ಹೋಳಿ ಹಬ್ಬದ ಆಚರಣೆ ವೇಳೆ ಉತ್ತರ ಪ್ರದೇಶದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. 9 ಮಂದಿ ಪ್ರತ್ಯೇಕ ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ, ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ, ಮರಕ್ಕೆ ಕಾರು ಡಿಕ್ಕಿ ಹೊಡೆದು, ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಮೈನ್‌ಪಾಲ್ (35) ಮತ್ತು ರಾಜು (30) ಎಂದು ಗುರುತಿಸಲಾಗಿದೆ. ಸೋನ್‌ಭದ್ರದಲ್ಲಿ ಹೋಳಿ ಹಬ್ಬದ ಆಚರಣೆಗಾಗಿ ತೆರಳುತ್ತಿದ್ದ ವೇಳೆ ಇಬ್ಬರಿಗೆ ಲಾರಿ ಡಿಕ್ಕಿ ಹೊರೆದಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರನ್ನು ಸಂದೀಪ್ ಚೌಹಾಣ್ (20) ಮತ್ತು ವಿಕಿ ಚೌಹಾಣ್ (21) ಎಂದು ಗುರುತಿಸಲಾಗಿದೆ.
ಭದೋಹಿಯಲ್ಲಿ, ಸಂಬಂಧಿಯ ಮನೆಯಲ್ಲಿ ಹೋಳಿ ಹಬ್ಬ ಅಚರಿಸಿ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ಯುವಕರು ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಓಂಪ್ರಕಾಶ್ ಮತ್ತು ಮಹೇಂದ್ರ ಎಂದು ಗುರುತಿಸಲಾಗಿದೆ.
ಮಹಾರಾಜ್‌ಗಂಜ್‌ನಲ್ಲಿ, ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ನೇಹಿತರು ಮೃತಪಟ್ಟಿದ್ದಾರೆ. ಅಲ್ಲದೆ, ಸುಲ್ತಾನ್‌ಪುರದಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಕಿ ಡಿಕ್ಕಿಯಾಗಿ, ಓರ್ವ ಮೃತಪಟ್ಟಿದ್ದಾರೆ. ಮೃತನನ್ನು ಸುರೇಶ್ ಕುಮಾರ್ ರೈದಾಸ್ ಎಂದು ಗುರುತಿಸಲಾಗಿದೆ.
ಇನ್ನು, ಬಾರಾಬಂಕಿಯ ಟಿಕೈತ್ ನಗರ ಪ್ರದೇಶದಲ್ಲಿ ಹೋಳಿ ಹಬ್ಬ ಮುಗಿಸಿ ಈಜಲು ಘಾಗ್ರಾ ನದಿಗೆ ಇಳಿದಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.