ಕರುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಮೈಸೂರಿನ ಬಂಡಿಪಾಳ್ಯದಲ್ಲಿ ಮೊಂಬತ್ತಿ ಬೆಳಗಿಸುವುದರ ಮೂಲಕ ಪ್ರತಿಭಟನೆ ನಡೆಸಿ ಸೌಜನ್ಯ ಹತ್ಯೆ ಪ್ರಕರಣ ಮರು ತನಿಖೆ ನಡೆಸುವಂತೆ ಆಗ್ರಹಿಸಿದರು.
ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ಹನ್ನೆರೆಡು ವರ್ಷಗಳ ಹಿಂದೆ ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಬಂದಿಸಲಾಗಿದ್ದ ಸಂತೋಷ್ ರಾವ್ ಅವರನ್ನು ನಿರಪರಾಧಿ ಎಂದು ಪರಿಗಣಿಸಿ ನ್ಯಾಯಾಲಯವು ಬಿಡುಗಡೆ ಮಾಡಿದೆ. ಹಾಗಾದರೆ, ನಿಜವಾಗಿಯೂ ಸೌಜನ್ಯಳ ಮೇಲೆ ಬರ್ಬರವಾಗಿ ಅತ್ಯಾಚಾರ ನಡೆಸಿ, ಕ್ರೂರವಾಗಿ ಕೊಲೆ ಮಾಡಿರುವುದು ಯಾರು? ಈ ಕೂಡಲೇ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಮರು ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಾಕ್ಷಿಗಳ ನಾಶ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸಾಕ್ಷಿ ನಾಶ ಆಗಿದೆ ಎಂದು ನ್ಯಾಯಾಲಯವೇ ಮೇಲ್ನೋಟಕ್ಕೆ ತಿಳಿಸಿರುವುದರಿಂದ, ಸಂಬಂಧಪಟ್ಟವರ ಮೇಲೆ ಕಾನೂನಿನ ಅಡಿಯಲ್ಲಿ ಸೂಕ್ತ ತನಿಖೆ ನಡೆಸಿ ಕಾರಣಗಳನ್ನ ಪಡೆದುಕೊಳ್ಳುವುದರ ಜೊತೆಗೆ, ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ತನಿಖೆ ನಡೆಸಿ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಸಿಲಿನ ತಾಪಕ್ಕೆ ಬರಿದಾದ ಕೆರೆಕಟ್ಟೆ; ನಾಗರಹೊಳೆಯಲ್ಲಿ ಪ್ರಾಣಿಗಳ ದಾಹ ಇಂಗಿಸಲು ಟ್ಯಾಂಕರ್ ಮೂಲಕ ನೀರು
ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಕೆ ವೇಣುಗೋಪಾಲ್,ರಾಜ್ಯ ಗೌರವಾಧ್ಯಕ್ಷ ಎಂ ರಾಮೇಗೌಡ ,ರಾಜ್ಯಾಧ್ಯಕ್ಷ ಬಸವರಾಜು ,ಮಹಿಳಾ ರಾಜ್ಯ ಕಾರ್ಯದರ್ಶಿ ಸವಿತಾ ಎಸ್ ಗೌಡ, ಮಂಜುಳಾ , ರಾಜ್ಯ ಕಾರ್ಯದರ್ಶಿ ಸತೀಶ್, ರಾಜ್ಯ ಯುವ ಘಟಕದ ಅಧ್ಯಕ್ಷ ಸಂಜಯ್ ಜಿಲ್ಲಾ ಕಮಿಟಿ ಸದಸ್ಯರಾದ ಸಂತೋಷ್, ರವಿ ,ಸುರೇಶ್, ನಿತೀಶ್, ಮಹೇಶ್ ,ನಾಗೇಶ್ ಇನ್ನಿತರ ಪದಾಧಿಕಾರಿಗಳು ಇದ್ದರು.