ಸಾವಿರಾರು ಜನರನ್ನು ಹೊಂದಿರುವ ಸಿರಿವಾರ ಪಟ್ಟಣ ಮತ್ತು ಸುತ್ತಮುತ್ತಲಿನ ಜನರು ರಾಯಚೂರು ನಗರಕ್ಕೆ ಕೆಲಸ ಕಾರ್ಯಗಳಿಗೆ ಹೋಗುತ್ತಾರೆ. ಆದರೆ ಈ ಮಾರ್ಗದಲ್ಲಿ ಸೂಕ್ತ ಬಸ್ ವ್ಯವಸ್ಥೆಯೇ ಇಲ್ಲ. ಹೀಗಾಗಿ ಕೆಲಸಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ ಸಿರವಾರ-ರಾಯಚೂರು ನಡುವೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು, ಮುಂಜಾನೆ 5ರಿಂದ 6 ಗಂಟೆಯ ನಡುವೆ ಬಸ್ ಚಾಲನೆ ಶುರು ಮಾಡಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಯಿತು.
ಮುಂಜಾನೆ ವೇಳೆ ಬಸ್‌ಗಳಿಲ್ಲದೆ ಸಾರ್ವಜನಿಕರು ಅದರಲ್ಲೂ ಸಣ್ಣ-ಪುಟ್ಟ ವ್ಯಾಪಾರಸ್ಥರು, ಆಸ್ಪತ್ರೆಗೆ ಹೋಗುವವರು, ದೂರದ ಊರುಗಳಿಗೆ ಹೋಗುವವರು ಪರದಾಡುವಂತಾಗಿದೆ. ತಡರಾತ್ರಿಯಲ್ಲೂ ಬಸ್ ಇರುವುದಿಲ್ಲ. ಹೀಗಾದರೆ ಮಹಿಳೆಯರಿಗೆ ಸಾಕಷ್ಟು ಅನನುಕೂಲವಾಗುತ್ತದೆ. ಆದ್ದರಿಂದ ಕೂಡಲೇ ಮನವಿಗೆ ಸ್ಪಂದಿಸಿ ಸಿರವಾರ ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಮುಂಜಾನೆ 5 ಗಂಟೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮನವಿಯನ್ನು ನಿರ್ಲಕ್ಷಿಸಿದರೆ ಕಚೇರಿಯ ಮುಂದೆ ಸಾರ್ವಜನಿಕರೊಂದಿಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಲಾಯಿತು.
ಇದನ್ನೂ ಓದಿ: ರಾಯಚೂರು | ಸಿಲಿಂಡರ್ ಸ್ಫೋಟ; ಗುಡಿಸಲು ಸೇರಿ 5 ಕುರಿಗಳು ಬೆಂಕಿಗಾಹುತಿ
ಈ ವೇಳೆ ಕುಮಾರ ಭಜಂತ್ರಿ ಮತ್ತಿತರರು ಇದ್ದರು.
