ಜಮೀನಿನ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವಡೇರಹಳ್ಳಿ ತಾಂಡ್ಯದಲ್ಲಿ ಇಂದು ನಡೆದಿದೆ.
ಆಸ್ತಿಯ ಕುರಿತು ಎರಡೂ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಿದ್ದು, ಬೀರೇಗೌಡರಿಗೆ ಸೇರಿದ 7 ಗುಂಟೆ ಜಮೀನು ಪರಮೇಶ್ ಎಂಬುವವರ ಸ್ವಾಧೀನದಲ್ಲಿದೆ. ಈ ವಿಚಾರ ಸೋಮವಾರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆದರೆ, ಪರಮೇಶ್ ಕುಟುಂಬದವರು ಬೀರೇಗೌಡ, ಗೌರಮ್ಮ, ಶಶಿಕುಮಾರ್ ಮೇಲೆ ಮನಸೋ ಇಚ್ಛೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಿಧಾನ ಪರಿಷತ್ ಚುನಾವಣೆ: ಮತಗಳ ಮರು ಎಣಿಕೆಗೆ ಹೈಕೋರ್ಟ್ ಸೂಚನೆ; ಬಿಜೆಪಿಯಲ್ಲಿ ಆತಂಕ
ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.
