ಈಜಲು ಹೋದ ಯುವಕ ನೀರು ಪಾಲಾದ ಘಟನೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ಮತ್ತಿಘಟ್ಟ ಗ್ರಾಮದ ಕೆರೆಯಲ್ಲಿ ಶುಕ್ರವಾರ ನಡೆದಿದೆ.
ಮತ್ತಿಘಟ್ಟ ಗ್ರಾಮದ ನಿವಾಸಿ ಜಯರಾಂ (34) ಮೃತ ನತದೃಷ್ಟ. ಹೆಚ್ಚಿದ ಬಿಸಿಲಿಗೆ ಕೆರೆಯಲ್ಲಿ ಈಜಲು ಹೋದ ಯುವಕ ಜಯರಾಂ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು ನೀರಿನಲ್ಲಿ ಮುಳುಗಿರುವ ಶಂಕೆಯಲ್ಲಿ ದೇಹ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಸಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಗುಬ್ಬಿ ಪೊಲೀಸರು ಅಗ್ನಿಶಾಮಕದಳ ಹಾಗೂ ಮುಳುಗು ತಜ್ಞರನ್ನು ಕರೆಸಿ ಮೃತದೇಹ ಪತ್ತೆಗೆ ನಿರಂತರ ಶೋಧ ನಡೆಸಲಾಗಿದೆ. ಪೊಲೀಸರು ಮುಕ್ಕಾಂ ಹೂಡಿದ್ದಾರೆ.