ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆಯನ್ನು ನಡೆಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯ ವಿಡಿಯೋ ಹರಿದಾಡುತ್ತಿದೆ. ಮಲಗಿರುವ ಬಿಜೆಪಿ ಸರ್ಕಾರವನ್ನು ಎಬ್ಬಿಸಲು ಕಾಂಗ್ರೆಸ್ ‘ಕುಂಭಕರ್ಣ’ ಪ್ರತಿಭಟನೆಯನ್ನು ನಡೆಸಿದೆ.
ಶಾಸಕರು ಹಗರಣಗಳು ಮತ್ತು ಭ್ರಷ್ಟಾಚಾರಗಳನ್ನು ಮಾಡಿದರೂ ಕೂಡಾ ಸರ್ಕಾರ ಮಾತ್ರ ಕುಂಭಕರ್ಣನಂತೆ ಮಲಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಹಾಗೆಯೇ ಕುಂಭಕರ್ಣನಂತೆ ವೇಷ ಧರಿಸಿ ನಿದ್ದೆಗೆ ಜಾರಿರುವಂತೆ ನಟಿಸಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಅಪರಾಧ ಹೆಚ್ಚಳ | ತನ್ನ ತಟ್ಟೆಯಲ್ಲಿ ಹೆಗ್ಗಣ, ಕಾಂಗ್ರೆಸ್ ತಟ್ಟೆಯ ನೊಣದತ್ತ ಬಿಜೆಪಿ ಬೊಟ್ಟು!
ಹಾಗೆಯೇ ಮಲಗಿರುವ ಸರ್ಕಾರವನ್ನು ಪ್ರತಿನಿಧಿಸುವ ಕುಂಭಕರ್ಣ ವೇಷಾಧಾರಿಯನ್ನು ಎಬ್ಬಿಸಲು ಕಾಂಗ್ರೆಸ್ ನಾಯಕರು ಪೀಪಿ ಊದಿ ಪ್ರತಿಭಟಿಸಿದ್ದಾರೆ. ವಿಪಕ್ಷ ನಾಯಕ ಉಮಾಂಗ್ ಸಿಂಘಾರ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ. ಶಾಸಕ ದಿನೇಶ್ ಜೈನ್ ಕುಂಭಕರ್ಣನಂತೆ ವೇಷ ಧರಿಸಿದ್ದರು.
उठो कुंभकर्ण, जनता परेशान है!
— MP Congress (@INCMP) March 20, 2025
उठो कुंभकर्ण, प्रदेश बेहाल है!!
जनता से मुंह मोड़कर कुंभकर्ण की नींद सो रही भाजपा सरकार बेतहाशा अपराधों, परेशान जनता और बेलगाम अफसरशाही के शोर से भी उठने को तैयार नहीं है!
• आज नेता प्रतिपक्ष श्री @UmangSinghar जी के नेतृत्व में कांग्रेस विधायकों… pic.twitter.com/yFPYm1TiaJ
“ದೇಶದಲ್ಲಿ ನಿರಂತರವಾಗಿ ಹಗರಣ ನಡೆಯುತ್ತಿದ್ದರೂ ಕೂಡಾ ಬಿಜೆಪಿ ಸರ್ಕಾರವು ಕುಂಭಕರ್ಣನಂತೆ ಮಲಗಿದೆ. ಆದ್ದರಿಂದ ನಾವು ಈ ರೀತಿಯಾಗಿ ವಿನೂತನ ಪ್ರತಿಭಟನೆ ನಡೆಸಿದ್ದೇವೆ. ರಾಜ್ಯದಲ್ಲಿ ನರ್ಸಿಂಗ್ ಹಗರಣ, ಸಾರಿಗೆ ಹಗರಣ, ಪತ್ವಾರಿ ಹಗರಣ ನಡೆದಿದೆ. ಯುವಕರಿಗೆ ಉದ್ಯೋಗ ಲಭಿಸುತ್ತಿಲ್ಲ. ರೈತರಿಗೆ ಗೊಬ್ಬರುಗಳು ಲಭ್ಯವಾಗುತ್ತಿಲ್ಲ. ಆದರೆ ಸರ್ಕಾರ ಇದರ ವಿರುದ್ಧವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಒಪ್ಪುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ ಕ್ರಮವೂ ಕೈಗೊಳ್ಳುತ್ತಿಲ್ಲ” ಎಂದು ಸಿಂಘಾರ್ ಆರೋಪಿಸಿದ್ದಾರೆ.
ಆದರೆ ಇದಕ್ಕೆ ತಿರುಗೇಟು ನೀಡಿದ ಕ್ರೀಡಾ ಸಚಿವ ವಿಶ್ವಾಶ್ ಸಾರಂಗ್, “ನಾವು ಎಲ್ಲಾ ವಿಚಾರದ ಬಗ್ಗೆ ಚರ್ಚೆ ನಡೆಸಲು ಸಿದ್ಧವಿದ್ದೇವೆ. ಆದರೆ ಕಾಂಗ್ರೆಸ್ ಪ್ರತಿಭಟನೆ ಮಾಡಿ ಬಜೆಟ್ ಅಧಿವೇಶನದ ವೇಳೆ ಗದ್ದಲ ಸೃಷ್ಟಿಸುತ್ತಿದೆ. ಬರೀ ಫೋಟೋಗಾಗಿ ಈ ರೀತಿ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
