ರಾಜ್ಯದ ವಿವಿಧ ಭಾಗಗಳಲ್ಲಿ ನಿನ್ನೆ ಸಂಜೆ ಮಿಂಚು, ಗಾಳಿ ಸಹಿತ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ಅದರಂತೆ ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಹ ಹದಮಳೆ ಬಿದ್ದಿದೆ. ಕೆಲವೆಡೆ ಫ್ಲೆಕ್ಸ್‌ಗಳು, ಮರದ ಒಣಗಿದ ಕೊಂಬೆಗಳು ಮುರಿದುಬಿದ್ದಿವೆ. ದಿಢೀರನೆ ಸುರಿದ ಅನಿರೀಕ್ಷಿತ ಮಳೆಯಿಂದ ಸಾರ್ವಜನಿಕರು, ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿತ್ತು.
ಇನ್ನು ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂದು ನೋಡುವುದಾದರೆ.. ಸಕಲೇಶಪುರ ಪಟ್ಟಣ 45 ಮಿಮೀ, ಹಳ್ಳಿಮನೆ ಹಾರ್ಲ್ಲೆ ಕೂಡಿಗೆ ಬಳಿ 55 ಮಿಮೀ, ಸುಳ್ಳಕ್ಕಿ 75 ಮಿಮೀ, ಕಟ್ಟಳ್ಳಿ ಹಲಸುಲಿಗೆ 42 ಮಿಮೀ, ದೇವಿಹಳ್ಳಿ ಎಸ್ಟೇಟ್ 68 ಮಿಮೀ, ಹಳೆಬೇಲೂರು 75 ಮಿಮೀ, ಸೋಮವಾರಪೇಟೆ ಬಳಿಯ ಗೋಣಿಮಕೂರು 80 ಮಿಮೀ ಮಳೆಯಾಗಿದೆ.
ಬಂದಳ್ಳಿ ಎಸ್ಟೇಟ್, ಬಿಕ್ಕೋಡು 1.2 ಇಂಚು, ಹೊತ್ತೂರು ಹಾಡ್ಯದಲ್ಲಿ 60 ಮಿಮೀ, ಕ್ಯಾನಳ್ಳಿಯಲ್ಲಿ 1.5 ಇಂಚು, ಮಠಸಾಗರದಲ್ಲಿ 0.85 ಇಂಚು, ಲಕ್ಕುಂದದಲ್ಲಿ 1.35 ಇಂಚು, ಮುಗಳಿಯಲ್ಲಿ 0.35 ಮಿಮೀ , ಉದಯಾವರದಲ್ಲಿ 1.10 ಇಂಚು, ದೊಡ್ಡ ನಾಗರದಲ್ಲಿ 65 ಮಿಮೀ, ಆನೆಮಹಲ್ ನಲ್ಲಿ 10 ಮಿಮೀ, ಹೆಬ್ಬನಹಳ್ಳಿಯಲ್ಲಿ 78 ಮಿಮೀ, ಕಸ್ಕೆಬೈಲ್ ನಲ್ಲಿ 97 ಮಿಮೀ, ಮೂವಾಲ ಬಿಕೋಡು 1.5 ಇಂಚು, ಮೂಡಿಗೆರೆ ತಾಲೂಕಿನ ಬೆಟ್ಟಿಗೆರೆ 1.40 ಇಂಚು ಮಳೆಯಾಗಿದೆ.
ಒಟ್ಟಾರೆ ಬಿಸಿಲಿನ ವಿಪರೀತ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ಸಮಾಧಾನ ತಂದಂತಾಗಿದೆ.
ಇದನ್ನೂ ಓದಿ: ಹಾಸನ | ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ; ಮಾ.15ರಿಂದ ಏಕಮುಖ ಸಂಚಾರ
ಹೀಗೇ ಒಂದೆರಡು ದಿನ ಮಳೆ ಮತ್ತೆ ಬಂದಲ್ಲಿ ಪರವಾಗಿಲ್ಲ. ಬಿಸಿಲಿನ ಝಳ ಹೆಚ್ಚಾದರೆ ಜನರ ಆರೋಗ್ಯ ಕೆಡುವ ಸಾಧ್ಯತೆ ಇರಬಹುದು. ಏನೇ ಆದರೂ ಈ ಅನಿರೀಕ್ಷಿತ ಮಳೆ ಜನರ ಮೊಗದಲ್ಲಿ ಮುಗುಳ್ನಗೆ ತಂದಿದೆ ಎಂಬುದಂತೂ ಸತ್ಯ.
