ಕಲಬುರಗಿ | ಡಿ ಗ್ರೂಪ್‌ ನೌಕರನ ಮಗಳಿಗೆ 14 ಚಿನ್ನದ ಪದಕ

Date:

Advertisements

ಸರ್ಕಾರಿ ಆಸ್ಪತ್ರೆಯಲ್ಲಿ ಕಸ ಗುಡಿಸುವುದು ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡೋ ಡಿ ಗ್ರೂಪ್‌ ನೌಕರನ ಮಗಳು ಕಷ್ಟ ಪಟ್ಟು ಓದಿ ಬರೋಬ್ಬರಿ ಹದಿನಾಲ್ಕು ಚಿನ್ನದ ಪದಕ ಪಡೆದಿದ್ದಾರೆ.

ಕಲಬುರಗಿ ನಗರದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್, ಉನ್ನಕ ಶಿಕ್ಷಣ ಸಚಿವ ಡಾ.ಸುಧಾಕರ ಸಹಭಾಗಿತ್ವದಲ್ಲಿ ಚಿನ್ನದ ಪದಕ, ಪಿಎಚ್ ಡಿ ಪದವಿ, ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರಧಾನ ಮಾಡಲಾಯಿತು.

ಡಿ ಗ್ರೂಪ್‌ ನೌಕರನ ಮಗಳಿಗೆ ಹದಿನಾಲ್ಕು ಚಿನ್ನದ ಪದಕ

Advertisements

ಗುಲಬರ್ಗಾ ವಿವಿಯ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ರುಕ್ಮಿಣಿ ಹಣಮಂತರಾಯ್ ಬರೋಬ್ಬರಿ ಹದಿನಾಲ್ಕು ಚಿನ್ನದ ಪದಕ ಪಡೆದು, ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶೇಷವೆಂದರೇ ಹದಿನಾಲ್ಕು ಚಿನ್ನದ ಪದಕ ಪಡೆದ ರುಕ್ಮಿಣಿ ತಂದೆ ಹಣಮಂತರಾಯ್, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದಾರೆ.

ಕಲಬುರಗಿ ತಾಲೂಕಿನ ಆಲಗೋಡ ಗ್ರಾಮದ ನಿವಾಸಿ ಹಣಮಂತರಾಯ್ ಓದಿದ್ದು ಕೇವಲ ಮೂರನೇ ತರಗತಿ ಮಾತ್ರ. ಆದರೆ ಆಸ್ಪತ್ರೆಯಲ್ಲಿ ಮೊದಲು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಹಣಮಂತರಾಯ್, ಕೆಲ ವರ್ಷಗಳ ಹಿಂದಷ್ಟೇ ಖಾಯಂ ನೌಕರರಾಗಿದ್ದಾರೆ. ಇನ್ನು ಹಣಮಂತರಾಯ್ ಅವರಿಗೆ ನಾಲ್ಕು ಮಂದಿ ಮಕ್ಕಳಿದ್ದು, ರುಕ್ಮಿಣಿ ಕಿರಿಯ ಮಗಳಾಗಿದ್ದಾರೆ. ತಾನು ಹೆಚ್ಚು ಓದಲಿಲ್ಲಾ, ಮಗಳು ಚೆನ್ನಾಗಿ ಓದಲಿ ಅಂತ, ಬಡತನವಿದ್ದರೂ ಕೂಡಾ ಮಗಳನ್ನು ಚನ್ನಾಗಿ ಓದಿಸಿದ್ದಾರೆ.

ಗುಲಬರ್ಗಾ ವಿವಿಯ ಘಟಿಕೋತ್ಸವದಲ್ಲಿ 14 ಚಿನ್ನದ ಪದಕ ಪಡೆದ ರುಕ್ಮಿಣಿ ಹಣಮಂತರಾಯ್‌ ಅವರು ಕಾಲೇಜು ಉಪನ್ಯಾಸಕಿಯಾಗುವ ಕನಸು ಹೊಂದಿದ್ದಾರೆ. ಮುಂದೆ ಚನ್ನಾಗಿ ಓದಿ ಪಿಹೆಚ್​ಡಿ ಮಾಡಬೇಕು, ಕಾಲೇಜು ಉಪನ್ಯಾಸಕಿಯಾಗಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

“ಗುಲಬರ್ಗಾ ಸ್ನಾತಕೋತ್ತರ ಕೇಂದ್ರದಲ್ಲಿ ಅಧ್ಯಯನ ಮಾಡುವಾಗ ಹೆಚ್ಚಿನ ಸಮಯ ಗ್ರಂಥಾಲಯ ಮತ್ತು ವಿಭಾಗದಲ್ಲಿ ಕಳೆದಿದ್ದೇನೆ. ಬಿಡುವು ಇದ್ದಾಗಲೆಲ್ಲಾ ಓದುತ್ತಿದ್ದೆ ಇದರಿಂದ ಹೆಚ್ಚಿನ ಚಿನ್ನದ ಪದಕ ಪಡೆಯಲು ಸಾಧ್ಯವಾಗಿದೆ. ಇದರಿಂದ ನನಗೂ ಸಂತಸ ತಂದಿದೆ” ಎಂದು ರುಕ್ಮಿಣಿ ಸಂತಸ ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾಲಿಡಾರಿಟಿ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಪುನರ್‌ ಆಯ್ಕೆ

“ನನ್ನ ಸಾಧನೆಗೆ ಹೆತ್ತವರ ಸಹಕಾರ, ವಿಭಾಗದ ಉಪನ್ಯಾಸಕರ ಸಹಕಾರವಿದೆ. ಅವರೆಲ್ಲರ ಪ್ರೇರಣೆ, ಮಾರ್ಗದರ್ಶನವೇ ಈ ಸಾಧನೆಗೆ ಕಾರಣವಾಗಿದೆ” ಎಂದರು.

“ನಾನು ಓದಿದ್ದು ಮೂರನೇ ತರಗತಿ. ಸರ್ಕಾರಿ ಆಸ್ಪತ್ರೆಯಲ್ಲಿ ಜವಾನನಾಗಿದ್ದೇನೆ. ಮಗಳ ಸಾಧನೆ ಖುಷಿ ತಂದಿದೆ” ಎಂದು ರುಕ್ಮಿಣಿ ತಂದೆ ಹಣಮಂತರಾಯ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X