ಗುಬ್ಬಿ | ರೈತರ ರಾಗಿ ಚೀಲ ಕದ್ದ ಕಳ್ಳರ ಬಂಧನ : ಗುಬ್ಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ

Date:

Advertisements

ಮನೆಯ ಮುಂದೆ ಇಟ್ಟಿದ್ದ ರಾಗಿ ಚೀಲಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಒಂದು ತಿಂಗಳಲ್ಲಿ ಮಾಲು ಸಮೇತ ಬಂದಿಸಿ ಆರೋಪಿಗಳಿಂದ ಸುಮಾರು 1.55 ಲಕ್ಷ ರೂ ಬೆಲೆಯ 3,713 ಕೆಜಿ ರಾಗಿಯನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಪಸಿಕೊಂಡಿರುವ ಮಿಂಚಿನ ಕಾರ್ಯಾಚರಣೆ ಗುಬ್ಬಿ ಪೊಲೀಸರು ನಡೆಸಿದ್ದಾರೆ.

ಗುಬ್ಬಿ ಪಟ್ಟಣದ ಹೊರ ವಲಯ ಹೇರೂರು ಗ್ರಾಮದ ರೈತ ರಾಜೇಶ್ ಎಂಬಾತ ತನ್ನ ಮನೆಯ ಮುಂದೆ ಜೋಡಿಸಿ ಇಟ್ಟಿದ್ದ 30 ರಾಗಿ ಚೀಲವನ್ನು ಕಳ್ಳರು ಕೈ ಚಳಕ ತೋರಿ ಕದ್ದೊಯ್ದಿದ್ದ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು ಪ್ರಕರಣ ದಾಖಲಿಸಿದ್ದರು. ಖಚಿತ ಮಾಹಿತಿ ಆಧರಿಸಿ ಒಂದು ತಿಂಗಳಲ್ಲಿ ಪ್ರಕರಣ ಭೇದಿಸಿ ಗುಬ್ಬಿ ಪಟ್ಟಣದ ಮಹಾಲಕ್ಷ್ಮಿನಗರ ಬಡಾವಣೆಯ ಪ್ರಶಾಂತ್ ಕುಮಾರ್(30) ಹಾಗೂ ಚೇಳೂರು ಹೋಬಳಿ ಸಾತೇನಹಳ್ಳಿ ಗೇಟ್ ಬಳಿಯ ರಾಜು(25) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

1001127108

ಹೇರೂರು ರಾಗಿ ಚೀಲ ಕಳವು ಕೇಸಿನ ಬಗ್ಗೆ ತನಿಖೆ ಕೈಗೊಂಡ ಸಮಯದಲ್ಲೇ ಆರೋಪಿಗಳಿಂದ ಮತ್ತೊಂದು ಕಳ್ಳತನ ಕಲ್ಲೂರು ಕ್ರಾಸ್ ಬಳಿಯಲ್ಲಿ ನಡೆದಿದ್ದ ರಾಗಿ ಚೀಲ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಮಾಲು ಸಮೇತ ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ತಿಂಗಳಲ್ಲಿ ಯಶಸ್ವಿಯಾದರು.

Advertisements

ಪ್ರಕರಣ ಪತ್ತೆಹಚ್ಚಲು ಶ್ರಮಿಸಿದ ಶಿರಾ ಉಪವಿಭಾಗದ ಡಿವೈಎಸ್ಪಿ ಬಿ.ಕೆ ಶೇಖರ್ ರವರ ಮಾರ್ಗದರ್ಶನದಲ್ಲಿ ಗುಬ್ಬಿ ವೃತ್ತ ನಿರೀಕ್ಷಕ ರಾಘವೇಂದ್ರ ರವರ ನೇತೃತ್ವದ ತಂಡ ಗುಬ್ಬಿ ಪಿಎಸ್ಸೈ ಸುನಿಲ್ ಕುಮಾರ್ ಮತ್ತು ಸಿಬ್ಬಂದಿಗಳಾದ ನವೀನ್ ಕುಮಾರ್, ವಿಜಯ್, ಪ್ರಶಾಂತ್, ರಬ್ಬಾನಿ, ಭೂತೇಶ್, ನಟರಾಜು ಅವರನ್ನು ಒಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ ರವರು ಅಭಿನಂದಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X