ಬಿರಿಯಾನಿ ಸೇವಿಸಿ 500 ರೂ ಮುಖ ಬೆಲೆಯ ನಕಲಿ ನೋಟು ಚಲಾವಣೆ ಮಾಡಲು ಮುಂದಾದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ರಾಯಚೂರು ನಗರದ ಮಾರುಕಟ್ಟೆ ಯಾರ್ಡ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಗಳಾದ ಮಂಜುನಾಥ ಹಾಗೂ ರಮೇಶ ಎಂಬುವವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ನಗರದ ಬಿರಿಯಾನಿ ಹೋಟೆಲ್‍ನಲ್ಲಿ ಚಿಕನ್ ಬಿರಿಯಾನಿ ತಿಂದು 500 ರೂ ಬಿಲ್ ಪಾವತಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಅನುಮಾನ ಬಂದು ಹೋಟೆಲ್ ಮಾಲಿಕ ನೋಟು ಚೆಕ್ ಮಾಡಿದಾಗ ಅಸಲಿಯತ್ತು ಬಯಲಾಗಿದೆ. ನೋಟಿನಲ್ಲಿ ʼಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾʼ ಅಂತ ನಮೂದಿಸಿದ್ದ ಮನೋರಂಜನೆಗಾಗಿ ಬಳಸುವ ನಕಲಿ ನೋಟನ್ನ ಆರೋಪಿಗಳು ಬಿಲ್ ಪಾವತಿಗೆ ಬಳಸಿದ್ದರು.

ಘಟನೆ ಸಂಬಂಧ ಹೋಟೆಲ್ ಮಾಲಿಕ ದೂರು ನೀಡಿದ್ದು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಖೋಟಾ ನೋಟು ಚಲಾವಣೆಯ ಪ್ರಕರಣ ಈಚೆಗಷ್ಟೇ ದಾಖಲಾಗಿದ್ದು, ಬೆನ್ನಲ್ಲೇ ಮತ್ತೊಂದು ಪ್ರಕರಣ ಬಯಲಾಗಿರುವುದು ಪೊಲೀಸರಿಗೆ ನಿದ್ದೆಗೆಡಿಸಿದೆ.
ಇದನ್ನೂ ಓದಿ: ರಾಯಚೂರು | ಪಿಡಿಓ, ಅಧಿಕಾರ ದುರ್ಬಳಕೆ ಆರೋಪ: ಕೂಲಿ ಕಾರ್ಮಿಕರು ಧರಣಿ