ಕ್ರಿಕೆಟಿಗ ಮ್ಯಾಥ್ಯೂ ಬ್ರೌನ್ಲೀ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು 62ನೇ ವರ್ಷದಲ್ಲಿ ಆಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅವರು ಮಾರ್ಚ್ 10ರಂದು ನಡೆದ ಕೋಸ್ಟರಿಕ ವಿರುದ್ಧದ ಅಂತರ್ರಾಷ್ಟ್ರೀಯ ಟ್ವೆಂಟಿ20 ಪಂದ್ಯದಲ್ಲಿ ಫಾಕ್ಲ್ಯಾಂಡ್ ಐಲ್ಯಾಂಡ್ಸ್ ಪರವಾಗಿ ಆಡಿದ್ದಾರೆ ಎಂದು ‘ವಿಸ್ಡನ್’ ವರದಿ ಮಾಡಿದೆ.
ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ, ತನ್ನ 62ನೇ ವರ್ಷದಲ್ಲಿ ಬ್ರೌನ್ಲೀ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿರುವ ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ. ಅವರು ಈ ಮೂಲಕ ಉಸ್ಮಾನ್ ಗೋಕರ್ರ ದಾಖಲೆಯನ್ನು ಮುರಿದಿದ್ದಾರೆ. ಉಸ್ಮಾನ್ 2019ರ ಆಗಸ್ಟ್ನಲ್ಲಿ ಇಲ್ಫೊವ್ ಕೌಂಟಿಯಲ್ಲಿ ತನ್ನ 59ನೇ ವರ್ಷದಲ್ಲಿ ರೊಮೇನಿಯ ವಿರುದ್ಧ ಟರ್ಕಿ ಪರವಾಗಿ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದರು.
ಈ ಸುದ್ದಿ ಓದಿದ್ದೀರಾ? ಟೀಂ ಇಂಡಿಯಾದ ಕಹಿ ನೆನಪುಗಳನ್ನು ಬದಿಗೆ ಸರಿಸಿದ ಚಾಂಪಿಯನ್ಸ್ ಟ್ರೋಫಿ ಗೆಲುವು
ತನ್ನ ಕ್ರೀಡಾ ಜೀವನದಲ್ಲಿ ಬ್ರೌನ್ಲೀ ಮೂರು ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಮೂರು ಇನಿಂಗ್ಸ್ಗಳಲ್ಲಿ ಆರು ರನ್ಗಳನ್ನು ಗಳಿಸಿದ್ದಾರೆ. ಆ ಪೈಕಿ ಎರಡು ಇನಿಂಗ್ಸ್ಗಳಲ್ಲಿ ಅವರು ಅಜೇಯವಾಗಿ ಉಳಿದಿದ್ದರು. ಅವರು ಕೇವಲ ಒಂದು ಓವರ್ ಮಾತ್ರ ಬೌಲ್ ಮಾಡಿದ್ದಾರೆ. ಈವರೆಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿಕೆಟ್ ಪಡೆದಿಲ್ಲ.
ಇತರ ಕ್ರಿಕೆಟಿಗರಲ್ಲಿ ಇಂಗ್ಲೆಂಡ್ನ ಜೇಮ್ಸ್ ಸೌಥರ್, ಪಾಕಿಸ್ತಾನದ ಮಿರಾನ್ ಬಕ್ಷ್ ಮತ್ತು ಭಾರತದ ರುಸ್ತಮ್ಜಿ ಜಮ್ಶೆಡ್ ಕೂಡ ಸೇರಿದ್ದಾರೆ, ಇವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರರ ಪಟ್ಟಿಯಲ್ಲಿ ಸೇರಿದ್ದಾರೆ. ರುಸ್ತಮ್ಜಿ ಜಮ್ಶೆಡ್ ಅವರು 41 ನೇ ವಯಸ್ಸಿನಲ್ಲಿ ಭಾರತ ಪರ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಇವರು ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಕ್ರಿಕೆಟಿಗ.
