ರಾಮ ಮಂದಿರ ಟ್ರಸ್ಟ್‌ಗೆ ಅಕ್ರಮವಾಗಿ ದೇವಾಲಯದ ಭೂಮಿ ಮಾರಾಟ ಮಾಡಿದ ಆರೋಪದಲ್ಲಿ ಅಯೋಧ್ಯೆಯ ಮಂದಿರವೊಂದರ ಮಾಜಿ ಅರ್ಚಕರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಅಯೋಧ್ಯೆಯ ದೇವಾಲಯದ ಮಾಜಿ ಅರ್ಚಕ ಅಕ್ರಮವಾಗಿ ದೇವಾಲಯದ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಮ ಮಂದಿರ ಉದ್ಘಾಟನೆಗೆ ದಲಿತರು, ಹಿಂದುಳಿದವರನ್ನು ಆಹ್ವಾನಿಸದ ಮೋದಿ ಸರ್ಕಾರ: ರಾಹುಲ್ ವಾಗ್ದಾಳಿ
ಆರೋಪಿ ಅರ್ಚಕ ರಮಕಾಂತ ಪಾಠಕ್ ಅಕ್ರಮವಾಗಿ 21,198.8 ಚದರ ಮೀಟರ್ ಆನಂದ ಭವನ ಮಂದಿರದ ಭೂಮಿಯನ್ನು ಟ್ರಸ್ಟ್‌ಗೆ ಮಾರಿದ್ದಾರೆ. 2024ರ ಸೆಪ್ಟೆಂಬರ್ 21ರಂದು ಆರು ಕೋಟಿ ರೂಪಾಯಿಗೆ ಈ ಭೂಮಿಯನ್ನು ಅಕ್ರಮ ಮಾರಾಟ ಮಾಡಿದ್ದಾರೆ ಎಂದು ಫರಿದಾಬಾದ್‌ನ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರಾಟ ಪತ್ರದಲ್ಲಿ ತಪ್ಪು ಮಾಹಿತಿಯಿತ್ತು ಎಂದು ಹೇಳಲಾಗಿದೆ.
ಆನಂದ ಭವನ ದೇವಾಲಯದ ಸಮಿತಿಯು ಈ ಭೂಮಿಯನ್ನು ರಿಜಿಸ್ಟಾರ್ ಮಾಡಿಕೊಂಡಿದ್ದು, ಯಾವುದೇ ವ್ಯಕ್ತಿಗೂ ಈ ಭೂಮಿಯನ್ನು ಮಾರಾಟ ಮಾಡುವ ಹಕ್ಕಿಲ್ಲ ಎಂದು ಉಲ್ಲೇಖಿಸಲಾಗಿದೆ ಎಂದು ದೂರುದಾರರು ಹೇಳಿದ್ದಾರೆ.
ರಮಕಾಂತ್ ಪಾಠಕ್ ಅವರನ್ನು 2016ರಲ್ಲೇ ಆನಂದ ಭವನ ದೇವಾಲಯದ ಅರ್ಚಕ ಸ್ಥಾನದಿಂದ ತೆಗೆದುಹಾಕಲಾಗಿತ್ತು. ರಮಕಾಂತ್ ಅವರ ಕೆಲವು ವರ್ತನೆಗಳು ಸಂಶಯಾಸ್ಪದವಾಗಿದ್ದ ಕಾರಣದಿಂದಾಗಿ ಅವರನ್ನು ಅರ್ಚಕ ಸ್ಥಾನದಿಂದ ಕೆಳಗಿಸಲಾಗಿತ್ತು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?
ಇನ್ನು ದೇವಾಲಯದ ಸಮಿತಿಗೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಆದರೆ ಪೊಲೀಸರು ಯಾವ ಕ್ರಮವನ್ನು ಕೂಡಾ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಬಳಿಕ ದೇವಾಲಯದ ಸಮಿತಿ ಸದಸ್ಯ ಆನಂದ್ ಪ್ರಕಾಶ್ ಪಾಠಕ್ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. “ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್‌ಎಚ್‌ಒ ಅಶ್ವಿನಿ ಪಾಂಡೆ ತಿಳಿಸಿದ್ದಾರೆ.
