ಹೆಜ್ಜೆ ಥಿಯೇಟರ್ ತಂಡವು ಸದ್ಯಕ್ಕೆ ʼಸುಣ್ಣದ ಸುತ್ತುʼ ಎಂಬ ನಾಟಕದ ತಾಲೀಮು ನಡೆಸುತ್ತಿದ್ದು, ಈ ನಾಟಕವು ಮಾರ್ಚ್ 06ರಂದು ಬೆಂಗಳೂರಿನ ಕಲಾಗ್ರಾಮ ಮಲ್ಲತಹಳ್ಳಿಯಲ್ಲಿ ಸಂಜೆ 07ಕ್ಕೆ ಪ್ರದರ್ಶನಗೊಳ್ಳಲಿದೆ.
ಒಂದು ಸಾಮ್ರಾಜ್ಯ, ಆ ಸಾಮ್ರಾಜ್ಯದಲ್ಲಿ ರಕ್ತ ಸಂಬಂಧಗಳ ಬೆಲೆ ಗೊತ್ತಿಲ್ಲದೆ, ಕೇವಲ ಹಣ ಬಂಗಾರದ ಬಗ್ಗೆ ಯೋಚಿಸುವ ರಾಣಿ. ಯಾವಗ ರಾಜನ ಬೆನ್ನಿಗೆ ಕತ್ತಿ ಚುಚ್ಚುತ್ತೀನೆಂದು ಸಂಚು ಹೂಡೋ ಮರಿದೊರೆ. ಇವರುಗಳ ಮಧ್ಯೆ ಇವರ ಮಸಲತ್ತಿನ ಯೋಜನೆಗಳಿಗೆ ಬಲಿಯಾಗಿ ದೂರ ಉಳಿಯುವ ಪ್ರೇಮಿಗಳು. ಮರಿದೊರೆ ಸಂಚಿನಿಂದ ಸುಳ್ಳು ಪ್ರೀತಿ ತೋರುವ ತಾಯಿಂದ ದೂರಾಗಿ, ನಿಜ ಪ್ರೀತಿ ಪಡೆದುಕೊಳ್ಳುವ ಎಳೆಗೂಸಿನ ಸುತ್ತ ಈ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ.
ಒಂದು ಕಡೆ ಮರಿದೊರೆಗೆ ಮಗು ಕಂಡರೆ ಕೊಂದು ಬಿಡುವನಲ್ಲ ಎನ್ನುವ ಭಯವಿದ್ದರೆ, ಇತ್ತ ಯುದ್ದಕ್ಕೆ ಹೋದ ಪೇಮಿ ಬರುವ ದಾರಿ ಕಾಯುತ್ತ, ಸೊರಗಿ ಕೂತು, ಜತೆಗೆ ತನ್ನದಲ್ಲದ ಮಗುವನ್ನು ನನ್ನದೆಂದು ಭಾವಿಸಿ, ಆ ಮುಗುವಿಗೆ ಲಾಲನೆ, ಪಾಲನೆ, ಪ್ರೀತಿ, ಕಾಳಜಿ ತೋರುವ ಹೆಣ್ಣಿಗೆ, ಕೊನೆಗೊಂದು ಅಗ್ನಿ ಪರೀಕ್ಷೆ ಕಾದಿರುತ್ತದೆ.
ಈ ಸುದ್ದಿ ಓದಿದ್ದೀರಾ? ಶಿಕಾರಿಪುರ | ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; ಆರೋಪಿ ನಾಪತ್ತೆ
ಆ ಮಗು, ಕೊನೆಗೆ ಹಣ ಮತ್ತು ಸಂಪತ್ತು ಹೊಂದಿರುವ ಹಾಗೂ ಸುಳ್ಳು ಪ್ರೀತಿ ಉಳ್ಳವರ ಪಾಲಾಗುತ್ತ ಅಥವಾ ಬಡತನದಲ್ಲಿದ್ದು, ನಿಜ ಪ್ರೀತಿ, ಕಾಳಜಿ ತೋರಿದ ಆ ಬಡ ಹೆಣ್ಣಿನ ಪಾಲಾಗುತ್ತ ಎನ್ನವಂತಹ ಕಥೆಯನ್ನು ರಚಿಸಿದ ಜರ್ಮನ್‌ನ ಚಿತ್ರಕಥೆಗಾರ ಬರ್ಟೋಲ್ಟ್ ಬ್ರೆಕ್ಟ್ ಅವರ ಕಥೆಯನ್ನು ಎಚ್ ಎಸ್ ವೆಂಕಟೇಶ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದು, ರಂಗ ನಿರ್ದೇಶಕ ಹೇಮಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ.