ಸಾಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಳೆಸಾಲು ಎಂಬ ಹದಿನೈದು ದಿನದ ಮಾಸಿಕ ಭಿತ್ತಿ ಪತ್ರಿಕೆಯನ್ನು ಕಾಲೇಜಿನ ಸಮಾರೋಪ ಸಮಾರಂಭದಲ್ಲಿ ಸಾಗರ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಬಿಡುಗಡೆಗೊಳಿಸಿದರು.
ಪತ್ರಿಕೆಯ ಸಂಪಾದಕರಾಗಿ ಕಾಲೇಜಿನ ಪ್ರಾಂಶುಪಾಲ ಸಣ್ಣಹನುಮಂತಪ್ಪ ಜಿ, ಪ್ರಧಾನ ಸಂಪಾದಕರಾಗಿ ಡಾ. ಕುಂಸಿ ಉಮೇಶ್ ಹಾಗೂ ಈ ಪತ್ರಿಕೆ ನಿರ್ವಾಹಕರು ಹಾಗೂ ಸಂಚಾಲಕರಾಗಿ ಅಮಿತ್ ಆರ್ ಆನಂದಪುರ ಮತ್ತು ಬಿಂದು ರವರ ನೇತೃತ್ವದಲ್ಲಿ ಪತ್ರಿಕೆ ಸಿದ್ಧಗೊಳಿಸಲಾಗಿತ್ತು. ಈ ಪತ್ರಿಕೆಯಲ್ಲಿ ಹಲವು ಲೇಖನಗಳು, ಕವನಗಳು, ಚುಟುಕುಗಳು ಮತ್ತು ಸುದ್ದಿ ಸಮಾಚಾರಗಳನ್ನು ಸಂಗ್ರಹಿಸಲಾಗಿತ್ತು.
ಇದನ್ನೂ ಓದಿ: ಸಾಗರ | ನಮ್ಮ ನಡೆ ವಿಜ್ಞಾನದ ಕಡೆ ಸಾಗಬೇಕು: ಹುಲಿಕಲ್ ನಟರಾಜ್
ಅಮಿತ್ ಎಂಬ ವಿದ್ಯಾರ್ಥಿ ಶಾಸಕರ ಕುರಿತು ವಿಶೇಷ ಲೇಖನ ಬರೆದಿದ್ದನ್ನು ನೋಡಿ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರು ಮತ್ತು ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.
