ದಾಟುತ್ತಿದ್ದ ವೇಳೆ ಲಾರಿ ಹಾಯ್ದು 5 ವರ್ಷದ ಬಾಲಕ ಮೃತಪಟ್ಟ ಘಟನೆ ತಾಲ್ಲೂಕಿನ ಸೇಡಂ ತಾಲ್ಲೂಕಿನ ಮಳಖೇಡದ ರಾಜಶ್ರೀ ಸಿಮೆಂಟ್ ಕಂಪನಿ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.
ಚಿತ್ತಾಪುರ ತಾಲ್ಲೂಕಿನ ಅಲ್ಲೂರ (ಬಿ) ಗ್ರಾಮದ ಅಯ್ಯಪ್ಪ (5) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಕಂಪನಿಗೆ ಬರುವ ಲಾರಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿ ಕೊಡುವಂತೆ ಒತ್ತಾಯಿಸಿ ಬಾಲಕನ ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಾಲಕನ ಶವವನ್ನು ರಾಜಶ್ರೀ ಸಿಮೆಂಟ್ ಕಂಪನಿಯ ಮುಖ್ಯದ್ವಾರದ ಎದುರು ಇಟ್ಟು ಪ್ರತಿಭಟಿಸಿದರು.
ʼರಾಜಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ಧ ಪ್ರಕರಣ ದಾಖಲಿಸಿ 40 ಲಕ್ಷ ರೂ. ಪರಿಹಾರ ನೀಡಬೇಕು. ಮೃತರ ಕುಟುಂಬಸ್ಥರಿಗೆ ಕಾರ್ಖಾನೆಯಲ್ಲಿ ಉದ್ಯೋಗ ನೀಡಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರೂ ಕಾರ್ಖಾನೆ ಆಡಳಿತ ಮಂಡಳಿ ಮೌನ ವಹಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಖಾನೆ ಮುಖ್ಯ ದ್ವಾರದ ಬಳಿ ಸುಮಾರು ವರ್ಷಗಳಿಂದ ರಸ್ತೆ ಹದಗೆಟ್ಟು ಸಂಪೂರ್ಣ ಹಾಳಾಗಿದೆ. ಇದರಿಂದ ಅವಘಡ ಸಂಭವಿಸಿ ಇಲ್ಲಿಯವರೆಗೆ ಮೂರ್ನಾಲ್ಕು ಜೀವ ಹೋಗಿವೆʼ ಎಂದು ಮಳಖೇಡ ಗ್ರಾಪಂ ಸದಸ್ಯ ಉಮೇಶ್ ಪಾಂಡುಸಿಂಗ್ ಚೌವ್ಹಾಣ್ ಅವರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕದನ ವಿರಾಮ ಉಲ್ಲಂಘಿಸಿ ಗಾಜಾ ಮೇಲೆ ಇಸ್ರೇಲ್ ವ್ಯಾಪಕ ದಾಳಿ: ಕನಿಷ್ಠ 200 ಸಾವು
ಈ ಸಂದರ್ಭದಲ್ಲಿ ದಲಿತ ಸೇನೆ ಮುಖಂಡ ಮೈಲಾರಿ, ಅಂಬೇಡ್ಕರ್ ಸೇವ ಸಮಿತಿ ಮುಖಂಡ, ಶಂಭುಲಿಂಗ ನಾಟೇಕರ್ ಸೇರಿದಂತೆ ಮೃತ ಬಾಲಕನ ಪೋಷಕರು, ಸಾರ್ವಜನಿಕರು ಇದ್ದರು.