ಮೈಸೂರಿನ ರೋಟರಿ ಭವನದಲ್ಲಿ ಇತ್ತೀಚೆಗೆ ನಡೆದ ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಮಂಡ್ಯ ಜಿಲ್ಲೆಯನ್ನೊಳಗೊಂಡ 8 ಜಿಲ್ಲೆಗಳ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗದ ಮಟ್ಟದ ಸರ್ವ ಸದಸ್ಯರ ಸಭೆ ಮತ್ತು ದಲಿತ ಚಳುವಳಿಯ ವರ್ತಮಾನದ ಸವಾಲುಗಳು ಮತ್ತು ಮಾರ್ಗೋಪಾಯಗಳು ವಿಚಾರ ಸಂಕಿರಣ ನಡೆಯಿತು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಪ್ರಧಾನ ಸಂಚಾಲಕರಾದ ಅಣ್ಣಾ ಮಾವಳ್ಳಿ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗೀಯ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಉಡುಪಿ ಜಿಲ್ಲೆಯ ಕ್ರಿಯಾತ್ಮಕ ದಲಿತ ಹೋರಾಟಗಾರ ಶ್ಯಾಮರಾಜ್ ಬಿರ್ತಿಯವರನ್ನು ಮೈಸೂರು ವಿಭಾಗೀಯ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.
ಶಾಮ್ ರಾಜ್ ಬಿರ್ತಿಯವರು ಉಡುಪಿ ಜಿಲ್ಲೆಯಲ್ಲಿ ಸುಮಾರು ಮೂರು ದಶಕಗಳಿಂದ ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಚಲೋ ಉಡುಪಿ, ಮುಂತಾದ ಐತಿಹಾಸಿಕ ಚಳುವಳಿಯನ್ನು ಸಂಘಟಿಸಿದ, ತುಮಕೂರು ಚಲೋ, ಬಿಜಾಪುರ ಚಲೋ, ಮಡಿಕೇರಿ ಚಲೋ ಮುಂತಾದ ರಾಜ್ಯ ಮಟ್ಟದ ಹೋರಾಟದಲ್ಲಿ ತನ್ನನ್ನು ಅರ್ಪಿಸಿಕೊಂಡಂತಹ, ದೇಶದ ಯಾವುದೇ ಮೂಲೆಯಲ್ಲಿ ದೌರ್ಜನ್ಯಗಳಾದಗಲೂ ಅದರ ವಿರುಧ್ಧ ಸಿಡಿದೆದ್ದು ಪ್ರತಿಭಟನೆಯನ್ನು ಸಂಘಟಿಸುವ ಜಿಲ್ಲೆಯ ಕ್ರಿಯಾತ್ಮಕ ದಲಿತ ಹೋರಾಟಗಾರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸುಂದರ ಮಾಸ್ತರ್ ಮತ್ತು ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಇವರ ವತಿಯಿಂದ ಸಮಸ್ತ ಉಡುಪಿ ಜಿಲ್ಲೆಯ ದ.ಸಂ.ಸ. ಅಂಬೇಡ್ಕರ್ ವಾದದ ವತಿಯಿಂದ ಶಾಮ್ ರಾಜ್ ಬಿರ್ತಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
