ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸರಳ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸರಳ ಕಾರ್ಯಕ್ರಮದಲ್ಲಿ ಆಶಾಕಾರ್ಯಕರ್ತೆಯರ ಪರವಾಗಿ ಕೋವಿಡ್ ಸಂದರ್ಭದಲ್ಲಿ ಗಮನೀಯ ಕರ್ತವ್ಯ ನಿರ್ವಹಿಸಿದ್ದ ಆಶಾರವರನ್ನು, ಯುವಪೀಳಿಗೆಯನ್ನು ಪ್ರೋತ್ಸಾಹಿಸುತ್ತ ಯುವಪೀಳಿಗೆಗೆ ಮಾದರಿಯಾಗಿರುವ ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಿಳೆಯರ ಆತ್ಮರಕ್ಷಣೆಗಾಗಿ ಕರಾಟೆ ಪಟು ಮುರಳಿಯವರು ಕರಾಟೆ ತರಬೇತಿ ನೀಡಿದರು.
ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೀಶ್ ಸಾಧಕ ಮಹಿಳೆಯರನ್ನು ಎನ್‌ಎಸ್‌ಯುಐ ಕಾರ್ಯವನ್ನು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬೆನ್ನಿಗೆ ಚೂರಿ ಇರಿಯುವ ಸರ್ಕಾರದ ನಡೆ ಖಂಡನೀಯ: ಎಐಡಿಎಸ್‌ಒ ಸಂಚಾಲಕ ಗಂಗರಾಜ್ ಅಳ್ಳಳ್ಳಿ
ಸನ್ಮಾನ ಸ್ವೀಕರಿಸಿದ ಪ್ರಿಯಾಂಕ ಮಾತನಾಡಿ, “ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು. ಅವರು ಪುರುಷರಿಗಿಂತ ಕಡಿಮೆಯಿಲ್ಲ. ಮಹಿಳೆಯರನ್ನು ಪ್ರೋತ್ಸಾಹಿಸಬೇಕಷ್ಟೆ. ಮಹಿಳೆ ಎಂದಾಕ್ಷಣ ಹಿಂಜರಿಯಬೇಕಿಲ್ಲ. ಸಾಧನೆ ಮಾಡುವವರನ್ನು ತಡೆಯುವುದು ಸಾಧ್ಯವೂ ಇಲ್ಲ. ಎನ್‌ಎಸ್‌ಯುಐ ವಿದ್ಯಾರ್ಥಿಯನಿರಿಗಾಗಿ ಹಮ್ಮಿಕೊಂಡಿರುವ ಕರಾಟೆ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಹೇಳಿದರು.