ಲೋಕಸಭಾ ಸದಸ್ಯ ವಿವೇಚನಾ ನಿಧಿಗೆ ಮೀಸಲಿಟ್ಟಿರುವ 5 ಕೋಟಿ ರೂ ಅನುದಾನವನ್ನು ಉದ್ದೇಶಿತ ಕಾರ್ಯಕ್ಕೆ ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, “2024-25ನೇ ಸಾಲಿಗೆ ವಿವೇಚನಾ ನಿಧಿಗೆ 5 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಅದನ್ನು ಜಿಲ್ಲೆಯ ಅಭಿವೃದ್ಧಿಗೆ ಬಳಕೆ ಮಾಡದೆ ಇರುವುದು ಸಮಂಜಸವಲ್ಲ. ಸಂಸದ ಜಿ. ಕುಮಾರ ನಾಯಕ ಅನುದಾನವನ್ನು ಬಳಸಿಕೊಂಡಿಲ್ಲ. ಜಿಲ್ಲೆಯ ಜನರು ಇಟ್ಟಿರುವ ನಂಬಿಕೆಗೆ ಮೋಸ ಮಾಡದಂತೆ ಅನುದಾನ ಬಳಕೆಗೆ ಬದ್ಧತೆ ತೋರಬೇಕು” ಎಂದರು.
“ಅನುದಾನದ ಸಮರ್ಪಕ ಬಳಕೆಯಾಗಿಲ್ಲದ ಕಾರಣ ಮತ್ತೆ ಜಿಲ್ಲೆಗೆ ಹೊಸ ಅನುದಾನ ಬಿಡುಗಡೆಯಾಗದಿರುವ ಆತಂಕವಿದೆ. ಅನುದಾನ ಯಾವುದೇ ಕಾರಣಕ್ಕೂ ದುರ್ಬಳಕೆಯಾಗದಂತೆ ಎಚ್ಚರವಹಿಸುವ ಜೊತೆಗೆ ಅನುದಾನ ಬಳಕೆಗೆ ಕೂಡಲೇ ಮುಂದಾಗಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ದ್ವಿತೀಯ ಪಿಯುಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಸಿಹಿ, ಗುಲಾಬಿ ನೀಡಿ ಸ್ವಾಗತ
ಈ ವೇಳೆ ಜಾನವೆಸ್ಲಿ ಶೆಟ್ಟಿ, ಈರಣ್ಣ ಭಂಡಾರಿ ಇದ್ದರು.
