ಇತ್ತೀಚೆಗಷ್ಟೇ ಮುಗಿದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಾವಳಿಯಲ್ಲಿ ಭಾರತ ತಂಡ ಗೆದ್ದು, ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಟೂರ್ನಿಯ ಫೈನಲ್ ಪಂದ್ಯದಲ್ಲಿ ತಂಡ ಗೆಲ್ಲುವಲ್ಲಿ ಕೆ.ಎಲ್ ರಾಹುಲ್ ಅವರ ಆಟ ಬಹುಮುಖ್ಯ ಪಾತ್ರವಹಿಸಿದೆ. ತಮ್ಮ ಆಟದ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಎಲ್ ರಾಹುಲ್, “ನನ್ನ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುವ ಪರಿಸ್ಥಿತಿಗಳಲ್ಲಿ ನನ್ನನ್ನು ದೇವರು ಇರಿಸಿದ್ದಾನೆ” ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ, “ನಾನು ಯಾವಾಗಲೂ ಅದೇ ರೀತಿ ಮಾಡಲು ಸಾಧ್ಯವಾಗದು” ಎಂದೂ ಹೇಳಿದ್ದಾರೆ.
ಐಸಿಸಿ ಟೂರ್ನಿಯಲ್ಲಿ ಭಾರತವು ಫೈನಲ್ ಸೇರಿದಂತೆ ಐದು ಪಂದ್ಯಗಳನ್ನು ಆಡಿದೆ. ಈ ಪೈಕಿ, ಮೂರು ಪಂದ್ಯಗಳಲ್ಲಿ ಕೆ.ಎಲ್ ರಾಹುಲ್ ತಮ್ಮ ಉತ್ತಮ ಪ್ರದರ್ಶನದೊಂದಿಗೆ ತಂಡದ ಗೆಲುವಿಗೆ ಸಾಥ್ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಕೆ.ಎಲ್ ರಾಹುಲ್ 42 ರನ್ ಗಳಿಸಿದ್ದರು. ಉತ್ತಮ ಪ್ರದರ್ಶನ ನೀಡಿದ್ದರು. ಓಟ್ ಆಗದೇ ಆಡುವ ಮೂಲಕ ಮೊದಲ ಪಂದ್ಯದ ಗೆಲುವಿಗೆ ನೆರವಾರದು.
ಆಸ್ರೇಲಿಯಾ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಔಟ್ ಆದಾಗ ಭಾವುಕರಾದ ಕೆ.ಎಲ್ ರಾಹುಲ್ ಪಂದ್ಯದ ಫಿನಿಷರ್ ಆಗಿ ಕಾಣಿಸಿಕೊಂಡರು. ಇನ್ನು, ನ್ಯೂಜಿಲೆಂಡ್ ವಿರುದ್ದದ ಫೈನಲ್ ಪಂದ್ಯದಲ್ಲಿ ರಾಹುಲ್ ಅವರ ಆಟ ಪ್ರೇಕ್ಷಕರ ಮನ ಗೆದ್ದಿತ್ತು. ಅಜೇಯರಾಗಿ ಉಳಿದ ರಾಹುಲ್, 34 ರನ್ ಗಳಿಸಿ ತಂಡವು ಟ್ರೋಫಿ ಗೆಲ್ಲಲು ನಿರ್ಣಾಯಕ ಪಾತ್ರವಹಿಸಿದರು.
ಈ ವರದಿ ಓದಿದ್ದೀರಾ?: ‘ರಾಜ್ಯಕ್ಕೆ ತೆರಿಗೆ ಪಾಲನ್ನೂ ನೀಡದೆ, ಸೆಸ್-ಸರ್ಚಾರ್ಜ್‌ಗಳನ್ನೂ ಹೆಚ್ಚಿಸಿಕೊಂಡು ನುಂಗುತ್ತಿದೆ ಮೋದಿ ಸರ್ಕಾರ’
ಪಂದ್ಯದಲ್ಲಿ ತಮ್ಮ ಆಟದ ಬಗ್ಗೆ ಮಾತನಾಡಿರುವ ರಾಹುಲ್, “ಇದಕ್ಕಿಂತ ಉತ್ತಮವಾದ ಭಾವನೆ ಮತ್ತೊಂದಿಲ್ಲವೆಂದು ನಾನು ಭಾವಿಸುತ್ತೇನೆ. ಒಂದೆರಡು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ, ‘ಇಂದಿನಿಂದ ನನ್ನ ಸಂಪೂರ್ಣ ಗಮನ ಪ್ರಶಸ್ತಿಗಳನ್ನು ಗೆಲ್ಲುವುದು’ ಎಂದಿದ್ದೆ. ಈಗ, ನನ್ನ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುವ ಪರಿಸ್ಥಿತಿಗಳಲ್ಲಿ ದೇವರು ನನ್ನನ್ನು ಇರಿಸಿದ್ದಾನೆ” ಎಂದು ಹೇಳಿದ್ದಾರೆ.
“ಆದರೆ, ನಾನು ಯಾವಾಗಲೂ ಅದೇ ರೀತಿ ಮಾಡಲು ಸಾಧ್ಯವಾಗದಿರಬಹುದು. ಆದರೆ, ದೃಢತೆಯಿಂದ ಆಡುತ್ತೇನೆ. ನಾವು ವಿನಮ್ರರಾಗಿದ್ದರೆ, ಹೃದಯವನ್ನು ಸರಿಯಾದ ಸ್ಥಳದಲ್ಲಿಟ್ಟರೆ, ಕಠಿಣ ತರಬೇತಿಯಲ್ಲಿ ತೊಡಗಿಕೊಂಡರೆ ಗೆಲುವು ಸಾಧ್ಯ. ಅದೇ ಕ್ರೀಡೆಯ ಸೌಂದರ್ಯ” ಎಂದು ಹೇಳಿದ್ದಾರೆ.