ವಿದ್ಯುತ್ ಪ್ರವಹಿಸುವ ತಂತಿ ತುಂಡಾಗಿ ಬಿದ್ದ ಕಾರಣ ಬೆಂಕಿ ಅವಘಡ ಸಂಭವಿಸಿದ್ದು, ನಾಲ್ಕು ರಾಸುಗಳು ಹಾಗೂ ಹುಲ್ಲಿನ ಬಣವೆಗಳು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ನಡೆದಿದೆ.
“ಸಂಡೂರು ರಸ್ತೆಯ ಹಳ್ಳದ ಬದಿಯಲ್ಲಿ, ಅಗ್ನಿ ಅವಘಡ ಸಂಭವಿಸಿ ರಾಸುಗಳು ಹಾಗೂ ಮೇವಿನ ಬಣವೆಗಳು ಭಸ್ಮಗೊಂಡಿರುವ ಘಟನೆ ಮಾರ್ಚ್ 19ರ ರಾತ್ರಿ 11ರ ಸುಮಾರಿಗೆ ಜರುಗಿದೆ. ಬಣವೆಗಳ ಮೇಲ್ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಪ್ರವಸಹಿಸುವತ್ತಿರುವ, ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೆಂಕಿ ಅವಘಡ ಸಂಭವಿಸಿದೆ” ಎಂದು ಸ್ಥಳದ ವಾಸಿಗಳು ಪ್ರತ್ಯಕ್ಷ ದರ್ಶಿಗಳು ಹಾಗೂ ಬೆಂಕಿ ಅವಘಡದಿಂದ ನಷ್ಟ ಅನುಭವಿಸಿರುವ ಸಂತ್ರಸ್ತ ರೈತರು ದೂರಿದ್ದಾರೆ.
ಪಟ್ಟಣದ ಸಂಡೂರು ರಸ್ತೆಯಲ್ಲಿರುವ ಹಳ್ಳದ ಬದಿಯ ಏರಿ ಮೇಲೆ, ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಆಶ್ರಯ ಪಡೆದಿರುವ ಪಟ್ಟಣದ ವಾಸಿ ದುರುಗಪ್ಪ ಎಂಬುವವರಿಗೆ ಸೇರಿರುವ, ಎರಡು ಕುರಿಗಳು ಹಾಗೂ ಮೇಕೆ, ಆಕಳು ಕರು ಬೆಂಕಿಗಾಹುತಿಯಾಗಿವೆ. ಹರಿದು ಬಿದ್ದ ವಿದ್ಯುತ್ ತಂತಿಯಿಂದ ಹೊರ ಹೊಮ್ಮಿದ ಬೆಂಕಿಯ ಕೆನ್ನಾಲಿಗೆಯ ರಭಸಕ್ಕೆ, ಆರು ಮೇವಿನ ಬಣವೆಗಳು ಸಂಪೂರ್ಣ ಭಸ್ಮವಾಗಿವೆ. ಅವಘಡ ಘಟನೆ ಸಂಭವಿಸಿರುವುದರ ದೂರು ಆಲಿಸಿದಾಕ್ಷಣ, ಕೂಡ್ಲಿಗಿ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಅಗ್ನಿ ತಹಬದಿಗೆ ತರುವ ಪ್ರಯತ್ನ ನಡೆಸಿದ್ದಾರೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ದೌಡು ಠಿಕಾಣಿ ಬೆಂಕಿ ಅನಾಹುತ ಜರುಗುತ್ತಿರುವ ಮಾಹಿತಿ ತಿಳಿದಾಕ್ಷಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಘಟನಾ ಸ್ಥಳಕ್ಕೆ ದಾವಿಸಿದ್ದಾರೆ. ಪಟ್ಟಣ ಪಂಚಾಯಿತಿ ವತಿಯಿಂದ ಜೆಸಿಬಿ ಯಂತ್ರದ ಸೌಲಭ್ಯ ಒದಗಿಸಿದ್ದಾರೆ. ಅಗ್ನಿ ಶಾಮಕ ದಳದ ಕಾರ್ಯಾಚರಣೆಗೆ ಸೂಕ್ತ ಸಹಕಾರ ಹಾಗೂ ಅಗತ್ಯ ನೆರವು ನೀಡಿದ್ದಾರೆ. ನೊಂದವರಿಗೆ ಸಾಂತ್ವನ ಹೇಳಿದ್ದು, ಅಗತ್ಯ ಪರಿಹಾರ ಕುರಿತು ಶಾಸಕರಲ್ಲಿ ಮನವಿ ಮಾಡುವುದಾಗಿ ಹಾಗೂ ಸಂಬಂಧಿಸಿದ ಇಲಾಖೆಗೆ ಒತ್ತಾಯಿಸುವುದಾಗಿ ಭರವಸೆ ನೀಡಿದ್ದಾರೆ. ಅವರು ತಮ್ಮ ಸಹಚರರೊಂದಿಗೆ ಬೆಳಗಿನ ಜಾವ 2 ಗಂಟೆಯವರೆಗೆ ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದು, ಅಗ್ನಿ ನಂದಿಸುವಲ್ಲಿ ಅಗ್ನಿಶಾಮಕ ದಳದೊಂದಿಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಯುವ ಮುಖಂಡ ಡಾಣಿ ರಾಘವೇಂದ್ರ ಸೇರಿದಂತೆ, ಮತ್ತಿರರು ಕಾವಲ್ಲಿ ಶಿವಪ್ಪರವರೊಂದಿಗೆ ಇದ್ದರು, ಸ್ಥಳೀಯ ಯುವಕರು ಇದ್ದರು, ಬೆಂಕಿಯು ಮೇವಿನ ಬಣವೆಗಳಿಗೆ ಆವರಿಸಿರುವ ಕಾರಣ ಹತೋಟಿಗೆ ಬಾರದಿರುವುದರಿಂದಾಗಿ, ನಂದಿಸಲು ಹೆಚ್ಚುವರಿಯಾಗಿ ಕೊಟ್ಟೂರು ಅಗ್ನಿಶಾಮಕ ದಳದ ಸಹಕಾರ ಪಡೆಯಲಾಗಿದೆ. ಕೊಟ್ಟೂರು ಮತ್ತು ಕೂಡ್ಲಿಗಿ ಅಗ್ನಿಶಾಮಕ ದಳದ, ಜಂಟಿ ಕಾರ್ಯಾಚರಣೆ ನಡೆಸಿ ಅಗ್ನಿ ನಂದಿಸಿದ್ದಾರೆ. ಮೂರು ತಾಸುಗಳ ಕಾಲ ಅಗ್ನಿಶಾಮಕ ದಳದಿಂದ ನಂದಿಸುವ ಕಾರ್ಯಚರಣೆ ನಡೆಸಿದ್ದು, ಕೂಡ್ಲಿಗಿ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ, ಮೇವಿನ ಬಣವೆಗಳಿಗೆ ಹೊತ್ತಿಕೊಂಡಿರುವ ಬೆಂಕಿ ನಂದಿಸುವ ಹರಸಾಹಸ ಮಾಡಿದ್ದಾರೆ. ಆದರೆ ಪ್ರಾರಂಭದಲ್ಲಿ ಬೆಂಕಿಯ ಕೆನ್ನಾಲಿಗೆ ತಹಬದಿಗೆ ಬಾರದ ಕಾರಣ, ಕೊಟ್ಟೂರು ಅಗ್ನಿಶಾಮಕ ದಳದ ನೆರವು ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ವೃತ್ತಿಪರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಎರಡೂ ಅಗ್ನಿಶಾಮಕ ದಳದ ಸಿಬ್ಬಂದಿಯವರು, ಒಟ್ಟು ಮೂರು ಅಗ್ನಿಶಾಮಕದಳದ ವಾಹನಗಳೊಂದಿಗೆ ಜೆಸಿಬಿ ಯಂತ್ರದ ನೆರವಿನೊಂದಿಗೆ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಸತತ ಮೂರು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಮಾರ್ಚ್ 20ರ ಮುಂಜಾನೆ 2ರ ವೇಳೆ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ರಾಸುಗಳು ಐದು ಮೇವಿನ ಬಣವೆಗಳು ಸಂಪೂರ್ಣ ಭಸ್ಮವಾಗಿದೆ.
“ಅಗ್ನಿ ಅನಾಹುತದಲ್ಲಿ ಬೆಂಗಿಯ ರಭಸಕ್ಕೆ ಸಿಲುಕಿ ಎರಡು ಟಗರುಗಳು ಮೇಕೆ ಆಕಳು ಕರು ಸುಟ್ಟುಕರಕಲಾಗಿವೆ. ಬೃಹದಾಕಾರದ ದುಬಾರಿ ಭಾರೀ ಬೆಲೆಯ ಐದು ಮೇವಿನ ಬಣವೆಗಳು ಸಂಪೂರ್ಣ ಭಸ್ಮವಾಗಿವೆ. ಘಟನೆಯಲ್ಲಿ ಮಾಲೀಕ ದುರುಗಪ್ಪ ಹಾಗೂ ಬಸಪ್ಪ ಎಂಬ ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿ : ವಿ ಜಿ ವೃಷಭೇಂದ್ರ ಕೂಡ್ಲಿಗಿ