ಕೆಳ ಹಂತದ ಸಿಬ್ಬಂದಿಗಳನ್ನು ಬಳಸಿಕೊಂಡು ನನ್ನ ಕೊಠಡಿಯಲ್ಲಿ ದಾಖಲೆಗಳನ್ನು ಇರಿಸಿದ್ದಾರೆ ಎಂದು ಆರೋಪಿಸಿ ಆಂತರಿಕ ಭದ್ರತಾ ದಳದ (ಐಎಸ್‌ಡಿ) ಐಜಿಪಿ ಡಿ. ರೂಪಾ ವಿರುದ್ಧ ಐಎಸ್‌ಡಿ ಡಿಐಜಿ ವರ್ತಿಕಾ ಕಟಿಯಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದಾರೆ.
“2024ರಲ್ಲಿ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಮಲ್ಲಿಕಾರ್ಜುನ್ ನನ್ನ ಅನುಮತಿ ಇಲ್ಲದೆ ಕಚೇರಿಯ ಬಾಗಿಲು ತೆಗೆದು ಅಲ್ಲಿ ಕೆಲವು ಕಡತಗಳನ್ನು ಇರಿಸಿ, ಅದರ ಫೋಟೋವನ್ನು ಐಜಿಪಿ ರೂಪಾ ಅವರಿಗೆ ಕಳಿಸಿದ್ದಾರೆ. ಇದೆಲ್ಲಾ ರೂಪಾ ಅವರ ಆದೇಶದಂತೆ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ್ ಮತ್ತು ಮಂಜುನಾಥ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಭೀಕರ ಅಪಘಾತ, ನಾಲ್ವರು ಸಾವು
ಪೊಲೀಸ್ ಮಹಾನಿರ್ದೇಶಕರು ಮತ್ತು ಐಎಸ್‌ಡಿ ಡಿಜಿಪಿ ಅವರಿಗೂ ವರ್ತಿಕಾ ದೂರು ನೀಡಿ, ಶೀಘ್ರ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
