ಮುಸ್ಲಿಂ ಸಮುದಾಯದ ವಿರುದ್ಧ ಮುಂದುವರೆದ ಬಿಜೆಪಿ ನಾಯಕರ ದ್ವೇಷ: ನಿರ್ಲಕ್ಷ್ಯವೊಂದೆ ಪರಿಹಾರ

Date:

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ವಿರೋಧ, ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ನಮಾಜ್ ಮಾಡಿದರೆ ಆಕ್ಷೇಪ, ವಕ್ಫ್ ಆಸ್ತಿಯ ಮೂಲಕ ದೇಶದ ಆಸ್ತಿಯನ್ನು ನಮ್ಮಿಂದ ಕಬಳಿಸುತ್ತಿದ್ದಾರೆ ಎಂದು ಅಪಪ್ರಚಾರ, ಅಮಾಯಕರ ಆಸ್ತಿಯನ್ನು ಬುಲ್ಡೋಜರ್‌ ಮೂಲಕ ನಾಶಪಡಿಸುವುದು- ಇವೆಲ್ಲವೂ ಮುಸ್ಲಿಂ ದ್ವೇಷ ಹರಡುವ ತಂತ್ರಗಾರಿಕೆಯ ಭಾಗವೇ ಹೊರತು, ಆಕಸ್ಮಿಕವಲ್ಲ...

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರುವುದು, ದ್ವೇಷ ಹುಟ್ಟು ಹಾಕುವುದು ವಿಪರೀತವಾಗಿ ಹೆಚ್ಚಾಗುತ್ತಲೇ ಇದೆ. ಕೇಂದ್ರದ ಜೊತೆ ಬಿಜೆಪಿ ಆಡಳಿತ ನಡೆಸುತ್ತಿರುವ ಹಾಗೂ ವಿಪಕ್ಷ ಸ್ಥಾನದಲ್ಲಿರುವ ರಾಜ್ಯಗಳಲ್ಲಿ ಕೂಡ ಮುಸ್ಲಿಮರು ಈ ದೇಶದ ಪ್ರಜೆಗಳೇ ಅಲ್ಲದ ರೀತಿಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೇಂದು ಅಧಿಕಾರಿಯ ವಿವಾದಾತ್ಮಕ ಮಾತು. ಈ ವ್ಯಕ್ತಿ ಮುಂಬರುವ 2026ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ರಾಜ್ಯದಲ್ಲಿ ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರದಬ್ಬುತ್ತೇವೆ ಎಂದು ಹೇಳಿರುವುದು ಎಲ್ಲೆಡೆಯಿಂದಲೂ ಆಕ್ರೋಶ ವ್ಯಕ್ತವಾಗಿದೆ.

- Advertisement -

ಭಾರತದ ಸಂವಿಧಾನದ ಅನ್ವಯ ಚುನಾಯಿತ ಪ್ರತಿನಿಧಿ ಮಾತ್ರವಲ್ಲದೆ ಸಾಮಾನ್ಯ ಜನತೆ ಕೂಡ ಇಂತಹ ಪ್ರಚೋದನಕಾರಿ ಭಾಷೆಯನ್ನು ಬಳಸುವುದು ಯೋಗ್ಯವಲ್ಲ ಎಂಬುದನ್ನು ಇಲ್ಲಿಯವರೆಗೂ ಬಿಜೆಪಿ ನಾಯಕರು ಮನವರಿಕೆ ಮಾಡಿಕೊಂಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತ ನಡೆಸುವ ಹಾಗೂ ಉಸ್ತುವಾರಿ ವಹಿಸಿಕೊಂಡಿರುವ ಮುಖಂಡರು ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಅಧೀನ ನಾಯಕರಿಂದ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಎತ್ತಿಕಟ್ಟುನ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯ ಮಾತ್ರವಲ್ಲದೆ ಶೋಷಿತ ಸಮುದಾಯಗಳ ಅಭಿವೃದ್ಧಿ ಹಾಗೂ ಅವರ ಜೀವನ ಮಟ್ಟ ಸುಧಾರಣೆಗಾಗಿ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಚರ್ಚೆಗಳು ಮತ್ತು ವಾದಗಳು ನಡೆಯುತ್ತಿರುತ್ತವೆ. ಆದರೆ ಬಿಜೆಪಿಯ ನಾಯಕರು ಧರ್ಮದ ಆಧಾರದ ಮೇಲೆ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿಕೊಳ್ಳುತ್ತಿರುವುದು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ. ಇದು ಪ್ರಚೋದನಕಾರಿ, ಅಪಾಯಕಾರಿ ಮತ್ತು ಕ್ರಿಮಿನಲ್ ಕೃತ್ಯ ಎಂಬುದರ ಅರಿವಿದ್ದರೂ ಮುಸ್ಲಿಮರ ವಿರುದ್ಧ ಕೋಮುದ್ವೇಷದ ಭಾಷಣಗಳು ಎಗ್ಗಿಲ್ಲದೆ ಸಾಗುತ್ತಲೆ ಇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ವಿವಾದಾತ್ಮಕ ಹೇಳಿಕೆ ಇದೇ ಮೊದಲ ಸಲವೇನಲ್ಲ. ಹಲವಾರು ಬಾರಿ ಈ ರೀತಿಯ ಬೆಂಕಿಯುಗುಳುವ ನುಡಿಗಳನ್ನು ಮುಸ್ಲಿಂ ಸಮುದಾಯದ ವಿರುದ್ಧ ಪ್ರಯೋಗಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಪಡೆಯಲು ವಿಫಲವಾದ ನಂತರ ‘ನಾವು ನಮ್ಮೊಂದಿಗಿರುವವರೊಂದಿಗೆ ಮಾತ್ರ ಇದ್ದೇವೆ. ನಮಗೆ ಯಾವುದೇ ಅಲ್ಪಸಂಖ್ಯಾತರ ಬೆಂಬಲ ಅಗತ್ಯವಿಲ್ಲ’ ಎಂದು ಹೇಳಿದ್ದರು. ಈ ಹೇಳಿಕೆಯ ವಿರುದ್ಧ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಕೇಸರಿ ಪಕ್ಷದ ಪ್ರಮುಖ ನಾಯಕರು ಸುವೇಂದು ಹೇಳಿಕೆಯಿಂದ ದೂರ ಉಳಿದಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಸುತ್ತಮುತ್ತ ‘ದಿಬ್ಬಣದ ಕುದುರೆಗಳು’ ಇವೆ ಎಂಬ ದೂರೂ ಇದೆಯಲ್ಲ?

ಭಾರತದ ಜಾತ್ಯತೀತ ಸಂವಿಧಾನದಲ್ಲಿ ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಬಿಜೆಪಿ ನಾಯಕರು ಮರೆತಂತಿದೆ. ಕೇಂದ್ರ ಸರ್ಕಾರವು ದಿನದಿಂದ ದಿನಕ್ಕೆ ನಾಗರಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ. ಭಾರತ ದೇಶದ ಪ್ರಜೆಯಾಗಿ ಯಾವುದೇ ಧರ್ಮೀಯರ ಹಕ್ಕುಗಳನ್ನು ಕಸಿದುಕೊಳ್ಳುವುದು ಸಾಧ್ಯವಿಲ್ಲ. ಎಲ್ಲ ಧರ್ಮೀಯರಿಗೆ ಇರುವಷ್ಟೆ ಸಂವಿಧಾನದತ್ತವಾದ ಸೌಲಭ್ಯಗಳು ಮುಸ್ಲಿಂ ಸಮುದಾಯಕ್ಕೂ ಇದೆ. ನಮ್ಮದು ಜಾತ್ಯತೀತ, ಬಹುತ್ವವಾದಿ ರಾಷ್ಟ್ರ. ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಆಚರಿಸುವ ಹಕ್ಕಿದೆ. ಅಲ್ಪಸಂಖ್ಯಾತರನ್ನು ರಕ್ಷಿಸುವುದು ಬಹುಸಂಖ್ಯಾತರ ಕರ್ತವ್ಯ. ಪ್ರತಿಯೊಬ್ಬರು ದೇಶದ ಸಾರ್ವಭೌಮತ್ವ ಮತ್ತು ಜಾತ್ಯತೀತತೆಯನ್ನು ರಕ್ಷಿಸಬೇಕು. ಆದರೆ ಇವೆಲ್ಲವನ್ನು ಬಿಟ್ಟು ಸರ್ವಾಧಿಕಾರಿ ಧೋರಣೆ ಮುನ್ನೆಲೆಗೆ ಬರುತ್ತಿದೆ.

ಇದೇ ಸಂದರ್ಭದಲ್ಲಿ ಹೋಳಿ ಹಾಗೂ ರಂಜಾನ್‌ ವಿಚಾರದಲ್ಲೂ ಬಿಜೆಪಿ ನಾಯಕರು ಧರ್ಮ ಹಾಗೂ ಮುಸ್ಲಿಂ ಸಮುದಾಯವನ್ನು ಎಳೆದು ತಂದಿದ್ದಾರೆ. ಉತ್ತರ ಪ್ರದೇಶದ ಸಚಿವ ರಘುರಾಜ್‌ ಸಿಂಗ್‌, ”ಹೋಳಿ ಹಬ್ಬದಂದು ಪ್ರಾರ್ಥನೆಗೆ ಹೊರಡುವಾಗ ಬಣ್ಣಗಳನ್ನು ಎರಚುವುದನ್ನು ತಪ್ಪಿಸಲು ಮುಸ್ಲಿಂ ಪುರುಷರು ಟಾರ್ಪಾಲಿನ್‌ನಿಂದ ಮುಚ್ಚಿಕೊಳ್ಳಬೇಕು. ಸನಾತನ ಧರ್ಮದ ಅನುಯಾಯಿಗಳಿಗೆ ಹೋಳಿ ಹಬ್ಬವು ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಮಸೀದಿಗಳ ಸಮೀಪವಿರುವ ಕೆಲವು ಪ್ರದೇಶಗಳಲ್ಲಿ ಹೋಳಿ ಆಡಬಾರದು ಎಂದು ನಿರೀಕ್ಷಿಸುವುದು ಸರಿಯಲ್ಲ. ಮುಸ್ಲಿಂ ಮಹಿಳೆಯರು ಮುಸುಕುಗಳಿಂದ ಮುಚ್ಚಿಕೊಳ್ಳುತ್ತಾರೆ ಮತ್ತು ಮುಂಜಾಗ್ರತಾ ಕ್ರಮವಾಗಿ ಕೆಲವೊಮ್ಮೆ ಮಸೀದಿಗಳನ್ನು ಟಾರ್ಪಾಲಿನ್‌ಗಳಿಂದ ಮುಚ್ಚಲಾಗುತ್ತದೆ. ಅದರಂತೆ ಮುಸ್ಲಿಂ ಪುರುಷರು ಬಣ್ಣ ಹಾಕಿಸಿಕೊಳ್ಳುವುದನ್ನು ತಪ್ಪಿಸಲು ಬಯಸಿದರೆ ತಮ್ಮನ್ನು ತಾವು ಟಾರ್ಪಾಲಿನ್‌ಗಳಿಂದ ಮುಚ್ಚಿಕೊಳ್ಳಬಹುದು. ಹೋಳಿಗೆ ಅಡ್ಡಿಪಡಿಸುವವರಿಗೆ ಮೂರು ಆಯ್ಕೆಗಳಿವೆ, ಜೈಲಿಗೆ ಹೋಗಿ, ರಾಜ್ಯವನ್ನು ತೊರೆಯಿರಿ ಇಲ್ಲವೆ ಯಮರಾಜ್ ಬಳಿ ಹೆಸರು ನೋಂದಾಯಿಸಿಕೊಳ್ಳಿ” ಎಂದು ಹೇಳಿರುವುದು ಧರ್ಮಧರ್ಮಗಳ ವಿರುದ್ಧ ಎತ್ತಿಕಟ್ಟುವುದೇ ವಿನಾ ಮತ್ತೇನಿಲ್ಲ. ಇಂತಹ ನಾಯಕರಿಗೆ ಸಾಮರಸ್ಯ, ಸಹಬಾಳ್ವೆ ಬೇಕಿಲ್ಲ. ಮುಸ್ಲಿಂ ಸಮುದಾಯದ ವಿರುದ್ಧ ನೇರವಾಗಿ ಕೆಂಡಕಾರುವ ಇವರು ಹಿಂದೂ ಧರ್ಮದಲ್ಲೇ ಇರುವ ತಳ ಸಮುದಾಯದವರನ್ನು ನೂರಾರು ವರ್ಷಗಳಿಂದ ಶೋಷಣೆ ಮಾಡುತ್ತಿರುವುದರ ಬಗ್ಗೆ ಬಾಯಿ ಬಿಚ್ಚುವುದಿಲ್ಲ.  

ಮುಸ್ಲಿಮರು ಹಿಂದೂಗಳ ಶತ್ರುಗಳು ಎಂದು ಬಿಂಬಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹಿಂದೆ ಅವರನ್ನು ದಾಳಿಕೋರರು ಎಂದು ತೋರಿಸಲಾಯಿತು. ನಂತರ ಅವರನ್ನು ಹಿಂದುಳಿದವರು ಎಂದು ಹೀಯಾಳಿಸಲಾಯಿತು. ಈಗ ದೇಶ ವಿರೋಧಿಗಳು ಎಂಬಂತೆ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ‘ಲವ್ ಜಿಹಾದ್’, ‘ಶೈಕ್ಷಣಿಕ ಜಿಹಾದ್’ ಎಂಬ ಹೆಸರುಗಳನ್ನು ಇಟ್ಟು ಅವರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಲಾಗುತ್ತಿದೆ. ‘ಜಿಹಾದ್’ ಪದವನ್ನು ಎಷ್ಟೊಂದು ಒತ್ತಾಯಪೂರ್ವಕವಾಗಿ ತುರುಕಲಾಗುತ್ತಿದೆ ಎಂದರೆ, ಅದನ್ನು ಕೇಳುವ ವ್ಯಕ್ತಿ ಮುಸ್ಲಿಂ ವಿರೋಧಿ ನಿಲುವನ್ನು ತಾಳಬೇಕು. ಅಂತಹ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ.

ಹಿಂದೂ ಯುವತಿಯನ್ನು ಮುಸ್ಲಿಂ ಯುವಕರು ಪ್ರೀತಿಸಿ ಮದುವೆಯಾಗಿ ನಂತರ ನಡುನೀರಿನಲ್ಲಿ ಕೈಬಿಡುತ್ತಾರೆ ಎಂದು ಅಪನಂಬಿಕೆ ಮೂಡಿಸುವುದು, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ನಮಾಜ್ ಮಾಡಿದರೆ, ಅದಕ್ಕೆ ಅಕ್ಷೇಪ ವ್ಯಕ್ತಪಡಿಸುವುದು, ವಕ್ಫ್‌ ಆಸ್ತಿಯ ಮೂಲಕ ದೇಶದ ಆಸ್ತಿಯನ್ನು ನಮ್ಮಿಂದ ಕಬಳಿಸುತ್ತಿದ್ದಾರೆ ಎಂದು ಅಪಪ್ರಚಾರ ನಡೆಸುವುದು, ಅಮಾಯಕರ ಆಸ್ತಿಯನ್ನು ಬುಲ್ಡೋಜರ್‌ ಮೂಲಕ ನಾಶಪಡಿಸುವುದು. ಇವೆಲ್ಲವೂ ಮುಸ್ಲಿಂ ದ್ವೇಷ ಹರಡುವ ತಂತ್ರಗಾರಿಕೆಯ ಭಾಗವೇ ಹೊರತು, ಆಕಸ್ಮಿಕವಲ್ಲ.

ಶಾಂತಿ ಕದಡುವುದೆ ಬಿಜೆಪಿ ನಾಯಕರ ಗುಪ್ತ ತಂತ್ರವಾಗಿದೆ. ಹಿಜಾಬ್, ಹಲಾಲ್, ಅಜಾನ್‌ನಂತಹ ವಿವಾದಗಳ ಜೊತೆಗೆ ವ್ಯಾಪಾರಕ್ಕೂ ತೊಂದರೆ ಕೊಡುವ ಪ್ರಯತ್ನಗಳು ನಡೆದವು. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶವಿಲ್ಲ ಎಂಬ ಅಭಿಯಾನ ನಿರಂತರವಾಗಿ ಸಾಗಿತು. ಇಂತಹ ಕೊಳಕು ಮನಸ್ಥಿತಿಗಳ ವಿರುದ್ಧ ಸಾಮಾನ್ಯ ಜನರು ಎಚ್ಚೆತ್ತುಕೊಳ್ಳಬೇಕಿದೆ. ಮುಸ್ಲಿಮರ ಕುರಿತ ಅಪಪ್ರಚಾರಗಳಿಂದ ದೂರ ಉಳಿಯುವುದನ್ನು ರೂಢಿಸಿಕೊಳ್ಳಬೇಕು. ದ್ವೇಷ ಸಾರುವವರ ವಿರುದ್ಧ ಉದಾಸೀನ ಪ್ರವೃತ್ತಿಯನ್ನು ತೋರುವುದರಿಂದ ಮಾತ್ರ ದೇಶವನ್ನು ದ್ವೇಷದ ಬೆಂಕಿಯಿಂದ ಕಾಪಾಡಬಹುದಾಗಿದೆ. ಇದಕ್ಕೆ ನಿರ್ಲಕ್ಷ್ಯವೊಂದೆ ಪರಿಹಾರ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...