ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಾಕರ್ ಗಲ್ ಗ್ರಾಮದ ಹೊರವಲಯದಲ್ಲಿ ರಸ್ತೆ ಕಾಮಗಾರಿಗೆಂದು ತೋಡಿದ್ದ ಹೊಂಡದಲ್ಲಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿ ಮಂಜುನಾಥ ಕಾಶೀನಾಥ ಎಂದು ಗುರುತಿಸಲಾಗಿದೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯಿಂದ ಮಲವಿಸರ್ಜನೆಗೆಂದು ಹೋಗಿದ್ದ. ಈ ವೇಳೆ ಈಜಾಡಲು ಹೊಂಡದಲ್ಲಿ ಇಳಿದವನ್ನು ಮತ್ತೆ ಮೇಲಕ್ಕೆ ಬರಲಾಗದೆ ಸಾವನ್ನಪ್ಪಿದ್ದಾನೆಂದು ಹೇಳಲಾಗಿದೆ.
ಕುಟುಂಬಸ್ಥರು ಗ್ರಾಮದಲ್ಲೆಲ್ಲ ಹುಡುಕಿದರೂ ಸಿಗದಿದ್ದಾಗೆ ಕೊನೆಗೆ ನೀರಿನ ಹೊಂಡದ ಬಳಿ ಬಂದು ನೋಡಿದಾಗ ಹೊಂಡದ ದಡದಲ್ಲಿ ಬಟ್ಟೆ, ತಂಬಿಗೆ ಇರುವುದು ಕಂಡುಬಂದಿದೆ.
ಅನುಮಾನ ಬಂದು ಹೊಂಡದ ನೀರು ಖಾಲಿ ಮಾಡಿದರೆ ಹೊ೦ಂಡದಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಬಳಿಕ ದೇವದುರ್ಗ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ದಲಿತ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಪೊಲೀಸರು ಅಮಾನತು
“ಕಲ್ಮಲಾ-ದೇವದುರ್ಗ ರಸ್ತೆ ಕಾಮಗಾರಿಗಾಗಿ ತೋಡಿದ್ದ ಹೊಂಡವನ್ನು ಹಾಗೆಯೇ ಬಿಟ್ಟು ಅದರಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಅದನ್ನು ಮುಚ್ಚದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕಾರಣ ವಿದ್ಯಾರ್ಥಿಯ ಬಲಿಯಾಗಿದೆ” ಎಂದು ಗ್ರಾಮಸ್ಥರು ಆರೋಪಿಸಿದರು.
ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.