎಂಬ ಸುಂದರ ಯುವತಿಯನ್ನು ವಿವಾಹವಾಗಿದ್ದರು. ಒಂದು ದಿನ ರತ್ನವಲ್ಲಿಯು ತವರಿಗೆ ಹೋಗಿದ್ದಾಗ ಆಕೆಯನ್ನು ಬಿಟ್ಟಿರಲಾಗದ ಅತೀವ ಮೋಹದಿಂದ ರಾತ್ರೋರಾತ್ರಿ ಸರಜೂ ನದಿಯನ್ನು ಈಜಿ ದಾಟಿಕೊಂಡು ಆಕೆಯನ್ನು ಸೇರುತ್ತಾರೆ. ಈ ವಿಷಯವನ್ನು ತಿಳಿದ ಪತ್ನಿಯು ನನ್ನ ಮೇಲೆ ನೀವಿಟ್ಟಿರುವ ಇಷ್ಟೊಂದು ಮೋಹದಲ್ಲಿ ಕೆಲವಷ್ಟನ್ನಾದರೂ ದೈವದ ಕಡೆ ಹರಿಸಿದ್ದಲ್ಲಿ ನೀವು ದೈವಕೃಪೆಗೆ ಪಾತ್ರರಾಗುತ್ತಿದ್ದಿರಿ ಎಂದು ವಿನೋದ ಮಾಡುತ್ತಾಳೆ. ಪತ್ನಿಯ ಈ ಮಾತು ತುಳಸಿದಾಸರು ಸಂಪೂರ್ಣ ಆಧ್ಯಾತ್ಮಿಕತೆಗೆ ಮುಖಮಾಡುವಂತಾಗುತ್ತದೆ. ಶ್ರೀ ರಾಮಚರಿತಮಾನಸ ಮತ್ತು ಹನುಮಾನ್ ಚಾಲೀಸದಂತ ಅಮರ ಕೃತಿಗಳನ್ನು ರಚಿಸುವಂತಾಗುತ್ತದೆ. ಮಡದಿಯರ ಒಲುಮೆಯ ನಚ್ಚದಿರಿ ಎಂಬ ಅಲ್ಲಮನ ಪದಪ್ರಯೋಗ ಈ ಹಿನ್ನಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾದದ್ದು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X