ಮೈಸೂರು ನಗರದ ಚಾಮುಂಡಿ ಪುರಂನಲ್ಲಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಎರಡು ತಿಂಗಳ ಕಾಲ ‘ ನೀರುಣಿಸಿ – ಜೀವವನ್ನುಳಿಸಿ ‘ ಅಭಿಯೋಜನೆಯ ಮೂಕ ಸ್ಪಂದನ ಅಭಿಯಾನದ ಪೋಸ್ಟರನ್ನು ನಟ ಪ್ರಜ್ವಲ್ ದೇವರಾಜ್ ಬಿಡುಗಡೆ ಮಾಡಿ ‘ ಪ್ರಾಣಿ ಪಕ್ಷಿ ಸಂಕುಲ ಉಳಿಸಿ ‘ಎಂದು ಕರೆ ನೀಡಿದರು.
” ಬೇಸಿಗೆಯ ತಾಪಮಾನದ ತೀವ್ರತೆಯಿಂದಾಗಿ ಪ್ರಾಣಿ, ಪಕ್ಷಿ ಸಂಕುಲ ಬಳಲುತ್ತವೆ. ಕುಡಿಯುವ ನೀರು, ಆಹಾರಕ್ಕಾಗಿ ಪರಿತಪಿಸುತ್ತವೆ. ಆದ್ದರಿಂದ ‘ ಪರಿಸರ ರಕ್ಷತಿ ರಕ್ಷಿತಃ ‘ ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಎರಡು ತಿಂಗಳ ಕಾಲ ‘ನೀರುಣಿಸಿ-ಜೀವವನ್ನುಳಿಸಿ ‘ ಅಭಿಯೋಜನೆಯನ್ನು ಮೈಸೂರು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ರೂಪಿಸುತ್ತಿರುವುದು ಅತ್ಯುತ್ತಮವಾದ ಕೆಲಸ, ಬೇಸಿಗೆಯ ದಿನ ಇನ್ನೇನು ಆರಂಭಗೊಂಡಿದ್ದು ಪ್ರಾಣಿ, ಪಕ್ಷಿಗಳು ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸುವ ಹಾದಿಯಲ್ಲಿರುತ್ತವೆ. ಇಂತಹ ಸಮಯದಲ್ಲಿ ನೆರವಿಗೆ ದಾವಿಸುವುದು ಶ್ಲಾಘನಿಯ. ಸಮಾಜಮುಖಿ ಕೆಲಸ ಯಶಸ್ವಿಗೊಳ್ಳಲಿ ಸಾರ್ವಜನಿಕರು ಸಹ ಸೇವಾ ಕಾರ್ಯಕ್ಕೆ ಕೈ ಜೋಡಿಸಲಿ ” ಎಂದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮಾತನಾಡಿ ” ಪ್ರಾಣಿ, ಪಕ್ಷಿಗಳಿಗೆ ನೀರುಣಿಸುವ ಅಭಿಯಾನಕ್ಕೆ ಸಾರ್ವಜನಿಕರು ಸಹ ಸಹಕರಿಸಬೇಕು. ಮೈಸೂರು ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಪ್ರಾಣಿ,ಪಕ್ಷಿಗಳಿಗೆ ನೀರಿನ ತೊಟ್ಟಿ,ಮರಗಳಿಗೆ ನೀರಿನ ತಟ್ಟೆ, ಆಹಾರದ ತಟ್ಟೆ ಅಳವಡಿಸಿ, ಸುತ್ತಮುತ್ತ ಇರುವವರು ಪ್ರತಿನಿತ್ಯ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸಲಾಗುವುದು ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದಲಿತರ ಮೇಲಿನ ದೌರ್ಜನ್ಯ; ಆರೋಪಿಗಳನ್ನು ಕೂಡಲೇ ಬಂಧಿಸಿ : ಪ್ರಗತಿಪರ ಸಂಘಟನೆಗಳಿಂದ ಪಾದಯಾತ್ರೆ
ಪೋಸ್ಟರ್ ಬಿಡುಗಡೆ ವೇಳೆ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಪರಿಸರ ಪ್ರೇಮಿ ಪ್ರದೀಪ್ ಗೌಡ,ಅಮಿತ್ ಕುಮಾರ್, ಮಹಾನ್ ಶ್ರೇಯಸ್, ಸಚಿನ್ ನಾಯಕ್ ಸೇರಿದಂತೆ ಇನ್ನಿತರರು ಇದ್ದರು.