ಉಡುಪಿ ಜಿಲ್ಲೆಯ ಪ್ರತಿಷ್ಠಿತ ಆದರ್ಶ ಗ್ರಾಹಕರ ವಿವಿಧೋದ್ಧೇಶ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಆನಂದ ಪೂಜಾರಿ ಕಿದಿಯೂರು ಹಾಗೂ ಉಪಾಧ್ಯಕ್ಷರಾಗಿ ದಲಿತ ಚಿಂತಕ ಜಯನ್ ಮಲ್ಪೆ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ನಿರ್ದೇಶಕರಾಗಿ ಶ್ರೀ ಕೃಷ್ಣಮೂರ್ತಿ ಆಚಾರ್ಯ, ರೆನೋಲ್ಟ್ ಪ್ರಮೀಣ್ ಕುಮಾರ್, ಬಿ.ಎಲ್.ನರಸಿಂಹ ಸ್ವಾಮಿ, ಶ್ರೀಮತಿ ಸುಲೋಚನ ದಾಮೋದರ್, ಶ್ರೀಮತಿ ವಿನಯಪ್ರಕಾಶ್, ಶೇಖರ್ ಶೆಟ್ಟಿ, ಹರಿದಾಸ ಭಟ್, ಅನಂತ ನಾಯ್ಕ, ಮಹಮದ್ ರಫೀಕ್ ಖಾನ್, ಜಿತೇಶ್ ಕುಮಾರ್, ಶ್ಯಾಮ ಶೆಟ್ಟಿ ಇವರುಗಳು ಸರ್ವಾನುಮತದಿಂದ ಆಯ್ಕೆಯಾಗಿರುವುದಾಗಿ ಚುನಾವಣಾ ನಿರ್ವಹಣಾಧಿಕಾರಿ ಜಯಂತಿ ಎಸ್.ಘೋಷಿಸಿದ್ದಾರೆ.
