ವಿಜಯನಗರ | ವಿದ್ಯುತ್‌ ತಂತಿಯಿಂದ ಬೆಂಕಿ; ನಾಲ್ಕು ರಾಸು, ಹುಲ್ಲಿನ ಬಣವೆ ಭಸ್ಮ

Date:

ವಿದ್ಯುತ್ ಪ್ರವಹಿಸುವ ತಂತಿ ತುಂಡಾಗಿ ಬಿದ್ದ ಕಾರಣ ಬೆಂಕಿ ಅವಘಡ ಸಂಭವಿಸಿದ್ದು, ನಾಲ್ಕು ರಾಸುಗಳು ಹಾಗೂ ಹುಲ್ಲಿನ ಬಣವೆಗಳು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ನಡೆದಿದೆ.

- Advertisement -

“ಸಂಡೂರು ರಸ್ತೆಯ ಹಳ್ಳದ ಬದಿಯಲ್ಲಿ, ಅಗ್ನಿ ಅವಘಡ ಸಂಭವಿಸಿ ರಾಸುಗಳು ಹಾಗೂ ಮೇವಿನ ಬಣವೆಗಳು ಭಸ್ಮಗೊಂಡಿರುವ ಘಟನೆ ಮಾರ್ಚ್‌ 19ರ ರಾತ್ರಿ 11ರ ಸುಮಾರಿಗೆ ಜರುಗಿದೆ. ಬಣವೆಗಳ ಮೇಲ್ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಪ್ರವಸಹಿಸುವತ್ತಿರುವ, ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೆಂಕಿ ಅವಘಡ ಸಂಭವಿಸಿದೆ” ಎಂದು ಸ್ಥಳದ ವಾಸಿಗಳು ಪ್ರತ್ಯಕ್ಷ ದರ್ಶಿಗಳು ಹಾಗೂ ಬೆಂಕಿ ಅವಘಡದಿಂದ ನಷ್ಟ ಅನುಭವಿಸಿರುವ ಸಂತ್ರಸ್ತ ರೈತರು ದೂರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಪಟ್ಟಣದ ಸಂಡೂರು ರಸ್ತೆಯಲ್ಲಿರುವ ಹಳ್ಳದ ಬದಿಯ ಏರಿ ಮೇಲೆ, ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಆಶ್ರಯ ಪಡೆದಿರುವ ಪಟ್ಟಣದ ವಾಸಿ ದುರುಗಪ್ಪ ಎಂಬುವವರಿಗೆ ಸೇರಿರುವ, ಎರಡು ಕುರಿಗಳು ಹಾಗೂ ಮೇಕೆ, ಆಕಳು ಕರು ಬೆಂಕಿಗಾಹುತಿಯಾಗಿವೆ. ಹರಿದು ಬಿದ್ದ ವಿದ್ಯುತ್ ತಂತಿಯಿಂದ ಹೊರ ಹೊಮ್ಮಿದ ಬೆಂಕಿಯ ಕೆನ್ನಾಲಿಗೆಯ ರಭಸಕ್ಕೆ, ಆರು ಮೇವಿನ ಬಣವೆಗಳು ಸಂಪೂರ್ಣ ಭಸ್ಮವಾಗಿವೆ. ಅವಘಡ ಘಟನೆ ಸಂಭವಿಸಿರುವುದರ ದೂರು ಆಲಿಸಿದಾಕ್ಷಣ, ಕೂಡ್ಲಿಗಿ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಅಗ್ನಿ ತಹಬದಿಗೆ ತರುವ ಪ್ರಯತ್ನ ನಡೆಸಿದ್ದಾರೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ದೌಡು ಠಿಕಾಣಿ ಬೆಂಕಿ ಅನಾಹುತ ಜರುಗುತ್ತಿರುವ ಮಾಹಿತಿ ತಿಳಿದಾಕ್ಷಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಘಟನಾ ಸ್ಥಳಕ್ಕೆ ದಾವಿಸಿದ್ದಾರೆ. ಪಟ್ಟಣ ಪಂಚಾಯಿತಿ ವತಿಯಿಂದ ಜೆಸಿಬಿ ಯಂತ್ರದ ಸೌಲಭ್ಯ ಒದಗಿಸಿದ್ದಾರೆ. ಅಗ್ನಿ ಶಾಮಕ ದಳದ ಕಾರ್ಯಾಚರಣೆಗೆ ಸೂಕ್ತ ಸಹಕಾರ ಹಾಗೂ ಅಗತ್ಯ ನೆರವು ನೀಡಿದ್ದಾರೆ. ನೊಂದವರಿಗೆ ಸಾಂತ್ವನ ಹೇಳಿದ್ದು, ಅಗತ್ಯ ಪರಿಹಾರ ಕುರಿತು ಶಾಸಕರಲ್ಲಿ ಮನವಿ ಮಾಡುವುದಾಗಿ ಹಾಗೂ ಸಂಬಂಧಿಸಿದ ಇಲಾಖೆಗೆ ಒತ್ತಾಯಿಸುವುದಾಗಿ ಭರವಸೆ ನೀಡಿದ್ದಾರೆ. ಅವರು ತಮ್ಮ ಸಹಚರರೊಂದಿಗೆ ಬೆಳಗಿನ ಜಾವ 2 ಗಂಟೆಯವರೆಗೆ ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದು, ಅಗ್ನಿ ನಂದಿಸುವಲ್ಲಿ ಅಗ್ನಿಶಾಮಕ ದಳದೊಂದಿಗೆ ಸಹಕರಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಯುವ ಮುಖಂಡ ಡಾಣಿ ರಾಘವೇಂದ್ರ ಸೇರಿದಂತೆ, ಮತ್ತಿರರು ಕಾವಲ್ಲಿ ಶಿವಪ್ಪರವರೊಂದಿಗೆ ಇದ್ದರು, ಸ್ಥಳೀಯ ಯುವಕರು ಇದ್ದರು, ಬೆಂಕಿಯು ಮೇವಿನ ಬಣವೆಗಳಿಗೆ ಆವರಿಸಿರುವ ಕಾರಣ ಹತೋಟಿಗೆ ಬಾರದಿರುವುದರಿಂದಾಗಿ, ನಂದಿಸಲು ಹೆಚ್ಚುವರಿಯಾಗಿ ಕೊಟ್ಟೂರು ಅಗ್ನಿಶಾಮಕ ದಳದ ಸಹಕಾರ ಪಡೆಯಲಾಗಿದೆ. ಕೊಟ್ಟೂರು ಮತ್ತು ಕೂಡ್ಲಿಗಿ ಅಗ್ನಿಶಾಮಕ ದಳದ, ಜಂಟಿ ಕಾರ್ಯಾಚರಣೆ ನಡೆಸಿ ಅಗ್ನಿ ನಂದಿಸಿದ್ದಾರೆ. ಮೂರು ತಾಸುಗಳ ಕಾಲ ಅಗ್ನಿಶಾಮಕ ದಳದಿಂದ ನಂದಿಸುವ ಕಾರ್ಯಚರಣೆ ನಡೆಸಿದ್ದು, ಕೂಡ್ಲಿಗಿ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ, ಮೇವಿನ ಬಣವೆಗಳಿಗೆ ಹೊತ್ತಿಕೊಂಡಿರುವ ಬೆಂಕಿ ನಂದಿಸುವ ಹರಸಾಹಸ ಮಾಡಿದ್ದಾರೆ. ಆದರೆ ಪ್ರಾರಂಭದಲ್ಲಿ ಬೆಂಕಿಯ ಕೆನ್ನಾಲಿಗೆ ತಹಬದಿಗೆ ಬಾರದ ಕಾರಣ, ಕೊಟ್ಟೂರು ಅಗ್ನಿಶಾಮಕ ದಳದ ನೆರವು ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ವೃತ್ತಿಪರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಎರಡೂ ಅಗ್ನಿಶಾಮಕ ದಳದ ಸಿಬ್ಬಂದಿಯವರು, ಒಟ್ಟು ಮೂರು ಅಗ್ನಿಶಾಮಕದಳದ ವಾಹನಗಳೊಂದಿಗೆ ಜೆಸಿಬಿ ಯಂತ್ರದ ನೆರವಿನೊಂದಿಗೆ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಸತತ ಮೂರು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಮಾರ್ಚ್‌ 20ರ ಮುಂಜಾನೆ 2ರ ವೇಳೆ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ರಾಸುಗಳು ಐದು ಮೇವಿನ ಬಣವೆಗಳು ಸಂಪೂರ್ಣ ಭಸ್ಮವಾಗಿದೆ.

“ಅಗ್ನಿ ಅನಾಹುತದಲ್ಲಿ ಬೆಂಗಿಯ ರಭಸಕ್ಕೆ ಸಿಲುಕಿ ಎರಡು ಟಗರುಗಳು ಮೇಕೆ ಆಕಳು ಕರು ಸುಟ್ಟುಕರಕಲಾಗಿವೆ. ಬೃಹದಾಕಾರದ ದುಬಾರಿ ಭಾರೀ ಬೆಲೆಯ ಐದು ಮೇವಿನ ಬಣವೆಗಳು ಸಂಪೂರ್ಣ ಭಸ್ಮವಾಗಿವೆ. ಘಟನೆಯಲ್ಲಿ ಮಾಲೀಕ ದುರುಗಪ್ಪ ಹಾಗೂ ಬಸಪ್ಪ ಎಂಬ ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವರದಿ : ವಿ ಜಿ ವೃಷಭೇಂದ್ರ ಕೂಡ್ಲಿಗಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR: ಕೊಡಗಿನ ಬ್ಯಾಡಗೊಟ್ಟದಲ್ಲಿ 66 ಮುಸ್ಲಿಂ ಮತಗಳ ಅಳಿಸುವಿಕೆಗೆ Form-7 ಅರ್ಜಿ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ...

ಅ.4ರಿಂದ ವಿಜಯಪುರ – ತಿರುಪತಿ ದಸರಾ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುಪತಿ–ವಿಜಯಪುರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಪ್ತಾಹಿಕ ವಿಶೇಷ...

ವಿಜಯಪುರ | ರೂ. 2,500 ಸಬ್ಸಿಡಿಗೆ ವಿರೋಧ: ಸರ್ಕಾರಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ರೈತರು!

ಭೀಕರ ಬರದಿಂದ ನಲುಗಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹2,500 ಇನ್‌ಪುಟ್...

ರಾಜ್ಯ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಚರ್ಚೆ: ಅನ್ನಪೂರ್ಣ ಹೆಸರು ಮುನ್ನೆಲೆಗೆ!

ರಾಜ್ಯ ಸಚಿವ ಸಂಪುಟದಲ್ಲಿ ಸದ್ಯ ಎರಡು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು,...