ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರಹಳ್ಳಿ, ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುರಿ ಕಳ್ಳತನ ಮಾಡುತ್ತಿದ್ದ ಐದು ಮಂದಿ ಕಳ್ಳರ ಗ್ಯಾಂಗ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಂಚಾರಹಳ್ಳಿ, ಬಟ್ಲಹಳ್ಳಿ, ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಕಡೆಗಳಲ್ಲಿ ಕುರಿಗಳು ಕಳ್ಳತನವಾಗಿರುವ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಕುರಿ ಕಳ್ಳರನ್ನು ಸೆರೆಹಿಡಿಯಲು ಜಿಲ್ಲಾ ರಕ್ಷಣಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಪೊಲೀಸ್ ಅಧೀಕ್ಷಕ ರಾಜಾ ಇಮಾಮ್ ಖಾಸೀಂ, ಚಿಂತಾಮಣಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮುರಳಿಧರ ನೇತೃತ್ವದ ತಂಡ ಯೋಜನೆ ಹಾಕಿತ್ತು.
ಪೊಲೀಸ್ ಅಧಿಕಾರಿಗಳ ತಂಡದ ಯೋಜನೆಯಂತೆ ಅಭಿಯಾನ ಆರಂಭಿಸಿದ್ದು, ಕುರಿಗಳನ್ನು ಕಳ್ಳತನ ಮಾಡುತ್ತಿದ್ದ ಬೆಂಗಳೂರಿನ ಬಿಟಿಎಂ ಲೇಔಟ್‌ನ ಹೊಸ ಗುರಪ್ಪನ ಪಾಳ್ಯದ ಇರ್ಫಾನ್ ಪಾಷ(30), ಬೊಮ್ಮನಹಳ್ಳಿ 2ನೆ ಕ್ರಾಸ್ ಸೈಯದ್ ನವೀದ್(25), ಜೆಪಿನಗರದ ಸಯ್ಯದ್ ಮಾಷನ್(25) ಶಿಕಾರಿಪಾಳ್ಯದ ಸಯ್ಯದ್ ವಸೀಂ(25) ಮತ್ತು ಸಯ್ಯದ್ ವಸೀಂ(23) ಎಂಬ ಅರೋಪಿಗಳನ್ನು ಬಂಧಿಸಿ ಅವರಿಂದ ₹2.50 ಲಕ್ಷ ಹಣ, ವೋಕ್ಸ್ ವ್ಯಾಗನ್ ವೆಂಟೋ ಕಾರು ಹಾಗೂ 5 ಮೊಬೈಲ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಸಿಎಂ ಭೇಟಿ; 27 ಅಂಶಗಳ ಕಾರ್ಯಸೂಚಿ ಹಸ್ತಾಂತರ
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಲಾಘನೆ ವ್ಯಕ್ತಪಡಿಸಿದ್ದಾರೆ.