ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಎಂ ಕೆ ಫೈಝಿ ಯವರನ್ನು ಈಡಿ ಅಕ್ರಮವಾಗಿ ಬಂಧಿಸಿರುವುದರ ವಿರುದ್ಧ ರಾಷ್ಟ್ರವ್ಯಾಪ್ತಿ ಪ್ರತಿಭಟನೆಯ ಅಂಗವಾಗಿ ಎಸ್ ಡಿಪಿಐ ಉಡುಪಿ ಜಿಲ್ಲೆಯ ವತಿಯಿಂದ ಉಡುಪಿ ಅಜ್ಜರಕಾಡು ಹುತಾತ್ಮರ ಸ್ಮಾರಕ, ಉಚ್ಚಿಲ ಪೇಟೆ ಹಾಗೂ ಗಂಗೊಳ್ಳಿಯ ಜಾಮಿಯಾ ಮೊಹಲ್ಲಾದಲ್ಲಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಎಸ್ ಡಿಪಿಐ ಉಡುಪಿ ಕ್ಷೇತ್ರ ಸಮಿತಿ ವತಿಯಿಂದ ಕ್ಷೇತ್ರ ಅಧ್ಯಕ್ಷರಾದ ಅಶ್ರಫ್ ಬಾವ ರವರ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ ಡಿಪಿಐ ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಮ್ ಆದಿಉಡುಪಿ ಮಾತನಾಡಿ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಎಸ್ ಡಿಪಿಐ ದೇಶಾದ್ಯಂತ ಹೋರಾಟವನ್ನು ಸಂಘಟಿಸಿದರ ಪರಿಣಾಮ ಕೇಂದ್ರ ಸರಕಾರ ಈಡಿ ಯನ್ನು ಬಳಸಿ ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಅಕ್ರಮವಾಗಿ ಬಂದಿಸಿದೆ, ಒಂದು ವೇಳೆ ಅವರನ್ನು ಬಿಡುಗಡೆಗೊಳಿಸದಿದ್ದರೆ ಇನ್ನಷ್ಟು ತೀವ್ರವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಎಸ್ ಡಿಪಿಐ ಉಡುಪಿ ಜಿಲ್ಲಾ ಸಮಿತಿ ಸದಸ್ಯೆ ನಸೀಮಾ ಫಾತಿಮಾ ಮಾತನಾಡಿ ನಮ್ಮ ನಾಯಕರನ್ನು ಬಂಧನ ಮಾಡಿ ಹೋರಾಟವನ್ನು ತಡೆಯಲು ನಿಮಗೆ ಸಾಧ್ಯವಿಲ್ಲ, ನೀವು ಒಬ್ಬ ನಾಯಕರನ್ನು ಬಂಧಿಸಿದರೆ ಇಂತಹ ಸಾವಿರ ನಾಯಕರು ಹುಟ್ಟಿ ಬರಲಿದ್ದಾರೆ ಎಂದು ಎಚ್ಚರಿಸಿದರು.
ಈ ಸಂದರ್ಬದಲ್ಲಿ ಎಸ್ ಡಿಪಿಐ ಉಡುಪಿ ಜಿಲ್ಲಾ ನಾಯಕರಾದ ಅಬ್ದುಲ್ ಅಜೀಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
