ಕಲಬುರಗಿ | ಸಿಯುಕೆ ಘಟಿಕೋತ್ಸವ; ಅಟ್ರಾಸಿಟಿ ಆರೋಪಿ ಉಪಕುಲಪತಿಯ ಅಭಿನಂದನೆ ತಿರಸ್ಕರಿಸಿದ ಸಂಶೋಧನಾರ್ಥಿ ನಂದಪ್ಪ ಪಿ

Date:

Advertisements

ಕಲಬುರಗಿಯಲ್ಲಿ ನಡೆದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದ ಎಂಟನೇ ಘಟಿಕೋತ್ಸವದಲ್ಲಿ ವೇದಿಕೆಯ ಮೇಲೆ ಸಂಶೋಧನಾ ವಿದ್ಯಾರ್ಥಿ ಉಪಕುಲಪತಿಗಳ ಶುಭಾಶಯಗಳನ್ನು ತಿರಸ್ಕರಿಸಿದ ಕಾರಣ ಕುಲಪತಿ ಬಟ್ಟು ಸತ್ಯನಾರಾಯಣ ಅವರಿಗೆ ಮುಜುಗರದ ಸಂಗತಿಗಳು ಎದುರಾದವು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ. ಆರ್ ಆರ್ ಬಿರಾದಾರ ಹಾಗೂ ಭದ್ರತಾ ಅಧಿಕಾರಿ ಮಿಥಿಲೇಶ್ ವಿರುದ್ಧ‌ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ(ಅಟ್ರಾಸಿಟಿ) ಪ್ರಕರಣದಡಿ ದೂರು ದಾಖಲಾಗಿದ್ದು, ಈ ಪ್ರಕರಣ ಈಗ ಕಲಬುರಗಿಯ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇವರ ವಿರುದ್ಧ ಆರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಹಾಗಾಗಿ ಇವರು ಘಟಿಕೋತ್ಸವದಲ್ಲಿ ಭಾಗವಹಿಸಬಾರದೆಂದು ಹಲವರು ವಿರೋಧ ವ್ಯಕ್ತಪಡಿಸಿದ್ದರೂ ಕೂಡಾ ಮಂಗಳವಾರ ನಡೆದ ವಿವಿ ಘಟಿಕೋತ್ಸವದಲ್ಲಿ ಅವರು ಭಾಗಿಯಾಗಿದ್ದಾರೆ.

ವಿಶ್ವಸಂಸ್ಥೆಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಂದಪ್ಪ ಪಿ ಪಿಎಚ್‌ಡಿ ಪದವಿ ಪ್ರಮಾಣಪತ್ರವನ್ನು ಸ್ವೀಕರಿಸುವಾಗ ಪ್ರೊ. ಸತ್ಯನಾರಾಯಣ ಅವರು ವಿದ್ಯಾರ್ಥಿಯನ್ನು ಅಭಿನಂದಿಸಲು ಮುಂದಾದಾಗ ಅವರೊಂದಿಗೆ ಕೈಕುಲುಕಲು ನಿರಾಕರಿಸಿದ ನಂದಪ್ಪ ಮುಖ್ಯ ಅತಿಥಿ ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಅವರಿಂದ ತಮ್ಮ ಪ್ರಮಾಣಪತ್ರವನ್ನು ಸ್ವೀಕರಿಸಿ ಶುಭಾಶಯಗಳಿಗೆ ಪ್ರತಿಕ್ರಿಯಿಸಿದರು.

Advertisements
ನಂದಪ್ಪ ಪಿ

ಪಿಎಚ್‌ಡಿ ಪ್ರಮಾಣಪತ್ರಕ್ಕಾಗಿ ನಂದಪ್ಪ ಅವರ ಹೆಸರನ್ನು ಕರೆಯಲಾಗಿದ್ದರೂ, ಪೊಲೀಸ್ ಸಿಬ್ಬಂದಿ ಈ ಮಧ್ಯೆ, ಜಾಗರೂಕತೆಯಿಂದ ವೇದಿಕೆಯ ಕಡೆಗೆ ಚಲಿಸಿದರು. ವೇದಿಕೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚು ಗಮನ ಹರಿಸಿದರು.

ವಿವಿಯ ಕುಲಪತಿಗಳ ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ ಬರೆದು ಸಂಚಲನ ಮೂಡಿಸಿದ ಸಂಶೋಧನಾರ್ಥಿ ನಂದಪ್ಪ ಪಿ ಕೂಡ ಅದೇ ಆರೋಪಿಗಳ ಪಕ್ಕದಲ್ಲಿ ನಿಂತುಕೊಂಡು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಸ್ರೋ ಅಧ್ಯಕ್ಷ ಡಾ. ವಿ ನಾರಾಯಣನ್ ಅವರ ಕೈಯಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದಾರೆ. ಆರೋಪಿಗಳ ಪಕ್ಕದಲ್ಲಿ ನಿಂತುಕೊಂಡು ಪದವಿ ಸ್ವೀಕರಿಸಿದ ಬಳಿಕ ಡಾ.ನಂದಪ್ಪ ಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಡಾ. ನಂದಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿವಿಯಲ್ಲಿ ಅಕ್ರಮ ಚಟುವಟಿಕೆಗಳು, ಜಾತಿ ತಾರತಮ್ಯಗಳು ನಡೆಯುತ್ತಿದ್ದಾಗ ಕ್ರಮ ಕೈಗೊಳ್ಳಬೇಕಾದ ಶಿಕ್ಷಣ ಇಲಾಖೆ, ಕಾಲೇಜು ಸಿಬ್ಬಂದಿಗಳು ಒಂದು ಪರವಾಗಿ ನಿಲ್ಲುವುದು ಖಂಡನೀಯ. ಎಲ್ಲ ವಿದ್ಯಾರ್ಥಿಗಳನ್ನೂ ಇವರೇ ತಮ್ಮ ಹತೋಟಿಯಲ್ಲಿಟ್ಟುಕೊಂಡಿರಬೇಕು. ಹೀಗಿರುವಾಗ ವಿದ್ಯಾರ್ಥಿಗಳ ನಡುವೆ ಅವರೇ ವಿಷಬೀಜಗಳನ್ನು ಬಿತ್ತುತ್ತಾರೆ. ವಿದ್ಯಾರ್ಥಿಗಳ ಸುಂದರ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.

ನಂದಪ್ಪ ಪಿ ಅವರಿಗೆ ಪುಸ್ಕಾರ

“ವಿದ್ಯಾರ್ಥಿಗಳ ವಿರುದ್ಧ ವಿದ್ಯಾರ್ಥಿಗಳನ್ನೇ ಎತ್ತುಕಟ್ಟಿ ಪದೇ ಪದೆ ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತಾರೆ. ಹೀಗಿರುವಾಗ ಕುಲಪತಿಗಳು, ಡೀನ್‌ಗಳು ಪ್ರೊಫೆಸರ್‌ಗಳಿಗೆ ಅಲ್ಲೇನು ಕೆಲಸ. ಹಾಗಾದರೆ ವಿದ್ಯಾರ್ಥಿಗಳಿರುವ ಜಾಗಕ್ಕೆ ಪದೇ ಪದೆ ಪೊಲೀಸರು ಬರುವುದಾದರೆ ವಿದ್ಯಾರ್ಥಿಗಳಿಗೆ ಇವರು ಎಷ್ಟರ ಮಟ್ಟಿಗೆ ಇವರು ಶಿಶ್ತು ಕಲಿಸುತ್ತಿದ್ದಾರೆ. ಇವರಿಗೆ ವಿದ್ಯಾರ್ಥಿಗಳನ್ನು ಕಂಟ್ರೋಲ್‌ ಮಾಡೋಕೆ ಆಗಿಲ್ಲವೆಂದರೆ, ಸರ್ಕಾರಕ್ಕೆ ತಿಳಿಸಿ, ನಮ್ಮಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡೋಕೆ ಆಗುವುದಿಲ್ಲ, ಅವರನ್ನು ಸುಧಾರಿಸುವ ತಾಕತ್ತಿಲ್ಲ, ನಾವು ರಾಜೀನಾಮೆ ನೀಡಿ ಮನೆಗೆ ಹೋಗುತ್ತೇವೆ ಅಂತ ಹೇಳಿ ಹುದ್ದೆಯನ್ನು ತ್ಯಾಗ ಮಾಡಬೇಕು. ಸಂವಿಧಾನದ ಅಡಿಯಲ್ಲಿದ್ದುಕೊಂಡು ಸಂವಿಧಾನ ಬಾಹಿರ ಕೆಲಸ ಮಾಡುವುದು ತರವಲ್ಲ” ಎಂದರು.

“ವಿರೋಧದ ನಡುವೆಯೂ ಆರೋಪಿತ ಕುಲಪತಿ, ಕುಲಸಚಿವ ಮತ್ತು ಭದ್ರತಾ ಅಧಿಕಾರಿ ಮಿಥಿಲೇಶ ಘಟಿಕೋತ್ಸವದಲ್ಲಿ ಭಾಗಿಯಾಗಿರುವುದು ದೊಡ್ಡ ದುರಂತ. ನಾನು ಕಷ್ಟಪಟ್ಟು ಸಂಶೋಧನೆ ಮಾಡಿ, ಓದಿ ಇಂತಹ ಕ್ರಮಿನಲ್‌ಗಳಿಂದ ಪದವಿ ಪಡೆದುಕೊಳ್ಳಬೇಕಾ?. ನಾನು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನದಡಿ ಜೀವಿಸುತ್ತಿದ್ದೇನೆ. ಅವರು ಹಾಕಿಕೊಟ್ಟಿರುವಂತಹ ಶಿಕ್ಷಣ, ಸಂಘಟನೆ, ಹೋರಾಟಗಳಿಂದ ನನ್ನ ಶಿಕ್ಷಣದ ಹಕ್ಕನ್ನು ಪಡೆದಿದ್ದೇನೆ. ಕಾನೂನು ರೀತಿಯಲ್ಲಿ ನಾನಿದ್ದರೆ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ” ಎಂದರು.

ಸಂಶೋಧನಾರ್ಥಿ ನಂದಪ್ಪ ಪಿ

“ನಾನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕುಕ್ಕೇರಿ ಎನ್ನುವ ಒಂದು ಕುಗ್ರಾಮದ ಬಡಟಕುಟುಂಬದಿಂದ ಬಂದವನು. ನನ್ನ ಶಿಕ್ಷಣವನ್ನು ಹತ್ತಿಕ್ಕಲು ತುಂಬಾ ಪ್ರಯಾಸಪಟ್ಟರು, ಆದರೂ ನಾನು ನನ್ನ ಹೋರಾಟದಿಂದಲೇ ನನ್ನ ಶಿಕ್ಷಣವನ್ನು ನಾನು ಪಡೆದಿದ್ದೇನೆ. ಹೀಗೆಯೇ ನನ್ನ ಸಮುದಾಯದ ಎಲ್ಲ ಮಕ್ಕಳು ಹೋರಾಟದ ಛಲ ಬಿಡದೆ ಕಷ್ಟಗಳನ್ನು, ನಿಂದನೆಗಳನ್ನು ಮೆಟ್ಟಿನಿಂತು ಉನ್ನತಮಟ್ಟಕೆ ಬರಬೇಕು. ಇಂದಿಗೂ ಶೋಷಣೆಗೆ ಒಳಗಾಗುತ್ತಿರುವ ಈ ಸಮಾಜದಲ್ಲಿ ಎಲ್ಲವನ್ನೂ ಕಿತ್ತೊಗೆದು ಮುನ್ನಲೆಗೆ ಬರಬೇಕು ಹಿಂಜರಿಯಬಾರದು” ಎಂದು ಇಮಂದಿನ ಪೀಳಿಗೆಗಳಿಗೆ ಕಿವಿಮಾತು ಹೇಳಿದರು.

ಘಟನೆ ಹಿನ್ನೆಲೆ

ಉದ್ದೇಶಪೂರ್ವಕವಾಗಿ ವಿವಿ ಕ್ಯಾಂಪಸ್ ಪ್ರವೇಶಕ್ಕೆ ಅಡ್ಡಿಪಡಿಸಿದ್ದಾರೆಂದೆ ಆರೋಪಿಸಿ 2024ರ ಆಗಸ್ಟ್ 1ರಂದು ಪ್ರೊ.ಸತ್ಯನಾರಾಯಣ ಮತ್ತು ಇತರ ಇಬ್ಬರ ವಿರುದ್ಧ ನಂದಪ್ಪ ದೂರು ದಾಖಲಿಸಿದ್ದರು. ಈಗ ಮೂವರೂ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಆದ್ದರಿಂದ ಮಾರ್ಚ್‌ 11ರಂದು ನಡೆಯುವ ಕೇಂದ್ರೀಯ ವಿವಿ 8ನೇ ಘಟಿಕೋತ್ಸವದಲ್ಲಿ ಭಾಗವಹಿಸುತ್ತಿರುವುದು ಸಂವಿಧಾನಾತ್ಮಕ ಹುದ್ದೆಗೆ ಚ್ಯುತಿ ಬಗೆದಂತಾಗುತ್ತದೆಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದರು.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಹೆಚ್ಚಿದ ಬಿಸಿಲ ಝಳ; ಪ್ರಾಣಿ, ಪಕ್ಷಿಗಳ ದಾಹ ನೀಗಿಸುತ್ತಿರುವ ಇಲಿಯಾಸ್ ಪಟೇಲ್

“ಘಟಿಕೋತ್ಸವದಲ್ಲಿ ಭಾಗವಹಿಸುವುದು ಶೈಕ್ಷಣಿಕ ವಿಶ್ವಾಸಾರ್ಹತೆ ಮತ್ತು ಸಾಂವಿಧಾನಿಕ ನೀತಿಗೆ ಧಕ್ಕೆ ತಂದಂತಲ್ಲವೇ?. ಅಪರಾಧಿ ಸ್ಥಾನದಲ್ಲಿರುವ ಕುಲಪತಿ, ಕುಲಸಚಿವರು ವಿಶ್ವವಿದ್ಯಾನಿಲಯದ ಘಟಿಕೋತ್ಸವವನ್ನು ನಡೆಸಿದರೆ ಭಾರತ ಸಂವಿಧಾನಕ್ಕೆ ಹಾಗೂ ವಿಶ್ವವಿದ್ಯಾನಿಲಯದ ಘನತೆಗೆ ಕುಂದುಂಟು ಮಾಡಿದಂತೆ. ಇವರ ಈ ನಡೆಯನ್ನು ನಾನು ಅವಮಾನಕರವೆಂದು ಭಾವಿಸುತ್ತೇನೆ, ಶೈಕ್ಷಣಿಕವಾಗಿ ಸಾಧನೆ ಮಾಡಿದ ಸ್ಫೂರ್ತಿದಾಯಕ ವ್ಯಕ್ತಿಗಳಿಂದ ಪದವಿ ಸ್ವೀಕರಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕು ಹಾಗೂ ಹೆಮ್ಮೆಯ ಸಂಗತಿ. ಕ್ರಿಮಿನಲ್ ಆರೋಪ ಹೊತ್ತಿರುವ ಕುಲಪತಿಗಳು ಹಾಗೂ ಕುಲಸಚಿವರಿಂದ ಅವರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆಯುವುದು ನ್ಯಾಯ ಸಮ್ಮತವಲ್ಲ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X