ಬೀದರ್ ನಗರದ ನಾಗಲೋಕಾ ಬೌದ್ದ ವಿಹಾರ ಗಾಂಧಿ ಗಂಜ್‌ನಲ್ಲಿ ಬಿಎಸ್‌ಪಿ ಪಕ್ಷದ ಸಂಸ್ಥಾಪಕ ದಾದಾಸಾಹೇಬ್ ಕಾನ್ಸಿರಾಮ್ ಅವರ 91ನೇ ಜನ್ಮದಿನ ಆಚರಿಸಲಾಯಿತು.
ಭೀಮ ಆರ್ಮಿ ಗೌರವಾಧ್ಯಕ್ಷ ಘಾಳೆಪ್ಪಾ ಲಾಧಾಕರ್ ಮಾತನಾಡಿ, ʼದೊಡ್ಡ ಗುರಿ ದೊಡ್ಡ ತ್ಯಾಗವನ್ನೇ ಬಯಸುತ್ತದೆ, ದೊಡ್ಡದನ್ನು ಸಾಧಿಸಲು ದೊಡ್ಡ ತ್ಯಾಗಕ್ಕೆ ಸಿದ್ದರಾಗಿʼ ಎಂದು ಕಾನ್ಸಿರಾಮ್ ಅವರ ಸಂದೇಶ ಪಾಲಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮ ಆರ್ಮಿ ಬೀದರ್ ಜಿಲ್ಲಾ ಅಧ್ಯಕ್ಷ ಅಂಬರೀಷ್ ಕುದುರೆ ಸೇರಿದಂತೆ ಪ್ರಮುಖರಾದ ಗೌತಮ ಬಗದಲಕರ್, ಹರ್ಷಿತ್ ದಾಂಡೆಕರ್, ಅಖಿಲೇಶ್ ಸಾಗರ್, ಮಹೇಶ್ ಬುಧೇರಾ, ರವಿ ಮೊರೆ, ಜೈಭೀಮ್ ಜ್ಯೋತಿ, ತುಕಾರಾಂ ಫುಲೆಕರ್ ಮತ್ತಿತರರು ಪಾಲ್ಗೊಂಡಿದ್ದರು.
ಜನರ ಧ್ವನಿ ಸಂಘಟನೆಯಿಂದ ಕಾನ್ಸಿರಾಮ್ ಜಯಂತಿ ಆಚರಣೆ :

ಜನರ ಧ್ವನಿ ಸಂಘಟನೆಯ ವತಿಯಿಂದ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ದಾದಾ ಸಾಹೇಬ್ ಕಾನ್ಸಿರಾಮ್ ಅವರ 91ನೇ ಜಯಂತಿಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಜನರ ಧ್ವನಿ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ ಹಾಗೂ ಸಂಘಟನೆಯ ಹಿರಿಯ ಮುಖಂಡರಾದ ತಿಪ್ಪಣ್ಣ ವಾಲಿ, ಜಿಲ್ಲಾಧ್ಯಕ್ಷ ರಾಜಕುಮಾರ್ ಸಿಂಧೆ, ಚಿಂಚೋಳಿ ತಾಲ್ಲೂಕಾಧ್ಯಕ್ಷ ಕೆ.ಮಹೇಶ, ಬಸವಕಲ್ಯಾಣ ತಾಲೂಕಾಧ್ಯಕ್ಷ ಮಾರುತಿ ಕಾಂಬಳೆ, ಮಾದಿಗ ದಂಡೋರ ಹೋರಾಟ ಸಮಿತಿ ಬೀದರ್ ದಕ್ಷಿಣ ಅಧ್ಯಕ್ಷ ವಿರಶೆಟ್ಟಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಔರಾದ್‌ನಲ್ಲಿ ಕಾನ್ಸಿರಾಮ್ ಜಯಂತಿ ಆಚರಣೆ :

ಬಹುಜನ ಸಮಾಜ ಪಾರ್ಟಿಯ ಸಂಸ್ಥಾಪಕರಾದ ದಾದಾ ಸಾಹೇಬ್ ಕಾನ್ಸಿರಾಮ್ ಅವರ ಅನುಯಾಯಿಗಳು ಔರಾದ್‌ನಲ್ಲಿ ಶನಿವಾರ ಕಾನ್ಸಿರಾಮ್ ಅವರ ಜಯಂತಿ ಆಚರಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರಾದ ರಾಹುಲ್ ಖಂದಾರೆ, ನಂದಾದೀಪ ಬೋರಾಳೆ, ಯಶವಂತ್ ಬೀಗಾಂವಕರ್, ರಮೇಶ ಬೀಗಾಂವಕರ್, ಪಂಡರಿ ಕಸ್ತೂರೆ, ರಾಮ ಗೋಡಬೋಲೆ ಇದ್ದರು.