ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಅಫ್ವಾನ್ ಹೂಡೆ, ಪ್ರಧಾನ ಕಾರ್ಯದರ್ಶಿಯಾಗಿ ವಸೀಮ್ ಉಸ್ತಾದ್ ಆಯ್ಕೆಗೊಂಡರು.
ಆದರ್ಶ್ ಇಸ್ಲಾಮಿಕ್ ಸೆಂಟರ್ ನಲ್ಲಿ ಸಾಲಿಡಾರಿಟಿ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು.
ಕ್ರೀಡಾ ಕಾರ್ಯದರ್ಶಿಯಾಗಿ ಅನ್ಸಾರ್ ಹೂಡೆ, ಹೂಡೆ ಘಟಕದ ಸಂಚಾಲಕರಾಗಿ ಜಾಬೀರ್ ಖತೀಬ್, ಮಲ್ಪೆ ಘಟಕದ ಸಂಚಾಲಕರಾಗಿ ಸುಹೇಲ್ ಖಲೀಫಾ ಹಾಗೂ ಉಡುಪಿ ಘಟಕದ ಸಂಚಾಲಕರಾಗಿ ಸರ್ಫರಾಜ್ ಮನ್ನಾ ಆಯ್ಕೆಗೊಂಡರು.
ಜಿಲ್ಲಾ ಸಮಿತಿ ಸದಸ್ಯರಾಗಿ ಝಕ್ರಿಯಾ ಬೆಂಗ್ರೆ, ಜೌಹರ್ ಹೂಡೆ, ಯಾಸೀನ್ ಕೋಡಿಬೆಂಗ್ರೆ, ಶಾರೂಕ್ ತೀರ್ಥಹಳ್ಳಿ, ಬಿಲಾಲ್ ಮಲ್ಪೆ, ಶುಐಬ್ ಮಲ್ಪೆ, ನಿಹಾಲ್ ಕಿದಿಯೂರು, ಶಕೀಲ್ ನೇಜಾರು, ಝಿಯಾ ಉಡುಪಿ ಆಯ್ಕೆಗೊಂಡರು.
