ಐಪಿಎಲ್-2025 ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಆಟಗಾರರಿಗೆ ಬಿಸಿಸಿಐ ಹಲವಾರು ನಿಮಯಗಳನ್ನು ವಿಧಿಸಿದೆ. ನಿಯಮಗಳಂತೆ, ಎಲ್ಲ ಆಟಗಾರರು ಕಡ್ಡಾಯವಾಗಿ ತಂಡದ ಬಸ್‌ನಲ್ಲಿ ಮಾತ್ರವೇ ಪ್ರಯಾಣಿಸಬೇಕು. ಪಂದ್ಯವಿಲ್ಲದ ದಿನಗಳಲ್ಲಿಯೂ ಸಹ ಕುಟುಂಬ ಸದಸ್ಯರು ಡ್ರೆಸ್ಸಿಂಗ್ ರೂಮ್‌ಗಳಿಗೆ ಪ್ರವೇಶಿಸಬಾರದು. ಆಟಗಾರರು ತೋಳುಗಳಿಲ್ಲದ ಜರ್ಸಿಗಳನ್ನು ಧರಿಸುವಂತಿಲ್ಲ ಎಂಬ ನಿಮಯಗಳು ಸೇರಿವೆ.
ಬಿಸಿಸಿಐ ಜಾರಿಗೆ ತಂದಿರುವ ನಿಮಯಗಳು;
- ಆಟಗಾರರು ಕಡ್ಡಾಯವಾಗಿ ತಂಡದ ಬಸ್‌ನಲ್ಲಿಯೇ ಪ್ರಯಾಣಿಸಬೇಕು.
- ಪಂದ್ಯಾವಳಿ ಆರಂಭವಾಗಿ, ಮುಕ್ತಾಯಗೊಳ್ಳುವವರೆಗೂ ಡ್ರೆಸ್ಸಿಂಗ್ ಕೊಠಡಿ ಮತ್ತು ಆಟದ ಮೈದಾನಕ್ಕೆ ಮಾನ್ಯತೆ ಪಡೆದ ಸಿಬ್ಬಂದಿಗೆ ಮಾತ್ರ ಪ್ರವೇಶ.
- ಆಟಗಾರರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಅವರದ್ದೇ ಅಥವಾ ಇತರ ವಾಹನದಲ್ಲಿ ಪ್ರಯಾಣಿಸಬಹುದು. ಆತಿಥ್ಯ ಪ್ರದೇಶದಿಂದ ತಂಡದ ಅಭ್ಯಾಸವನ್ನು ವೀಕ್ಷಿಸಬಹುದು.
- ಓಪನ್ ನೆಟ್ ಅಭ್ಯಾಸಕ್ಕೆ ಅನುಮತಿ ಇಲ್ಲ. ನೆಟ್‌ಗಳ ನಡುವೆಯೇ ಅಭ್ಯಾಸ ನಡೆಸಬೇಕು.
- ಅಭ್ಯಾಸದ ವೇಳೆ ಒಂದು ತಂಡ ಬಳಿಸಿದ ವಿಕೆಟ್‌ಗಳನ್ನು ಮತ್ತೊಂದು ತಂಡ ಬಳಸಲು ಅವಕಾಶವಿಲ್ಲ.
- ಪಂದ್ಯದ ದಿನ ಯಾವುದೇ ತಂಡವು ಅಭ್ಯಾಸ ನಡೆಸಲು ಅನುಮತಿ ಇಲ್ಲ.
- ಪಂದ್ಯದ ದಿನದಂದು ಮುಖ್ಯ ಸ್ಕ್ವೇರ್‌ನಲ್ಲಿ ಯಾವುದೇ ಫಿಟ್‌ನೆಸ್ ಪರೀಕ್ಷೆ ನಡೆಯಲ್ಲ.
- ಆಟಗಾರರು ಮತ್ತು ಸಹಾಯಕ ಸಿಬ್ಬಂದಿ LED ಬೋರ್ಡ್‌ಗಳ ಮುಂದೆ ಕುಳಿತುಕೊಳ್ಳುವಂತಿಲ್ಲ.
- ಆಟಗಾರರು ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಧರಿಸಬೇಕು. ಆಟಗಾರರಿಗೆ ಧರಸಲು ಸಾಧ್ಯವಾಗದ ಸಮಯದಲ್ಲಿ ಕನಿಷ್ಠ ಮೊದಲ ಎರಡು ಓವರ್‌ಗಳವರೆಗೆ ಧರಿಸಬೇಕು.
- ಪಂದ್ಯದ ನಂತರದ ಪ್ರೆಸೆಂಟೇಶನ್ ಸಮಯದಲ್ಲಿ ತೋಳುಗಳಿಲ್ಲದ ಜೆರ್ಸಿಯನ್ನು ಧರಿಸುವಂತಿಲ್ಲ.
- ಪಂದ್ಯದ ದಿನಗಳಲ್ಲಿ ತಂಡದ ವೈದ್ಯರು ಸೇರಿದಂತೆ 12 ಮಾನ್ಯತೆ ಪಡೆದ ಸಹಾಯಕ ಸಿಬ್ಬಂದಿಗೆ ಮಾತ್ರ ಅವಕಾಶವಿರುತ್ತದೆ.