ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ 1ರಿಂದ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ₹10,000 ಗೌರವಧನವನ್ನು ನೀಡಬೇಕು ಮತ್ತು ಬಜೆಟ್‌ನಲ್ಲಿ ಘೋಷಿಸಿರುವಂತೆ ₹1,000 ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಎಐಯುಟಿಯುಸಿ ನೇತೃತ್ವದಲ್ಲಿ ವಿಜಯಪುರದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಅಶಾ ಸಂಘಟನೆ ಜಿಲ್ಲಾ ಸಂಚಾಲಕ ಭರತ್ ಕುಮಾರ್ ಮಾತನಾಡಿ, “ಕಳೆದ ಜನವರಿಯಲ್ಲಿ ನಡೆದ ಹೋರಾಟದ ವೇಳೆ ಏಪ್ರಿಲ್‌ನಿಂದ ಪ್ರತಿ ತಿಂಗಳು ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ₹10,000 ನೀಡಲಾಗುವುದು, ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಗೌರವಧನ ನೀಡಲಾಗುವುದು, ಒಂದು ವೇಳೆ ಕಾಂಪೋನೆಂಟ್‌ಗಳಿಂದ ಯಾರಿಗಾದರೂ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ ಅಂತಹ ಅಶಾ ಕಾರ್ಯಕರ್ತೆಯರಿಗೆ ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಲಾಗುವುದೆಂದು ಸ್ವತಃ ಮುಖ್ಯಮಂತ್ರಿಯವರೇ ಹೇಳಿದ್ದರು. ಆದರೆ, ಈಗ ಇದನ್ನು ಜಾರಿಗೊಳಿಸಲು ಸರ್ಕಾರ ಮೀನಾಮೇಷ ಎಣಿಸುವುದು ಸರಿಯಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮಾನಸಿಕ ಒತ್ತಡ ಮೀರಿ ಮಹಿಳೆ ಜವಾಬ್ದಾರಿ ನಿಭಾಯಿಸಬಲ್ಲಳು: ಶೋಭಾ
ಎಐಯುಟಿಯುಸಿ ಸಮಿತಿ ಜಿಲ್ಲಾ ಸದಸ್ಯೆ ಮಹಾದೇವಿ ಧರ್ಮಶೆಟ್ಟಿ, ಆಶಾ ಮುಖಂಡೆಯರಾದ ಭಾರತಿ ದೇವಕತೆ, ನಿರ್ಮಲಾ ಕಲಕೇರಿ, ಲೈಲಾ ಪಠಾಣ, ಲಕ್ಷ್ಮೀ ಸಿಮಿಕೇರಿ ರೇಣುಕಾ, ಅಂಬಿಕಾ ಒಳಸಂಗ, ಮೈರುನ್ನಿಸಾ, ಜ್ಯೋತಿ ಶಾಬಾದಿ, ಲಕ್ಷ್ಮೀ, ರೇಣುಕಾ ಸುವಣಾವಿಬೂತಿಮಠ, ಛಲವಾದಿ, ಜಯಶ್ರೀ ತ ಕಂಬಾರ, ಗೀತಾ, ಬಂಗಾರತಾಳ, ಕಾಶೀಬಾಯಿ, ಮಾಳಗುಂಡಮ್ಮ, ರೇಣುಕಾ, ಸುವರ್ಣಾ, ಮಂಜುಳಾ ಇದ್ದರು.