ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಎರಡೂ ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆ. ಟೀಂ ಇಂಡಿಯಾದಲ್ಲಿ ಹರ್ಷಿತ್ ರಾಣಾ ಬದಲಿಗೆ ವರುಣ್ ಚಕ್ರವರ್ತಿ ಅವರನ್ನು ಸೇರಿಸಲಾಗಿದೆ. ನ್ಯೂಜಿಲೆಂಡ್ ತಂಡದಲ್ಲಿ ಡೇವೊನ್ ಕಾನ್ವೆ ಬದಲು ಡೇರಿಲ್ ಮಿಷಲ್ ಆಡಲಿದ್ದಾರೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಈ ಪಂದ್ಯ ಮಹತ್ವವಾಗಿದ್ದು, ಏಕದಿನ ಅಂತಾರಾಷ್ಟ್ರೀಯ ಮಾದರಿಯಲ್ಲಿ 300ನೇ ಪಂದ್ಯವಾಡುತ್ತಿದ್ದಾರೆ.
ತಲಾ 4 ಅಂಕ ಗಳಿಸಿದ್ದರೂ ರನ್‌ರೇಟ್ ಆಧಾರದಲ್ಲಿ ಸದ್ಯ ಕಿವೀಸ್ ಎ ಗುಂಪಿನ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ತನ್ನ ಗುಂಪಿನಿಂದ ಅಗ್ರಸ್ಥಾನಿಯಾಗಿ ಹೊಮ್ಮಲಿದೆ. ವಿಜೇತ ತಂಡ ಸೆಮೀಸ್ ಪಂದ್ಯವನ್ನು ಆತ್ಮವಿಶ್ವಾಸದಿಂದ ಎದುರಿಸುವ ಅವಕಾಶವನ್ನು ಪಡೆದುಕೊಳ್ಳಲಿದೆ.
ಎರಡೂ ತಂಡಗಳು ಬಲಿಷ್ಠವಾಗಿವೆ. ಟೀಮ್ ಇಂಡಿಯಾ ಹೇಗೆ ಎಲ್ಲ ವಿಭಾಗಗಳಲ್ಲಿ ಬಲಾಢ್ಯವಾಗಿದೆಯೋ ಹಾಗೆ ನ್ಯೂಜಿಲೆಂಡ್ ತಂಡ ಸಹ ಉತ್ತಮ ತಂಡ ಹೊಂದಿದೆ. ಎರಡೂ ತಂಡಗಳು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳು.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ | ಪಾಕ್ ವಿರುದ್ಧದ ಒಂದು ಪಂದ್ಯ – ವಿರಾಟ್ ಕೊಹ್ಲಿಗೆ ಹಲವು ದಾಖಲೆಗಳ ಕಿರೀಟ
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಪಿಚ್‌ನಲ್ಲಿ ಬ್ಯಾಟರ್‌ಗಳು ರನ್ ಗಳಿಸುವುದು ಕಷ್ಟ. ಹೀಗಾಗಿ ಇಲ್ಲಿ ಕಡಿಮೆ ಸ್ಕೋರ್ ಪಂದ್ಯವನ್ನು ನೀರಿಕ್ಷಿಸಬಹುದಾಗಿದೆ. ವೇಗದ ಬೌಲರ್‌ಗಳಿಗೆ ಹೊಸ ಚೆಂಡಿನಲ್ಲಿ ನೆರವು ಸಿಗಲಿದೆ. ಸಮಯ ಕಳೆದಂತೆ ಸ್ಪಿನ್ ಬೌಲರ್‌ಗಳು ಸಹ ಅಬ್ಬರಿಸಬಲ್ಲರು.
ದೈಬೈ ಕ್ರೀಡಾಂಗಣದಲ್ಲಿ ಇದುವರೆಗೆ ಒಟ್ಟು 60 ಏಕದಿನ ಪಂದ್ಯಗಳನ್ನು ಆಡಲಾಗಿದ್ದು, ಅವುಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 22 ಪಂದ್ಯಗಳನ್ನು, ಎರಡನೆ ಬಾರಿಗೆ ಬ್ಯಾಟ್ ಮಾಡಿದ ತಂಡ 36 ಪಂದ್ಯಗಳನ್ನು ಗೆದ್ದಿದೆ.
ಬಲಿಷ್ಠ ತಂಡ ನ್ಯೂಜಿಲೆಂಡ್ ಸಹ ಬಲಿಷ್ಠವಾಗಿದೆ ಈ ತಂಡದಲ್ಲಿ ನುರಿತ ಸ್ಪಿನ್ ಹಾಗೂ ವೆಗದ ಬೌಲರ್‌ಗಳು ಇದ್ದು, ಟೀಮ್ ಇಂಡಿಯಾಗೆ ಕಾಟ ನೀಡಬಹುದು. ಕಿವೀಸ್ ಸಹ ಈ ಪಂದ್ಯವನ್ನು ಗೆದ್ದು ಅಗ್ರ ಸ್ಥಾನಕ್ಕೇ ಏರಲು ಪ್ಲ್ಯಾನ್ ಮಾಡಿಕೊಂಡಿದೆ. ನ್ಯೂಜಿಲೆಂಡ್ ತಂಡದ ಬ್ಯಾಟರ್‌ಗಳು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಟಾಮ್ ಲಾಥಮ್, ವಿಲ್ ಯಂಗ್, ರಚಿನ್ ರವೀಂದ್ರ ಈಗಾಗಲೇ ಟೂರ್ನಿಯಲ್ಲಿ ಶತಕ ಸಿಡಿಸಿದ್ದಾರೆ. ಇವರನ್ನು ಬಿಟ್ಟಂತೆ ಕೇನ್ ವಿಲಿಯಮ್ಸನ್ ಲಯಕ್ಕೆ ಮರಳುವ ಅನಿವಾರ್ಯತೆ ಇದೆ. ಇನ್ನು ಬೌಲರ್‌ಗಳು ಶಿಸ್ತು ಬದ್ದ ದಾಳಿ ನಡೆಸಬೇಕಿದೆ.
ಭಾರತ ತಂಡ:
ರೋಹಿತ್ ಶರ್ಮ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ.
ನ್ಯೂಜಿಲೆಂಡ್ ತಂಡ:
ಮಿಚೆಲ್ ಸ್ಯಾಂಟ್ನರ್ (ನಾಯಕ), ಮಿಚೆಲ್ ಬ್ರೇಸ್‌ವೆಲ್, ಡೆವೋನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡೆರಿಲ್ ಮಿಚೆಲ್, ಟಾಮ್ ಲೇಥಂ, ಗ್ಲೆನ್ ಫಿಲಿಫ್ಸ್, ಕೈಲ್ ಜೆಮಿಸನ್, ಮ್ಯಾಟ್ ಹೆನ್ರಿ, ವಿಲ್ ಒ’ರೂರ್ಕ್,