ಅಥಣಿ | ʼಪರಿಶಿಷ್ಟರಿಗೆ 50 ವರ್ಷಗಳಿಂದ ಮರೀಚಿಕೆಯಾದ ಮೂಲಸೌಕರ್ಯʼ

Date:

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಜೋಡಿಕೆರೆಗಳ ಬಳಿ ಸುಮಾರು 45ರಿಂದ 50 ವರ್ಷಗಳಿಂದ ವಾಸವಾಗಿರುವ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳಿಗೆ ಮೂಲ ಸೌಕರ್ಯಗಳೇ ಇಲ್ಲ.

- Advertisement -

ಕೆರೆಯ ಪಕ್ಕದ ಪಟ್ಟಣದಲ್ಲಿ ಕಾಂಕ್ರೀಟ್‌ ರಸ್ತೆಗಳು, ದೊಡ್ಡ ಆರ್‌ಸಿಸಿ ಕಟ್ಟಡಗಳು ತಲೆ ಎತ್ತಿವೆ. ಸಮಾಜವೆಲ್ಲ ಆಧುನಿಕತೆ ಹಿಂದೆ ಓಡುತ್ತಿದ್ದರೂ ಈ ಸಮುದಾಯದ ಜನರಿಗೆ ಇರಲು ಸಣ್ಣ ಸೂರೂ ಇಲ್ಲ. ಇಂದಿಗೂ ಹಳೆ ಬಟ್ಟೆ, ಟಾರ್ಪಾಲಿನ್‌, ಗೋಣಿಚೀಲಗಳಿಂದ ಕಟ್ಟಿರುವ ಗುಡಿಸಲುಗಳೇ ಗಟ್ಟಿಯಾಗಿವೆ. ಈ ಮಧ್ಯೆ ವಿದ್ಯುತ್‌, ಶೌಚಾಲಯ, ಶುದ್ಧ ಕುಡಿಯುವ ನೀರು ದೂರದ ಮಾತಾಗಿದೆ. ಇಷ್ಟಿದ್ದರೂ ಸ್ಥಳೀಯ ಆಡಳಿತ ಮಾತ್ರ ಕಂಡೂ ಕಾಣದಂತೆ ಸುಮ್ಮನಿರುವುದು ವಿಪರ್ಯಾಸ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...
WhatsApp Image 2025 03 15 at 10.56.51 AM 1

ಮುಂಜಾನೆಯಿಂದ ಸಂಜೆಯವರೆಗೆ ಬೀಸುವ ಕಲ್ಲು ನಿರ್ಮಾಣ ಮಾಡುವುದು, ಭರಣಿ ಮಾಡುವುದು, ತಾಡಪತ್ರಿ ಮಾರುವುದು, ಪ್ಲಾಸ್ಟಿಕ್ ಆಯುವುದು ಇವರ ನಿತ್ಯದ ಕೆಲಸವಾಗಿದ್ದು, ಅವುಗಳ ಮಾರಾದಿಂದ ಬರುವ ಹಣದಲ್ಲಿ ದಿನ ದೂಡುವುದು ಇವೇ ಅಲ್ಲಿನ ಜನರ ದೈನಂದಿನ ದಿನಚರಿ.

ಟಾರ್ಪಾಲಿನ್ ಜೋಪಡಿಗಳಲ್ಲಿಯೇ ಹಲವು ವರ್ಷಗಳಿಂದ ಜೀವನ ನಡೆಸುತ್ತಿರುವ ಇವರಿಗೆ ಇದುವರೆಗೆ ಕುಡಿಯುವ ನೀರು ಸಹ ಸಿಗುತ್ತಿಲ್ಲ. ವಿದ್ಯುತ್ ಇಲ್ಲ, ನಿತ್ಯವೂ ಕತ್ತಲಿನಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ.

ಈ ಕುರಿತು ಇಲ್ಲಿ ವಾಸವಿರುವ ನಾಗಮ್ಮ ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “50 ವರ್ಷಗಳಿಂದ ಇಲ್ಲಿ ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಓಟು ಹಾಕುತ್ತೇವೆ. ಕೆರೆಯ ಪಕ್ಕದಲ್ಲಿಯೆ ಇದ್ದರೂ ಯಾರು ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ. ದುಡ್ಡು ಕೊಟ್ಟು ನೀರು ತೆಗೆದುಕೊಳ್ಳುತ್ತೇವೆ. ಮೇಣದ ಬತ್ತಿ ಹಚ್ಚಿಕೊಂಡು ಜೀವನ ಮಾಡುತ್ತೇವೆ. ಚುನಾವಣೆ ವೇಳೆ ಮತ ಕೇಳಿಕೊಂಡು ಬರುತ್ತಾರೆ-ಹೋಗುತ್ತಾರೆ, ಆದರೆ ಯಾರೊಬ್ಬರೂ ಇಲ್ಲಿವರೆಗೆ ನಮಗೆ ಸ್ವಂತ ಜಾಗ ಕೊಟ್ಟಿಲ್ಲ. ಮನೆಯಂತೂ ಇಲ್ಲವೇ ಇಲ್ಲ” ಎಂದು ಅಳಲು ತೋಡಿಕೊಂಡರು.

WhatsApp Image 2025 03 15 at 10.56.50 AM

“ಚುನಾವಣೆಯ ಸಂದರ್ಭದಲ್ಲಿ ಇಲ್ಲಿನ ಶಾಸಕ ಲಕ್ಷ್ಮಣ ಸವದಿಯವರು ಚುನಾವಣೆಯಲ್ಲಿ ಗೆದ್ದ ಬಳಿಕ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿ ಹೋದವರು, ಮರಳಿ ಬಂದಿಲ್ಲ. ಬೀಸುಕಲ್ಲು ಮಾಡಿ ಜೀವನ ಮಾಡುತ್ತೇವೆ. ನಾವು ಶಾಲೆಗೆ ಹೋಗಿಲ್ಲ. ನಮ್ಮ ಮಕ್ಕಳು ಶಾಲೆಗೆ ಹೋಗಿಲ್ಲ. ಸರ್ಕಾರವು ನಮಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಡಬೇಕು. ಮಕ್ಕಳ ಶಿಕ್ಷಣಕ್ಕೊಂದು ದಾರಿ ಮಾಡಿಕೊಡಬೇಕು” ಎಂದು ಶಾಸಕರಿಗೆ ಮನವಿ ಮಾಡಿದರು.

ಶಾಂತಾಬಾಯಿ ಮಾತನಾಡಿ, “ಮಳೆ ಗಾಳಿ ಎನ್ನದೆ ಜೋಪಡಿಯಲ್ಲಿ ಜೀವನ ಮಾಡುತ್ತೇವೆ. ಇಲ್ಲಿ ಕುಡಿಯುವ ನೀರಿಲ್ಲ. ಶೌಚಾಲಯವಿಲ್ಲ. ಮನೆ ನಿರ್ಮಾಣಕ್ಕೆ ಸ್ಥಳ ನೀಡುತ್ತೆವೆ ಎಂದು ಓಟು ಹಾಕಿಸಿಕೊಂಡು ಹೋಗುತ್ತಾರೆ. ಆದರೆ ಇಷ್ಟು ವರ್ಷಗಳಾದರೂ ಯಾರೂ ಸಮಸ್ಯೆ ಬಗೆ ಹರಿಸಿಲ್ಲ. ಶಾಸಕರು ಚುನಾವಣೆಯಲ್ಲಿ ಮಾತ್ರ ಬರುತ್ತಾರೆ ಆದರೆ ಚುನಾವಣೆ ನಂತರ ನಮ್ಮ ಸಮಸ್ಯೆ ಕೇಳಲು ಬಂದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹನಮವ್ವ ಮಾತನಾಡಿ, “ಓಟು ಕೊಟ್ಟು ಮೂರು ಬಾರಿ ಮೋದಿ ಗೆಲ್ಲಿಸಿದ್ದೇವೆ. ಅವರು ಏನು ಮಾಡಿಲ್ಲ. ಲಕ್ಷ್ಮಣ ಸವದಿಯವರು ಭರವಸೆ ಕೊಟ್ಟಿದ್ದಾರೆ. ಹಾಗೂ ಹೀಗೂ ಗೃಹಲಕ್ಷ್ಮೀ ಹಣ‌ ಬರುತ್ತಿದೆ. ಜತೆಗೆ ತಾಡಪತ್ರಿ, ಬೀಸುಕಲ್ಲು ಮಾರುವುದರಿಂದ ಸ್ವಲ್ಪ ಹಣ ಬರುತ್ತಿದೆ. ಒಂದು ಹೊತ್ತಿನ ಊಟಕ್ಕೆ ಸರಿಯಾಗಿದೆ. ಅಕ್ಕಪಕ್ಕ ಕೆರೆ ಕಟ್ಟೆ.. ಹಾವು ಚೇಳು ಬಂದರೂ ಕೇಳೋರಿಲ್ಲ. ನಾವು ಸತ್ತರೂ ಕಣ್ಣೀರು ಹಾಕುವವರಿಲ್ಲ ಎಂದು ನಮ್ಮನ್ನ ಇಷ್ಟು ತಿರಸ್ಕರಿಸಿದ್ದಾರೆ. ನಾವಂತೂ ಓದಿಲ್ಲ. ಮಕ್ಕಳಾದರೂ ಓದಲಿ ಎಂದರೆ ಅದಕ್ಕೂ ಸರಿಯಾದ ವ್ಯವಸ್ಥೆ ಇಲ್ಲ. ದೊಡ್ಡ ದೊಡ್ಡವರು ಏನು ಮಾಡಿದರೂ ಸರಿ” ಎಂದು ಅಸಹಾಯಕರಾಗಿ ಹೇಳಿದರು.

WhatsApp Image 2025 03 15 at 10.56.51 AM

ಇದನ್ನೂ ಓದಿ: ಅಥಣಿ | ಬಸ್ ನಿಲ್ದಾಣದಲ್ಲಿ ಅವಘಡ: ಮಹಿಳೆ ಸಾವು

ಸುಮಾರು ವರ್ಷಗಳಿಂದ ಜೋಪಡಿಗಳಲ್ಲಿ, ನೀರಿಲ್ಲದೆ, ಸರಿಯಾದ ಊಟ ಕೂಡ ಇಲ್ಲದೆ, ಕತ್ತಲೆಯಲ್ಲಿ ದಿನದೂಡುತ್ತಿರುವ ಪರಿಶಿಷ್ಟ ಸಮುದಾಯದ ಬಡ ಕುಟುಂಬಗಳ ಸಮಸ್ಯೆ ಕುರಿತು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಗಮನಹರಿಸಿ ಇವರ ಸಮಸ್ಯೆಯನ್ನು ಬಗೆಹರಿಸಲಿ ಎನ್ನುವದು ಈದಿನ ಡಾಟ್‌ ಕಾಮ್ ಆಶಯ. ಇನ್ನಾದರೂ ಸ್ಥಳೀಯ ಅಧಿಕಾರಿಗಳ, ಶಾಸಕರ ಕಣ್ಣು ತೆರೆಯುವುದೇ ಕಾದು ನೋಡಬೇಕು.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ ಶಾಪವೇ?‌ – ಭಾಗ 2

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...