- ಶಿಗ್ಗಾವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಅಭಿಮತ
- ‘ವಿದ್ಯುತ್ ದರ ಹೆಚ್ಚಿಗೆ ಮಾಡಿರುವುದರಿಂದ ಜನರು ಬಿಲ್ ಕಟ್ಟಲು ನಿರಾಕರಿಸುತ್ತಿದ್ದಾರೆ’
ಉಚಿತ ಕೊಡುಗೆಗಳ ಭರದಲ್ಲಿ ಸರ್ಕಾರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಕಡಿತ ಮಾಡಬಾರದು. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅನುದಾನ ಕಡಿತವಾಗುವ ಸಾಧ್ಯತೆ ಇದೆ. ಸರ್ಕಾರ ಅದು ಆಗದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, “ಮಾಜಿ ಮುಖ್ಯಮಂತ್ರಿ ಎರಡು ಶಾಲಾ ಕೊಠಡಿಗಳ ಉದ್ಘಾಟನೆಗೆ ಬಂದಿದ್ದಾರೆ ಎಂದು ನಿಮಗೆ ಆಶ್ಚರ್ಯ ಆಗಬಹುದು. ನಾನು ರಾಜ್ಯದ ಭವಿಷ್ಯ ಬರೆಯುವ ದೇಗುಲಗಳ ಉದ್ಘಾಟನೆ ಮಾಡಿದ್ದೇನೆ” ಎಂದು ಮಾರ್ಮಿಕವಾಗಿ ನುಡಿದರು.
“ಒಂದು ಗ್ರಾಮಕ್ಕೆ ಕುಡಿಯುವ ನೀರು ಆರೋಗ್ಯದ ಜೊತೆಗೆ ಶಾಲಾ ಕೊಠಡಿಗಳು ಮುಖ್ಯವಾಗಿದೆ. ಅದಕ್ಕಾಗಿ ನಾನು ಶಾಲಾ ಕೊಠಡಿ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ. ವಿವೇಕ ಯೋಜನೆ ಅಡಿಯಲ್ಲಿ ಸುಮಾರು 9,235 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲು ಆದೇಶ ಮಾಡಿದ್ದೇವೆ. ರೈತನ ಭೂಮಿ ಎಷ್ಟಿದೆ ಅಷ್ಟೇ ಇದೆ. ಆದರೆ, ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಶಿಕ್ಷಣ ಅತ್ಯಂತ ಮುಖ್ಯ ಆದ್ದರಿಂದ ನಾನು ಶಿಕ್ಷಣಕ್ಕೆ 13% ಅನುದಾನ ನೀಡಿದ್ದೇನೆ. ಆರೋಗ್ಯ ಕ್ಷೇತ್ರಕ್ಕೆ 12% ಅನುದಾನ ನೀಡಿದ್ದೇನೆ. ನಮ್ಮ ಅವಧಿಯಲ್ಲಿ 15000 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಉಂಟಾದರೆ ನಮ್ಮ ಸ್ವಂತ ಟ್ರಸ್ಟ್ ನಿಂದ ಶಿಕ್ಷಕರ ನೀಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಲೆ ಏರಿಕೆಯಿಂದ ತತ್ತರಿಸಿದ ಜನರ ನೆರವಿಗಾಗಿ ಗ್ಯಾರಂಟಿಗಳನ್ನು ತರಬೇಕಾಯ್ತು: ದಿನೇಶ್ ಗುಂಡೂರಾವ್
ಕುಡಿಯುವ ನೀರಿಗೆ ಹಾಹಾಕಾರ
“ನಿರಂತರವಾಗಿ ವಿದ್ಯುತ್ ಸರಬರಾಜು ಮಾಡದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ವಿದ್ಯುತ್ ದರ ಹೆಚ್ಚಿಗೆ ಮಾಡಿರುವುದರಿಂದ ಜನರು ಬಿಲ್ ಕಟ್ಟಲು ನಿರಾಕರಿಸುತ್ತಿದ್ದಾರೆ. ದರ ಕಟ್ಟಲಿಲ್ಲಾ ಎಂದರೆ ಕರೆಂಟ್ ಸಪ್ಲೆ ಆಗುವುದಿಲ್ಲ. ರಾಜ್ಯದಲ್ಲಿ ಮಳೆ ಇಲ್ಲ, ಬರ ಆಗಿದೆ
ರೈತರಿಗೂ ಹಾಗೂ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗಿದೆ” ಎಂದರು.
ಜನಗಳಿಗೆ ಕುಡಿಯುವ ನೀರು ಸರಬರಾಜು ಆಗಲು ವಿದ್ಯುತ್ ಬೇಕು. ಬೋರ್ ವೆಲ್ ಗಳಿಂದ ಹಾಗೂ ಅನೇಕ ಕೆಲಸಗಳಿಗೆ ವಿದ್ಯುತ್ ಬೇಕೆ ಬೇಕು. ಸರ್ಕಾರ ವಿದ್ಯುತ್ ನೀಡದಿದ್ದರೆ ಕುಡಿಯುವ ನೀರಿಗೆ ಆಹಾಕಾರ ಆಗುತ್ತದೆ. ಹೈಡ್ರೊ ಎಲೆಕ್ಟ್ರಿಕ್ ಪವರ್ ಕೊರತೆ ಇದೆ. ಹೀಗಾಗಿ ವಿದ್ಯುತ್ ಇಲಾಖೆಯ ಎಲ್ಲಾ ನಿಗಮಗಳಿಗೆ ಹಣ ಬಿಡುಗಡೆ ಮಾಡಬೇಕು. ಇವರು ಸರಿಯಾದ ಕ್ರಮ ತಗೆದಕೊಳ್ಳದಿದ್ದರೆ, ವಿದ್ಯುತ್ ಶಕ್ತಿಯ ಕ್ಷಾಮ ಎದುರಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.