ದಲಿತ ಮುಖಂಡನ ಮೇಲೆ ಹಲ್ಲೆ ಮಾಡಿ ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಪೂರ ಕ್ರಾಸ್ ಬಳಿ ಇಂದು ಬೆಳಿಗ್ಗೆ ನಡೆದಿದೆ.
ದಲಿತ ಮುಖಂಡ ಮಾಪಣ್ಣ ಮದ್ದರಕಿ ಕೊಲೆಯಾದವರು. ದುಷ್ಕರ್ಮಿಗಳು ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ತಿಳಿದುಬಂದಿದ್ದು, ಆರೋಪಿಗಳು ಯಾರೆಂದು ಪತ್ತೆಯಾಗಿಲ್ಲ.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಸರ್ಕಾರಿ ರಜೆ ಇಲ್ಲದಿದ್ದರೂ ಸ್ವಯಂ ರಜೆ ಘೋಷಿಸಿಕೊಂಡ ಜಿಲ್ಲಾಡಳಿತ; ಸಾರ್ವಜನಿಕರ ಆಕ್ರೋಶ
“ಬೆಳಿಗ್ಗೆ ಹೇರ್‌ಕಟ್ ಮಾಡಿಸಿಕೊಳ್ಳಲು ಅಲ್ಲಿ ಎಂಬಾತನ ಜತೆಗೆ ಬೈಕ್ ಮೇಲೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮಾರಕಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ” ಎಂದು ಸ್ಥಳೀಯರು ತಿಳಿಸಿದರು.