ಎಐಎಂಎಸ್ಎಸ್ ಸಂಘಟನೆ ಮೈಸೂರು ಜಿಲ್ಲಾ ಸಮಿತಿಯಿಂದ ನಟರಾಜ ವಿದ್ಯಾಸಂಸ್ಥೆಯ ಟೈಲರಿಂಗ್ ವಿಭಾಗದಲ್ಲಿ ‘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ‘ಯನ್ನು ಕ್ಲಾರಾ ಜೆಟ್ಕಿನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು.
ಮೈಸೂರು ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಶೀಭಾ ಮಾತನಾಡಿ ” 1908ರಲ್ಲಿ ಅಮೇರಿಕಾದ ನ್ಯೂಯಾರ್ಕ್ ನಗರದ ಜವಳಿ ಕಾರ್ಖಾನೆಯ ಹೆಣ್ಣು ಮಕ್ಕಳು ಲಾಟಿ, ಗುಂಡಿನೇಟು ಎದುರಿಸಿ ತಮ್ಮ ಕೆಲವೊಂದು ಹಕ್ಕುಗಳನ್ನು ಗೆದ್ದುಕೊಂಡ ದಿನವೇ ಮಾರ್ಚ್ 8 ಎಂದೂ 1910ರಲ್ಲಿ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ರವರು ಇದನ್ನು ‘ ಅಂತರರಾಷ್ಟ್ರೀಯ ಮಹಿಳಾ ದಿನ’ವಾಗಿ ಘೋಷಿಸಿದರ ಬಗ್ಗೆ ಹಾಗೂ ಅಂದಿನಿಂದ ಇದು ಮಹಿಳಾ ಹೋರಾಟದ ದಿಕ್ಸೂಚಿಯಾಗಿದೆ. ಮಹಿಳೆಯರು ತಾವು ನಡೆದು ಬಂದ ದಾರಿಯನ್ನು ಅವಲೋಕಿಸುತ್ತಾ ಮುಂದೆ ಸಾಧಿಸಬೇಕಾಗಿರುವ ಗುರಿಯ ರೂಪುರೇಷೆ ನಿರ್ಧರಿಸಲು ಮೀಸಲಿಡಬೇಕಾದ ಪ್ರೇರಣಾ ದಿನವಾಗಿದೆ ” ಎಂದರು.

” ನಮ್ಮ ನವೋದಯದ ಹರಿಕಾರರಾದ ರಾಜಾರಾಂ ಮೋಹನ್‌ರಾಯ್, ಈಶ್ವರ ಚಂದ್ರ ವಿದ್ಯಾಸಾಗರ, ಪಂಡಿತ ತಾರಾನಾಥ, ಸಾವಿತ್ರಿಬಾಯಿ ಫುಲೆ, ಮುಂತಾದವರ ಹೋರಾಟದ ಫಲವಾಗಿ ಅಲ್ಪ ಸ್ವಲ್ಪ ಹಕ್ಕುಗಳನ್ನು ಮಹಿಳೆಯರು ಗಳಿಸಿಕೊಂಡಿದ್ದರು. ಅವರ ಪರಿಸ್ಥಿತಿ ಇನ್ನು ಸಂಕಟಮಯವಾಗಿಯೇ ಇದೆ. ಜೊತೆಗೆ 20 ರ ದಶಕದಲ್ಲಿ ಇಲ್ಲಿ ನೆಲೆಗೊಂಡ ಜಾಗತೀಕರಣ ನೀತಿ, ಪರಿಸ್ಥಿತಿಯನ್ನು ಇನ್ನಷ್ಟು ವಿಷಮಯಗೊಳಿಸಿದೆ. ಅಲ್ಲದೆ ಸರ್ಕಾರಗಳೇ, ದುಡಿಯುವ ಹೆಣ್ಣು ಮಕ್ಕಳಿಗೆ ಜೀವನದ ಭದ್ರತೆ ಕಲ್ಪಿಸದೆ ಅವರನ್ನು ಶೋಷಿಸುತ್ತಿರುವುದಕ್ಕೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮಹಿಳೆಯರು ಜೀವಂತ ಸಾಕ್ಷಿ ” ಎಂದು ವಿಷಾದಿಸಿದರು.

ಉಪಾಧ್ಯಕ್ಷೆ ಸೀಮಾ ಮಾತನಾಡಿ ” ಮಹಿಳಾ ಸಮುದಾಯ ಹೋರಾಟದಿಂದ ಗಳಿಸಿಕೊಂಡಿರುವ ಎಲ್ಲ ರೀತಿಯ ಹಕ್ಕುಗಳನ್ನು ಇಂದು ಉಳಿಸಿಕೊಳ್ಳಬೇಕಿದೆ ಮಹಿಳೆಯರು ಮತ್ತು ಮಕ್ಕಳು ಜೀವಿಸುವ ಹಕ್ಕಿಗಾಗಿ ನಾವೆಲ್ಲರೂ ಧ್ವನಿ ಎತ್ತಬೇಕಿದೆ. ಹೆಣ್ಣು ಮಕ್ಕಳಿಗೆ ಸರ್ಕಾರ, ಆರೋಗ್ಯ, ಶಿಕ್ಷಣ,ಸುರಕ್ಷತೆ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸಬೇಕು. ಇದಕ್ಕಾಗಿ ಮಹಿಳಾ ಸಮುದಾಯ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಿದೆ ” ಎಂದು ಹೇಳಿದರು
ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಬಿ-ಖಾತಾ ‘ ಅಭಿಯಾನಕ್ಕೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಚಾಲನೆ
ಕಾರ್ಯಕ್ರಮದಲ್ಲಿ ಟೈಲರಿಂಗ್ ಇನ್ಸ್ಟಿಟ್ಯೂಷನ್ ನ ಮುಖ್ಯಸ್ಥೆ ಮಧು, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ನಳಿನ , ಕಾರ್ಯದರ್ಶಿ ಆಸಿಯಾ ಬೇಗಂ ಮತ್ತು ವಿದ್ಯಾರ್ಥಿಗಳು ಇದ್ದರು.
