ಸೊರಬ ತಾಲೂಕಿನ ಆನವಟ್ಟಿಯ ಕುಬಟೂರು ಗ್ರಾಮದ ಚೆಲುವ ನಗರದಲ್ಲಿ ಕುಡಿಯುವ ನೀರನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕ ಹಿನ್ನೆಲೆ ಸಚಿವ ಮಧು ಬಂಗಾರಪ್ಪ ಅವರನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ಗ್ರಾಮಸ್ಥರ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವ, ಇಂದು ಕುಬಟೂರು ಗ್ರಾಮದ ಚೆಲುವ ನಗರದಲ್ಲಿ ತಮ್ಮ ವೈಯಕ್ತಿಕ ಸಹಾಯದಿಂದ ಬೋರ್ವೆಲ್ ಕೊರೆಸಿ ಗ್ರಾಮದ ಬಹುದಿನ ಬೇಡಿಕೆಗೆ ಸ್ಪಂದಿಸಿದ್ದಾರೆ. ಸುಮಾರು 5 ಇಂಚ್ ನೀರು ಹೊರ ಬಂದಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಸಚಿವ ಮಧು ಬಂಗಾರಪ್ಪನವರ ಸಮಾಜಮುಖಿ ಕಾರ್ಯವನ್ನು ಸ್ಮರಿಸಿ ಅಭಿನಂದಿಸಿದರು.
ಇದನ್ನೂ ಓದಿ: ಸೊರಬ | ಆಯುಧಗಳನ್ನು ಜವಾಬ್ದಾರಿಯುತವಾಗಿ ಬಳಕೆ ಮಾಡಿ: ಸಚಿವ ಮಧು ಬಂಗಾರಪ್ಪ
